ಭಾರತದಲ್ಲಿ ಪ್ರತಿ ನಿಮಿಷಕ್ಕೆ ಎರಡು ಸಾವಿರ ಸೈಬರ್​ ದಾಳಿ; ಟಾಪ್​ 5ನಲ್ಲಿ ಬೆಂಗಳೂರಿಗೆಷ್ಟನೇ ಸ್ಥಾನ?

Cyber Attacks: ಭಾರತದ ನಾಲ್ಕು ಮಹಾ ನಗರಗಳಲ್ಲಿ ಸೈಬರ್​ ದಾಳಿ ಪ್ರಕರಣ ಹೆಚ್ಚಾಗಿ ಕಂಡುಬಂದಿದೆ.  ಇದರಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನ!

news18-kannada
Updated:September 5, 2019, 10:49 AM IST
ಭಾರತದಲ್ಲಿ ಪ್ರತಿ ನಿಮಿಷಕ್ಕೆ ಎರಡು ಸಾವಿರ ಸೈಬರ್​ ದಾಳಿ; ಟಾಪ್​ 5ನಲ್ಲಿ ಬೆಂಗಳೂರಿಗೆಷ್ಟನೇ ಸ್ಥಾನ?
ಸೈಬರ್​ ದಾಳಿ
  • Share this:
ಸೈಬರ್​ ದಾಳಿ ಬಗ್ಗೆ ನಿತ್ಯ ನಾವು ವರದಿಗಳನ್ನು ನೋಡುತ್ತಲೇ ಇರುತ್ತೇವೆ. ಇಂಥ ಪ್ರಕರಣಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ ಅದು ನಿಯಂತ್ರಣಕ್ಕೆ ಬಂದಿಲ್ಲ. ಈ ಮಧ್ಯೆ ಭಾರತದ ಸೈಬರ್​ ಸೆಕ್ಯುರಿಟಿ ಸಂಶೋಧನಾ​ ಸಂಸ್ಥೆ ಕ್ವಿಕ್​ ಹೀಲ್​ ವರದಿಯೊಂದು ಪ್ರಕಟಿಸಿದೆ. ಇದರಲ್ಲಿ ಸಾಕಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.

ಭಾರತದ ನಾಲ್ಕು ಮಹಾ ನಗರಗಳಲ್ಲಿ ಸೈಬರ್​ ದಾಳಿ ಪ್ರಕರಣ ಹೆಚ್ಚಾಗಿ ಕಂಡುಬಂದಿದೆ.  ಇದರಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನ! ಹೌದು, ಟಾಪ್​ ನಾಲ್ಕರಲ್ಲಿ ಮುಂಬೈ, ದೆಹಲಿ ಮೊದಲೆರಡು ಸ್ಥಾನದಲ್ಲಿದ್ದರೆ ಸಿಲಿಕಾನ್​ ಸಿಟಿಗೆ ಮೂರನೇ ಸ್ಥಾನ ದೊರಕಿದೆ. ಕೋಲ್ಕತ್ತಾ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯವಾರು ಪೈಕಿ ಮಹಾರಾಷ್ಟ್ರ, ಡೆಲ್ಲಿ, ಪಚ್ಚಿಮ ಬಂಗಾಳದಲ್ಲಿ  ಸೈಬರ್​ ದಾಳಿಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಭ್ರಷ್ಟರ ಬಂಧನವಾದರೆ ಯಾಕೆ ಮರುಗಬೇಕು? ಡಿಕೆಶಿ ಬಂಧನವನ್ನು ಸ್ವಾಗತಿಸಿದ ಎಸ್.ಆರ್. ಹಿರೇಮಠ, ರವಿ ಕೃಷ್ಣ ರೆಡ್ಡಿ

ಕಳೆದಬಾರಿ ಭಾರತದಲ್ಲಿ ವಿಂಡೋಸ್​ ಮತ್ತು ಆ್ಯಂಡ್ರಾಯ್ಡ್​ ಸಾಫ್ಟ್​ವೇರ್​ ವಿಭಾಗಗಳಲ್ಲಿ ಸೈಬರ್​ ದಾಳಿ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ. ವಿಂಡೋಸ್​ ಡಿವೈಸ್​ನಿಂದಾಗಿ 97.3 ಕೋಟಿ  ಸೈಬರ್​ ದಾಳಿ ಪ್ರಕರಣಗಳು ದಾಖಲಾಗಿವೆ. ನಿಮಿಷದ ಆಧಾರ ಮೇಲೆ ಒಂದು ವರ್ಷಕ್ಕೆ 1,853 ವಿಂಡೋಸ್​​ ಸಾಧನ​ಗಳ ಮೇಲೆ ಸೈಬರ್ ದಾಳಿಗಳು ನಡೆದಿವೆ. ಸಾಫ್ಟ್​ವೇರ್​ಗಳ ಮೂಲಕ ಹರಿಯ ಬಿಡುವ ಟ್ರೋಜನ್​ಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಭಾರತಕ್ಕೆ ದೊಡ್ಡ ಹಾನಿಯನ್ನುಂಟಾಗಿದೆ ಎಂದು ಹೇಳಿದೆ.

ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​​ಗಳಲ್ಲಿ ಡೌನ್​ಲೋಡ್​ ಮಾಡುವ ನಕಲಿ ಅಪ್ಲಿಕೇಷನ್​ಗಳ ಮೇಲೂ ಸೈಬರ್​ ದಾಳಿಗಳು ನಡೆದಿವೆ. ನಕಲಿ ಆ್ಯಪ್​ಗಳಿಂದ ಪ್ರತಿ ಮೂರು ನಿಮಿಷಕ್ಕೊಮ್ಮೆ ಸೈಬರ್​ ದಂಧೆ  ಎಂದು ವರದಿಯಲ್ಲಿ ಹೇಳಿದೆ

ಇನ್ನು ಕ್ವಿಕ್​ ಹೀಲ್​ ನೀಡಿರುವ ವರದಿ ಪ್ರಕಾರ ಗೂಗಲ್​ ಪ್ಲೇ ಸ್ಟೋರ್​ನಲ್ಲಿರುವ ನಕಲಿ ಆ್ಯಪ್​ಗಳಲ್ಲಿ ಅಳವಡಿಸಲಾಗುವ ಮಾಲ್​ವೇರ್ ಮತ್ತು ಆಡ್​ವೇರ್​ಗಳ ಮೂಲಕ  ​​ಕೂಡ ಬಳಕೆದಾರರ ಖಾಸಗಿ ಮಾಹಿತಿಯನ್ನು ಕಸಿದುಕೊಂಡ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಹೇಳಿದೆ.

First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ