ಸ್ಮಾರ್ಟ್ಫೋನ್ (Smartphone Market) ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿದೆ. ಇದು ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಾ ಬಿಡುಗಡೆಯಾಗುತ್ತಿದ್ದು, ಹಲವಾರು ಸ್ಮಾರ್ಟ್ಫೋನ್ಗಳು ಜನರ ಗಮನಸೆಳೆದಿವೆ. ಇದೀಗ ಇನ್ಫಿನಿಕ್ಸ್ (Infinix) ಭರವಸೆ ನೀಡಿದಂತೆಯೇ ಇದೀಗ ಭಾರತದಲ್ಲಿ ಅತ್ಯಾಧುನಿಕ ಸ್ಮಾರ್ಟ್ಫೋನ್ ಆದ ಜೀರೋ ಸರಣಿಯ ಜೀರೋ ಅಲ್ಟ್ರಾ (ZERO ULTRA) ಡಿವೈಸ್ ಅನ್ನು ಬಿಡುಗಡೆ ಮಾಡಿದೆ. 6.8-ಇಂಚಿನ 3D ಕರ್ವ್ಡ್ FHD+ 120Hz ಅಮೋಲೆಡ್ ಡಿಸ್ಪ್ಲೇ ಮತ್ತು 180W ವೇಗದ ಚಾರ್ಜಿಂಗ್ನೊಂದಿಗೆ ಭಾರತದ ಮೊದಲನೆಯ ಡಿವೈಸ್ ಅನ್ನು ಇನ್ಫಿನಿಕ್ಸ್ ಲಾಂಚ್ ಮಾಡಿದೆ.
ಹೌದು, ಇನ್ಫಿನಿಕ್ಸ್ ಸ್ಮಾರ್ಟ್ಫೋನ್ ಕಂಪನಿಯು ಈ ಹಿಂದೆಯೂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿ ಎಲ್ಲರನ್ನು ತನ್ನ ಉತ್ಪನ್ನದತ್ತ ಆಕರ್ಷಿಸಿತ್ತು. ಇದೀಗ 180 ವ್ಯಾಟ್ ವೇಗದಲ್ಲಿ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ ಹೊಸ 5ಜಿ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಇದರ ಕಂಪ್ಲೀಟ್ ಮಾಹಿತಿ ಈ ಕೆಳಗೆ ನೀಡಲಾಗಿದೆ.
180 ವ್ಯಾಟ್ ಥಂಡರ್ ಚಾರ್ಜ್
180ವ್ಯಾಟ್ ಥಂಡರ್ ಚಾರ್ಜ್ ತಂತ್ರಜ್ಞಾನವು ಫೋನ್ನಲ್ಲಿರುವ 4500mAh ಬ್ಯಾಟರಿಯನ್ನು 12 ನಿಮಿಷಗಳಲ್ಲಿ 1% ರಿಂದ 100% ವರೆಗೆ ಚಾರ್ಜ್ ಮಾಡಲು ಅವಕಾಶವನ್ನೊದಗಿಸಲಿದೆ. ಅಲ್ಟ್ರಾ 8C ಸೆಲ್ ಬ್ಯಾಟರಿಯು ಚಾರ್ಜಿಂಗ್ ಶಾಖವನ್ನು ಕಡಿಮೆ ಮಾಡುತ್ತದೆ ಮತ್ತು ಡಿವೈಸ್ನ ಬಾಳ್ವಿಕೆಯನ್ನು ಹೆಚ್ಚಿಸುತ್ತದೆ ಎಂದು ಇನ್ಫಿನಿಕ್ಸ್ ತಿಳಿಸಿದೆ.
ಇದನ್ನೂ ಓದಿ: ಇಲ್ಲಿದೆ ವಾಟ್ಸಪ್ ಹೊಸ ಫೀಚರ್ಸ್! ನೀವು ಈ ಆಯ್ಕೆ ಹೊಂದಿದ್ದೀರಾ ಗಮನಿಸಿ
ಡಿವೈಸ್ನಲ್ಲಿರುವ ಚಾರ್ಜಿಂಗ್ ವೈಶಿಷ್ಟ್ಯತೆಗಳು ಓವರ್ಲೋಡ್ ಹಾಗೂ ಡಿವೈಸ್ನ ಹೆಚ್ಚು ಬಿಸಿಯಾಗುವುದನ್ನು ತಪ್ಪಿಸುತ್ತದೆ. ಚಾರ್ಜರ್ನಲ್ಲಿರುವ GaN ತಂತ್ರಜ್ಞಾನವು 180ವ್ಯಾಟ್ ಥಂಡರ್ ಚಾರ್ಜ್ ಅನ್ನು ಹೆಚ್ಚಿನ ತಾಪಮಾನದೊಂದಿಗೆ ನಿರೋಧಕವಾಗಿಸುತ್ತದೆ. 111 ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಭದ್ರತಾ ರಕ್ಷಣೆಯೊಂದಿಗೆ ಫೋನ್ ಬಂದಿದ್ದು ಇದು ಡಿವೈಸ್, ಚಾರ್ಜರ್ ಹಾಗೂ ಚಾರ್ಜಿಂಗ್ ಕೇಬಲ್ಗಳನ್ನು ರಕ್ಷಿಸುತ್ತದೆ.
ಜೀರೋ ಅಲ್ಟ್ರಾ 20 ವಿಭಿನ್ನ ತಾಪಮಾನ ಪತ್ತೆಹಚ್ಚುವಿಕೆ ವಿಶೇಷತೆಗಳನ್ನು ಹೊಂದಿದ್ದು ಇದು ಡಿವೈಸ್ ಹಾಗೂ ಚಾರ್ಜಿಂಗ್ ಕೇಬಲ್ ಎರಡರ ರಕ್ಷಣೆಯನ್ನೂ ಮಾಡುತ್ತದೆ.
ಡಿವೈಸ್ ವಿನ್ಯಾಸ
ಕಾಸ್ಲೈಟ್ ಸಿಲ್ವರ್ ಬಣ್ಣವು 3ಡಿ ಗ್ಲಾಸ್ ರಚನೆಯ ವಿನ್ಯಾಸವನ್ನು ಹೊಂದಿದ್ದು ಆಹ್ಲಾದಕರವಾಗಿದ್ದು ಸುಂದರವಾಗಿದೆ. ಆಕರ್ಷಕವಾಗಿರುವ ಬಣ್ಣಗಳಲ್ಲಿ ಡಿವೈಸ್ ಸುಂದರವಾಗಿ ಮೂಡಿಬಂದಿದೆ. ಕಾಸ್ಲೈಟ್ ಸಿಲ್ವರ್ ಮತ್ತು ಜೆನಿಸಿಸ್ ನೋಯ್ರ್ ಬಣ್ಣಗಳಲ್ಲಿ ಡಿವೈಸ್ ಲಭ್ಯವಿದೆ.
ಡಿವೈಸ್ ವಿಶೇಷತೆ ಹಾಗೂ ಕ್ಯಾಮೆರಾ
ಡಿವೈಸ್ 5 ಜಿಬಿ ರ್ಯಾಮ್ ಹಾಗೂ 8 ಜಿಬಿ ರ್ಯಾಮ್ನೊಂದಿಗೆ ಬಂದಿದೆ ಹಾಗೂ ಫೋನ್ XOS 12 ಜೊತೆಗೆ ಆ್ಯಂಡ್ರಾಯ್ಡ್ 12 ಅನ್ನು ರನ್ ಮಾಡುತ್ತದೆ.
2 ವರ್ಷದ ಭದ್ರತಾ ಅಪ್ಡೇಟ್ಗಳನ್ನು ಡಿವೈಸ್ ನೀಡುತ್ತಿದ್ದು ಆಟೋ ಫೋಕಸ್ ಡಬಲ್ ಸೂಪರ್ PD ಜೊತೆಗೆ 200 ಎಮ್ಪಿ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ ಜೊತೆಗೆ 13 ಎಮ್ಪಿ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಎಮ್ಪಿ ಕ್ಯಾಮೆರಾವನ್ನು ಹೊಂದಿದೆ.
ಇನ್ಫಿನಿಕ್ಸ್ ಜೀರೋ ಅಲ್ಟ್ರಾ ವಿಶೇಷತೆಗಳು
ಇನ್ಫಿನಿಕ್ಸ್ ಜೀರೋ ಅಲ್ಟ್ರಾ ಕೋಸ್ಲೈಟ್ ಸಿಲ್ವರ್ ಮತ್ತು ಜೆನಿಸಿಸ್ ನೋಯ್ರ್ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಫ್ಲಿಪ್ಕಾರ್ಟ್ನಿಂದ ಡಿಸೆಂಬರ್ 25 ರಿಂದ ದೊರೆಯಲಿದ್ದು ಆರಂಭ ಬೆಲೆ ರೂ. 29,999 ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ