• Home
  • »
  • News
  • »
  • tech
  • »
  • Asus Zenbook Fold OLED: 17 ಇಂಚಿನ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಬಿಡುಗಡೆ!

Asus Zenbook Fold OLED: 17 ಇಂಚಿನ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಬಿಡುಗಡೆ!

ಆಸಸ್‌ ಫೋಲ್ಡೇಬಲ್‌ ಲ್ಯಾಪ್‌ಟಾಪ್

ಆಸಸ್‌ ಫೋಲ್ಡೇಬಲ್‌ ಲ್ಯಾಪ್‌ಟಾಪ್

ಈ ಆಸಸ್‌ ಕಂಪನಿ ಬಿಡುಗಡೆ ಮಾಡಿದ ಈ ಲ್ಯಾಪ್‌ಟಾಪ್‌ ಅನ್ನು ಖರೀದಿ ಮಾಡಿ ಮೊದಲು ಅನ್‌ಬಾಕ್ಸಿಂಗ್‌ ಮಾಡಿದ ಕೂಡಲೇ ಇದರ ಬೆಲೆಯ ಜೊತೆಗೆ ಇದರ ವೈಶಿಷ್ಟ್ಯತೆಗಳನ್ನು ತೋರಿಸಲಾಗುತ್ತದೆ. ಹಾಗಿದ್ರೆ ಇದರ ಬೆಲೆ, ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.

  • Share this:

    ಕೆಲವು ವರ್ಷಗಳಿಂದ ಈ ಲ್ಯಾಪ್‌ಟಾಪ್‌ಗಳಲ್ಲಿ (Laptop) ಬಹಳಷ್ಟು ಬದಲಾವಣೆಗಳನ್ನು ತರಬೇಕೆಂದು ದೊಡ್ಡ ದೊಡ್ಡ ತಂತ್ರಜ್ಞರುಗಳು ಮಾತನಾಡುತ್ತಿದ್ದರು. ಅದೇ ರೀತಿಯಲ್ಲಿ ಇದೀಗ ಆಸಸ್‌ ಕಂಪನಿಯಿಂದ (Asus Company) ಒಂದು ಫೋಲ್ಡೇಬಲ್‌ ಲ್ಯಾಪ್‌ಟಾಪ್‌ (Foldable Laptop) ಬಿಡುಗಡೆಯಾಗುತ್ತಿದೆ. ಇದನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ಫೋಲ್ಡ್‌ (Fold) ಮಾಡಿ ಬಳಸಬಹುದಾಗಿದೆ. ಆಸಸ್‌ ಬಿಡುಗಡೆ ಮಾಡುತ್ತಿರುವ ಲ್ಯಾಪ್‌ಟಾಪ್‌ನ ಹೆಸರು ಆಸಸ್‌ ಝೆನ್‌ಬುಕ್‌ 17  ಫೋಲ್ಡ್‌ ಒಲ್‌ಇಡಿ (Asus Zenbook 17 Fold OLED). ಈ ತಂತ್ರಜ್ಞಾನ ಹಲವಾರು ಫೀಚರ್ಸ್‌ (Features) ಅನ್ನು ಹೊಂದಿದೆ. ಜೊತೆಗೆ ಇದು ಮುಂದೆ ಬರುವಂತಹ ತಂತ್ರಜ್ಞಾನಗಳಿಗೆ ಒಂದು ಮಾದರಿಯ ಸಂಕೇತ ಎಂದು ಹೇಳಬಹುದು.


    ಈ ಆಸಸ್‌ ಕಂಪನಿ ಬಿಡುಗಡೆ ಮಾಡಿದ ಈ ಲ್ಯಾಪ್‌ಟಾಪ್‌ ಅನ್ನು ಖರೀದಿ ಮಾಡಿ ಮೊದಲು ಅನ್‌ಬಾಕ್ಸಿಂಗ್‌ ಮಾಡಿದ ಕೂಡಲೇ ಇದರ ಬೆಲೆಯ ಜೊತೆಗೆ ಇದರ ವೈಶಿಷ್ಟ್ಯತೆಗಳನ್ನು ತೋರಿಸಲಾಗುತ್ತದೆ. ಹಾಗಿದ್ರೆ ಇದರ ಬೆಲೆ, ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.


    ಆಸಸ್‌  ಝೆನ್‌ಬುಕ್‌ ಲ್ಯಾಪ್‌ಟಾಪ್‌ನ ಫೀಚರ್ಸ್:


    • ಝೆನ್‌ಬುಕ್ ಫೋಲ್ಡ್ ಅನ್ನು ಹಲವು ಬಾರಿ ಓಪನ್‌ ಮಾಡಬಹುದು ಮತ್ತು ಮುಚ್ಚಬಹುದಾಗಿದೆ.


    17 inch foldable laptop launched by Asus
    ಆಸಸ್‌ ಫೋಲ್ಡೇಬಲ್‌ ಲ್ಯಾಪ್‌ಟಾಪ್


    • ಡಿಸ್‌ಪ್ಲೇಯ ಸುತ್ತಲೂ ಸ್ವೈಪ್ ಮಾಡಿ ಮತ್ತು ಈ ಲ್ಯಾಪ್‌ಟಾಪ್‌ ಅನ್ನು ಟ್ಯಾಬ್‌ನಂತೆಯೂ ಬಳಸಬಹುದು.


    ಇದನ್ನೂ ಓದಿ:ಡಿಶ್​ ಟಿವಿ ಕಂಪನಿಯಿಂದ ಬರ್ತಿದೆ ಹೊಸ ಒಟಿಟಿ ಪ್ಲಾಟ್​ಫಾರ್ಮ್! ಕಡಿಮೆ ದುಡ್ಡಿಗೆ ಸಾಕಷ್ಟು ಸಿನಿಮಾಗಳು ಲಭ್ಯ!

    • ಯಾವುದಾದರು ಕೆಲಸಕಾರ್ಯಗಳಿಗೆ, ಸಂಭ್ರಮಗಳಿಗೆ ಹೋಗುವಾಗ ಸಾಮಾನ್ಯ ಲ್ಯಾಪ್‌ಟಾಪ್‌ನಂತೆ 12.5 ಇಂಚಿನಂತೆ ಮಾಡಿ ಕೆಲಸ ಮಾಡಬಹುದಾಗಿದೆ.

    •  17-ಇಂಚಿನ ಟಚ್ ಡಿಸ್ಪ್ಲೇ  ಅನ್ನು ಹೊಂದಿದೆ.

    • ಇದಲ್ಲದೆ ಇದು ತನ್ನ ಡಿಸ್‌ಪ್ಲೇಯ ಅರ್ಧದಷ್ಟು ಮಡಚಿಗೊಳ್ಳುತ್ತದೆ.

    • ಇನ್ನು ಇದು ನೀಡುವಂತಹ ಕೀಬೋರ್ಡ್‌ ಬ್ಲೂಟೂತ್‌ ಕನೆಕ್ಟೆಡ್‌ ಆಗಿರುತ್ತದೆ.


    ಆಸಸ್‌ ಝೆನ್‌ಬುಕ್‌ ಲ್ಯಾಪ್‌ಟಾಪ್‌ನ ವಿನ್ಯಾಸ:

    • ಝೆನ್‌ಬುಕ್ ಫೋಲ್ಡ್ ಒಂದು ಗುಣಮಟ್ಟದ ತಂತ್ರಜ್ಞಾನವಾಗಿದೆ.

    • ‌ಇನ್ನು ಈ ಸಾಧನ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ,

    • ಫೋಲ್ಡ್ ಲ್ಯಾಪ್‌ಟಾಪ್ ಫಾಕ್ಸ್ ಲೆದರ್ ಕವರ್‌ನೊಂದಿಗೆ ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ.


    17 inch foldable laptop launched by Asus
    ಆಸಸ್‌ ಫೋಲ್ಡೇಬಲ್‌ ಲ್ಯಾಪ್‌ಟಾಪ್


    • ಅದರ ವಿನ್ಯಾಸ ಮತ್ತು ಸೌಂದರ್ಯಕ್ಕೆ ಒಗ್ಗುವಂತೆ ಇದನ್ನು ಫೋಲ್ಡ್‌ ಮಾಡಿದಾಗ ಇದನ್ನು ಪುಸ್ತಕದಂತೆ ಕಾಣುವಂತೆ ವಿನ್ಯಾಸಗೊಳಿಸಿದ್ದಾರೆ.

    • . 1.5 ಕೆಜಿಯನ್ನು ಹೊಂದಿದ ಈ ಲ್ಯಾಪ್‌ಟಾಪ್ 14 ಇಂಚಿನ ಮ್ಯಾಕ್‌ಬುಕ್ ಪ್ರೊಗಿಂತ ಹಗುರವಾಗಿದೆ.

    •  ಆದರೆ ಕೀಬೋರ್ಡ್ ಅನ್ನು ಈ ಝೆನ್‌ಬುಕ್ ಫೋಲ್ಡ್‌ಗೆಇಟ್ಟಾಗ, ಇದು ಸ್ವಲ್ಪ ಮಟ್ಟಿಗೆ ಭಾರವಾಗುತ್ತದೆ.

    • Asus ಕೇವಲ ಎರಡು Thunderbolt 4 USB-C ಯನ್ನು ಹೊಂದಿದ್ದು ಜೊತೆಗೆ 3.5mm ಆಡಿಯೊ ಕಾಂಬೊ ಜ್ಯಾಕ್ ಅನ್ನು ಒಳಗೊಂಡಿದೆ. ವೆಬ್‌ಕ್ಯಾಮ್ ಅನ್ನು ಸಹ ಇದರಲ್ಲಿ ಆ್ಯಡ್ ಮಾಡಲಾಗಿದೆ.

    •  ಇದು 12 ನೇ-ತಲೆಮಾರಿನ ಇಂಟೆಲ್ ಕೋರ್ i7-1250U ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

    • ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.


    ಇದರ ಬ್ಯಾಟರಿ ಸಾಮರ್ಥ್ಯ:


    ಝೆನ್‌ಬುಕ್‌ ಫೋಲ್ಡ್‌ನಲ್ಲಿರುವ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 6 ರಿಂದ 7 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ.


    17 inch foldable laptop launched by Asus
    ಆಸಸ್‌ ಫೋಲ್ಡೇಬಲ್‌ ಲ್ಯಾಪ್‌ಟಾಪ್


    ಬೆಲೆ ಮತ್ತು ಲಭ್ಯತೆ


    ಆಸಸ್‌ ಜೆನ್‌ಬುಕ್‌ 17 ಫೋಲ್ಡ್ OLED ಲ್ಯಾಪ್‌ಟಾಪ್‌ ಭಾರತದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 329,990ರೂಪಾಯಿಯಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಕಳೆದ ಕೆಲವು ವಾರಗಳಿಂದ 2,84,290ರೂ. ಬೆಲೆಗೆ ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಿರುವುದನ್ನು ಕೂಡ ಇಲ್ಲಿ ಗಮನಿಸಬಹುದಾಗಿದೆ. ಇದರ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


    ಇದನ್ನೂ ಓದಿ: ಹೊಸ ಫೋನ್​ ಖರೀದಿಸಬೇಕೆ? ಇಲ್ಲಿವೆ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಮೊಬೈಲ್​ಗಳು


    ಇದು ಈ ಬಾರಿ ಆಸಸ್‌ ಪರಿಚಯಿಸುತ್ತಿರುವ ಹೊಸ ಲ್ಯಾಪ್‌ಟಾಪ್‌ ಆಗಿದ್ದು. ಗ್ರಾಹಕರನ್ನು ಬೇಗನೆ ಆಕರ್ಷಿಸಬಹುದು. ಜೊತೆಗೆ ಇದರ ಫೀಚರ್ಸ್‌ ಕೂಡ ಬಹಳ ಗುಣಮಟ್ಟದಲ್ಲಿದ್ದು ಗ್ರಾಹಕರಿಗೆ ಗೈಗೆಟಕುವ ಬೆಲೆಯಲ್ಲಿ ಲಭ್ಯವಿದೆ.

    Published by:Harshith AS
    First published: