HOME » NEWS » Tech » 16 MILLION ACCOUNTS OF INDIAN INSTAGRAM INFLUENCERS ARE FAKE SAYS STUDY HAS

Instagram: ಇನ್​​ಸ್ಟಾಗ್ರಾಂನಲ್ಲಿ ಭಾರತೀಯರ ನಕಲಿ ಖಾತೆಗಳು ಎಷ್ಟಿದೆ ಗೊತ್ತಾ?

Instagram: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಹೆಚ್ಚಾಗುತ್ತಿದ್ದು, ನಕಲಿ ಖಾತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ, ಭಾರತ ಮಾತ್ರವಲ್ಲದೆ, ಅಮೆರಿಕ, ಬ್ರೆಜಿಲ್​ನಲ್ಲೂ ಇನ್​ಸ್ಟ್ರಾಗ್ರಾಂ ನಕಲಿ ಖಾತೆಗಳಿರುವುದು ಪತ್ತೆಯಾಗಿದೆ.

Harshith AS | news18
Updated:July 18, 2019, 6:20 PM IST
Instagram: ಇನ್​​ಸ್ಟಾಗ್ರಾಂನಲ್ಲಿ ಭಾರತೀಯರ ನಕಲಿ ಖಾತೆಗಳು ಎಷ್ಟಿದೆ ಗೊತ್ತಾ?
ಇನ್​​ಸ್ಟಾಗ್ರಾಂ
  • News18
  • Last Updated: July 18, 2019, 6:20 PM IST
  • Share this:
ಫೇಸ್ಬುಕ್​ ಒಡೆತನದ ಇನ್​ಸ್ಟ್ರಾಂಗ್​ನಲ್ಲಿ 1.6 ಕೋಟಿಗೂ ಅಧಿಕ ಭಾರತೀಯರ ನಕಲಿ ಖಾತೆಗಳು ಪತ್ತೆಯಾಗಿದೆ. ಸ್ವೀಡನ್​ ದೇಶದ ಇ-ಕಾಮರ್ಸ್​ ಸ್ಟಾರ್ಟಪ್​  ಎ ಗುಡ್​ ಕಂಪನಿ ಮತ್ತು ಡಾಟಾ ಅನಾಲಿಟಿಕ್ಸ್​ ಸಂಸ್ಥೆ ಇನ್​​ಸ್ಟಾಗ್ರಾಂ ಖಾತೆಯ ಕುರಿತು ಅಧ್ಯಯನ ನಡೆಸಿ ನಕಲಿ ಖಾತೆಯನ್ನು ಪತ್ತೆಹಚ್ಚಿದೆ.  82 ರಾಷ್ಟ್ರಗಳ ಇನ್​ಸ್ಟಾಗ್ರಾಂ ಖಾತೆಗಳ ಕುರಿತು ಅಧ್ಯಯನ ನಡೆಸಿ, ಅವುಗಳಲ್ಲಿ 1.6 ಕೋಟಿ ಭಾರತೀಯರ ಹೆಸರಿನ ನಕಲಿಖಾತೆಗಳಿವೆ ಎಂದು ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಹೆಚ್ಚಾಗುತ್ತಿದ್ದು, ನಕಲಿ ಖಾತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ, ಭಾರತ ಮಾತ್ರವಲ್ಲದೆ, ಅಮೆರಿಕ, ಬ್ರೆಜಿಲ್​ನಲ್ಲೂ ಇನ್​ಸ್ಟ್ರಾಗ್ರಾಂ ನಕಲಿ ಖಾತೆಗಳಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಸಚಿನ್ ಸಾರ್ವಕಾಲಿಕ ದಾಖಲೆ: ರೋಹಿತ್-ವಾರ್ನರ್ ವಿಫಲ: ಎಲ್ಲರ ಚಿತ್ತ ವಿಲಿಯಮ್ಸನ್-ರೂಟ್​ರತ್ತ..!

ಇನ್ನು ನಕಲಿ ಖಾತೆಗಳ ಮೂಲಕ, ನಕಲಿ ಲೈಕ್ಸ್​, ಕಮೆಂಟ್ಸ್​ಗಳ ಮೂಲಕ ವಂಚನೆ ಎಸೆಗುತ್ತಿದೆ ಎಂದು ತಿಳಿದುಬಂದಿದೆ. ಕೆಲ ಕಂಪೆನಿಗಳು ಕೂಡ ಜಾಹೀರಾತು ಮತ್ತು ಫಾಲೊವರ್ಸ್​ಗಳನ್ನು ಹೆಚ್ಚಿಸುವ ಸಲುವಾಗಿ ನಕಲಿ ಖಾತೆಗಳನ್ನು ತೆರೆಯುತ್ತಿದ್ದಾರೆ.

ಕೆಲ ಸಂಸ್ಥೆಗಳು ಇನ್​ಸ್ಟಾಗ್ರಾಂನಲ್ಲಿ ನಕಲಿ ಖಾತೆಯನ್ನು ತೆರೆದು ನಕಲಿ ಲೈಕ್ಸ್​ ಮತ್ತು ಕಮೆಂಟ್ಸ್​ಗಳ ಮೂಲಕ ಹಣಗಳಿಸುತ್ತಿವೆ. ಇದಕ್ಕಾಗಿ ನಕಲಿ ಖಾತೆಗಳನ್ನು ತೆರೆಯಲಾಗುತ್ತಿದೆ ಎನ್ನಲಾಗಿದೆ.
First published: July 14, 2019, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories