ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷ ಬಂದಾಗುತ್ತೆ, 2022 ಕ್ಕೆ ವಿದಾಯ ಹೇಳುವ ಸಮಯ ಬರುತ್ತೆ. ಈ ಸಂದರ್ಭಗಳಲ್ಲಿ ಹಿಂದಿನ ದಿನಗಳ ಬಗ್ಗೆ ಸ್ವಲ್ಪ ಮೆಲುಕು ಹಾಕುವುದಾದರೆ ಮೊಬೈಲ್ ಮಾರುಕಟ್ಟೆಯ (Mobile Market) ಬಗ್ಗೆ ಸ್ವಲ್ಪ ಮಾತಾಡೋಣ. ಸಾಕಷ್ಟು ಸ್ಮಾರ್ಟ್ಫೋನ್ಗಳು (Smartphones) ಈ ವರ್ಷ ಬಿಡುಗಡೆಯಾಗಿವೆ. ಆದರೆ ಬಿಡುಗಡೆಯಾದಂತಹ ಎಲ್ಲಾ ಸ್ಮಾರ್ಟ್ಫೋನ್ಗಳು ಒಂದೊಂದು ಸ್ಪೆಷಲ್ ಫೀಚರ್ಸ್ (Speciol Features) ಅನ್ನು ಒಳಗೊಂಡಿದೆ. ಅದೇ ರೀತಿ ಈ ಬಾರಿ ಹೆಚ್ಚು ಬಜೆಟ್ನಿಂದ ಹಿಡಿದು ಕಡಿಮೆ ಬಜೆಟ್ನವರೆಗೂ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿವೆ. ಈ ವರ್ಷದ ಸ್ಮಾರ್ಟ್ಫೋನ್ಗಳ ಪೈಕಿ ಕೆಲವೇ ಕೆಲವು ಸ್ಮಾರ್ಟ್ಫೋನ್ಗಳು ಜನಪ್ರಿಯತೆಯನ್ನು ಪಡೆದಿವೆ. ಹಾಗಿದ್ರೆ ಈ ಬಾರಿ ಬಿಡುಗಡೆಯಾದಂತಹ 15 ಸಾವಿರದ ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಸ್ ಯಾವುದೆಲ್ಲಾ ಎಂಬುದನ್ನು ನಾವು ನಿಮಗೆ ತಿಳಿಸ್ತೀವಿ.
ಹೌದು ಸ್ಮಾರ್ಟ್ಫೋನ್ ಜಗತ್ತೇ ಒಂಥರಾ ಕಲರ್ಫುಲ್ ಆಗಿರುತ್ತೆ. ಏಕೆಂದರೆ ಇಲ್ಲಿ ಬಗೆಬಗೆಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಾ ಗ್ರಾಹಕರ ಗಮನಸೆಳೆಯುತ್ತಿರುತ್ತದೆ. ಅದೇ ರೀತಿ ಈ ವರ್ಷದ 15 ಸಾವಿರ ರೂಪಾಯಿಯೊಳಗಿನ ಬೆಸ್ಟ್ ಸ್ಮಾರ್ಟ್ಫೋನ್ಸ್ ಯಾವುದೆಲ್ಲಾ ಇದೆ ಎಂಬುದನ್ನು ನಾವು ನಿಮಗೆ ತಿಳಿಸ್ತೀವಿ.
ಈ ವರ್ಷ ಬಿಡುಗಡೆಯಾದಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್13 ಸ್ಮಾರ್ಟ್ಫೋನ್ 4ಜಿ ನೆಟ್ವರ್ಕ್ ಅನ್ನು ಹೊಂದಿದ್ದು 10,749 ರೂಪಾಯಯಿಗೆ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದು 6.6 ಇಂಚಿನ ಫುಲ್ ಹೆಚ್ಡಿ ಪ್ಲಸ್ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಎಕ್ಸಿನೋಸ್ 850 ಎಸ್ಒಸಿ ಪ್ರೊಸೆಸರ್ನಿಂದ ಈ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: 4 ಸಾವಿರ ರೂಪಾಯಿಯ ಸ್ಮಾರ್ಟ್ವಾಚ್ ಅನ್ನು ಕೇವಲ 999 ರೂಪಾಯಿಗೆ ಖರೀದಿಸಿ! ಇಲ್ಲಿದೆ ನೋಡಿ ಫೀಚರ್ಸ್
ಇನ್ನು ಇದರ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್13 ಸ್ಮಾರ್ಟ್ಫೊನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಐಕ್ಯೂ ಝಡ್6 ಲೈಟ್ 5ಜಿ:
ಐಕ್ಯೂ ಝಡ್6 ಲೈಟ್ ಸ್ಮಾರ್ಟ್ಫೋನ್ 5ಜಿ ಮೊಬೈಲ್ ಆಗಿದ್ದು ಮಾರುಕಟ್ಟೆಯಲ್ಲಿ ಇದರ ಬೆಲೆ 13, 999 ರೂಪಾಯಿಯಾಗಿದೆ. ಈ ಸ್ಮಾರ್ಟ್ಫೋನ್ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇದು 6.58 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ISOCELL JN1 ಸೆನ್ಸಾರ್ನಿಂದ ಕೂಡಿದೆ. ವಿಡಿಯೋ ಕಾಲ್ ಮತ್ತು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಜೊತೆಗೆ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ರಿಯಲ್ಮಿ 9ಐ 5ಜಿ ಸ್ಮಾರ್ಟ್ಫೋನ್:
ರಿಯಲ್ಮಿ 9ಐ ಸ್ಮಾರ್ಟ್ಫೊನ್ 6.6 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಒಳಗೊಂಡಿದ್ದು ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G SoC ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ- ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನಿಂದ ರಚಿಸಲಾಗಿದೆ.
ಇದರಲ್ಲಿರುವ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಅಪಾರ್ಚರ್ ಲೆನ್ಸ್, ಪೋರ್ಟ್ರೇಟ್ ಶೂಟರ್ ಹಾಗೂ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಸ್ಮಾರ್ಟ್ಫೊನ್ನಲ್ಲಿ ಸೇರಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯ ಜೊತೆಗೆ 18W ಕ್ವಿಕ್ ಚಾರ್ಜ್ ಫೀಚರ್ಸ್ ಅನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 14, 999 ರೂಪಾಯಿಗೆ ಖರೀದಿ ಮಾಡಬಹುದು.
ಪೋಕೋ ಎಮ್4 5ಜಿ:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ