Leaked Users Data: ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಮಾಡುತ್ತಿದೆ ಈ 14 ಆ್ಯಪ್​ಗಳು! ಎಚ್ಚರ!

ಸೈಬರ್‌ನ್ಯೂಸ್‌ನ ವರದಿಯ ಪ್ರಕಾರ, ಫೈರ್‌ಬೇಸ್​ನ‌ ತಪ್ಪಾದ ಕಾನ್ಫಿಗರೇಶನ್‌ನಿಂದಾಗಿ ಪ್ಲೇ ಸ್ಟೋರ್‌ನಲ್ಲಿದ್ದ 14 ಆಂಡ್ರಾಯ್ಡ್ ಆ್ಯಪ್‌ಗಳು ಬಳಕೆದಾರರ ಡೇಟಾವನ್ನು ಸೋರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Photo: Google

Photo: Google

  • Share this:
    ಆ್ಯಂಡ್ರಾಯ್ಡ್​ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ತಮಗೆ ಬೇಕೆನಿಸಿದ ಆ್ಯಪ್​ ಡೌನ್​ಲೋಡ್​ ಮಾಡುತ್ತಾರೆ. ಲಕ್ಷಾಂತರ ಆ್ಯಪ್‌ಗಳ ಇದರ ಮೂಲಕ ಉಚಿತವಾಗಿ ಡೌನ್​ಲೋಡ್​ ಮಾಡಿ ಬಳಸುತ್ತಾರೆ. ಆದರೆ ಕೆಲವೊಮ್ಮೆ ಪ್ಲೇ ಸ್ಟೋರ್​ನಲ್ಲಿ ನಕಲಿ, ಮಾಲ್​ವೇರ್​ ಇರುವ ಆ್ಯಪ್​ಗಳು ಸಂಶೋಧಕರ ಕಣ್ಣಿಗೆ ಬೀಳುತ್ತದೆ. ಅದನ್ನು ಪರಿಶೀಲಿಸಿದ ನಂತರ ಆ್ಯಪ್​ಗಳ ನಿಜಗುಣ ಬಯಲಾಗುತ್ತದೆ. ಕೆಲವು ಆ್ಯಪ್​ಗಳು ಬಳಕೆದಾರನ ಖಾಸಗಿ ಮಾಹಿತಿಯನ್ನು ಎಗರಿಸುವಲ್ಲಿ ತೊಡಗಿಸಿಕೊಂಡಿರುತ್ತದೆ. ಪ್ಲೇ ಸ್ಟೋರ್​ನಲ್ಲಿ ಸಾಕಷ್ಟು ಬಾರಿ ಮಾಲ್​ವೇರ್​ ಆ್ಯಪ್​ಗಳು ಸಿಕ್ಕಿದ್ದು ಗೂಗಲ್ ಅವುಗಳನ್ನು ಬ್ಯಾನ್​ ಮಾಡಿದ ಪ್ರಸಂಗವಿದೆ. ಅದರಂತೆ ಇದೀಗ ಡೇಟಾ ಸೋರಿಕೆ ಮಾಡುವ 14  ಆ್ಯಪ್​ಗಳು ಪತ್ತೆಯಾಗಿದ್ದು, ಗೂಗಲ್​ ತಕ್ಷಣವೇ ಪರಿಶೀಲಿಸಿ ಪ್ಲೇ ಸ್ಟೋರ್​ನಿಂದ ಕಿತ್ತೆಸೆದಿದೆ.

    ಸೈಬರ್‌ನ್ಯೂಸ್‌ನ ವರದಿಯ ಪ್ರಕಾರ, ಫೈರ್‌ಬೇಸ್​ನ‌ ತಪ್ಪಾದ ಕಾನ್ಫಿಗರೇಶನ್‌ನಿಂದಾಗಿ ಪ್ಲೇ ಸ್ಟೋರ್‌ನಲ್ಲಿದ್ದ 14 ಆಂಡ್ರಾಯ್ಡ್ ಆ್ಯಪ್‌ಗಳು ಬಳಕೆದಾರರ ಡೇಟಾವನ್ನು ಸೋರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಬಳಕೆದಾರನನ ಖಾಸಗಿ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗುವುದು ಪತ್ತೆಯಾಗಿದೆ.

    Google ಫೈರ್‌ಬೇಸ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸಿದೆ. ಇದರಿಂದ ಡೆವಲಪರ್‌ಗಳು ಹೆಚ್ಚಿನ ಶ್ರಮವಿಲ್ಲದೆ ತಮ್ಮ ಆ್ಯಪ್‌ಗಳಲ್ಲಿ ಹಲವಾರು ಸಾಮರ್ಥ್ಯಗಳನ್ನು ಸೇರಿಸಬಹುದು. ಈ ಆ್ಯಪ್‌ ಜನಪ್ರಿಯವಾಗಿದ್ದು, 140 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಪ್ಲೇ ಸ್ಟೋರ್‌ನಲ್ಲಿರುವ 55 ಅಪ್ಲಿಕೇಶನ್​ ವಿಭಾಗಗಳಲ್ಲಿ 1,100 ಅತ್ಯಂತ ಜನಪ್ರಿಯ ಆ್ಯಪ್‌ಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಇವುಗಳ ಡೀಫಾಲ್ಟ್ ಫೈರ್‌ಬೇಸ್ ವಿಳಾಸದ ಕುರುಹುಗಳಿಗಾಗಿ ಪ್ರತಿ ಆ್ಯಪ್ ಅನ್ನು ಡಿಕಂಪೈಲ್ ಮಾಡುವ ಮತ್ತು ಹುಡುಕುವ ಮೂಲಕ ವಿಶ್ಲೇಷಿಸಲಾಗಿದೆ.

    ಅಪ್ಲಿಕೇಶನ್‌ಗಳು ಫೈರ್‌ಬೇಸ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡದ ಕಾರಣ, ಬಳಕೆದಾರರ ಡೇಟಾ ಸೋರಿಕೆಯಾಗಬಹುದು ಎಂದು ವರದಿ ಹೇಳುತ್ತದೆ - ಖಾತೆಗಳಿಗೆ ಬಳಕೆದಾರ ಹೆಸರುಗಳು, ಇಮೇಲ್ ವಿಳಾಸಗಳು ಮತ್ತು ಬಳಕೆದಾರರ ನಿಜವಾದ ಹೆಸರು ಸೇರಿದಂತೆ. URL ಅನ್ನು ತಿಳಿದಿರುವ ಯಾರಾದರೂ ಈ ಡೇಟಾಬೇಸ್‌ಗಳನ್ನು ದೃಢೀಕರಣವಿಲ್ಲದೆ ಪ್ರವೇಶಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಆ್ಯಂಡ್ರಾಯ್ಡ್​ ಬಳಕೆದಾರ ಯೂನಿವರ್ಸಲ್ ಟಿವಿ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದ್ದರೆ, ಅದನ್ನು 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇನ್‌ಸ್ಟಾಲ್ ಮಾಡಿದ್ದಾರೆ, ನಿಮ್ಮ ವೈಯಕ್ತಿಕ ಡೇಟಾ ಸೋರಿಕೆಯಾಗಬಹುದು ಎಂದು ಸೈಬರ್​ನ್ಯೂಸ್​ ವರದಿ ಹೇಳಿದೆ.

    ಅಂತೆಯೇ, ಫೈಂಡ್ ಮೈ ಕಿಡ್ಸ್: ಚೈಲ್ಡ್ ಜಿಪಿಎಸ್ ವಾಚ್ ಆಪ್ ಮತ್ತು ಫೋನ್ ಟ್ರ್ಯಾಕರ್ 10 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಆದರೆ ತಪ್ಪು ಕಾನ್ಫಿಗರೇಶನ್‌ನಿಂದ ಪ್ರಭಾವಿತವಾಗಿದೆ ಎಂದು ಹೇಳಿದೆ.

    ಇದನ್ನು ಓದಿ: Robots: ಗ್ರೀಸ್‌ನ ಅಂಚೆ ಸೇವೆಯನ್ನು ದುಪ್ಪಟ್ಟು ವೇಗಗೊಳಿಸಿದ ಸ್ವಯಂಚಾಲಿತ ಮೊಬೈಲ್ ರೋಬೋಟ್‌ಗಳು

    ವರದಿಯ ಪ್ರಕಾರ. ಬಳಕೆದಾರರು ಹೈಬ್ರಿಡ್ ವಾರಿಯರ್: ಡಂಜನ್ ಆಫ್ ದಿ ಓವರ್‌ಲಾರ್ಡ್ ಮತ್ತು ರಿಮೋಟ್ ಫಾರ್ ರೋಕು ಆ್ಯಪ್​ಗಳ ಬಳಕೆಯ ಸಮಸ್ಯೆಗೆ ಕಾರಣವಾಗಬಹುದು ಎಂದಿದೆ
    First published: