Guinness World Record: ಒಂದೇ ಚಾರ್ಜ್​​ನಲ್ಲಿ 1,099 ಕಿಲೋ ಮೀಟರ್ ಕ್ರಮಿಸಿದ ಎಲೆಕ್ಟ್ರಿಕ್​ ಟ್ರಕ್​​!

ಒಂದು ಬಾರಿ ಮಾಡಿದ ಚಾರ್ಜ್​​ನಲ್ಲಿ​ ಡಿಪಿಡಿ ಎಲೆಕ್ಟ್ರಿಕ್​ ಟ್ರಕ್​  ಸುಮಾರು 1,099 ಕಿಲೋ ಮೀಟರ್​​ನಷ್ಟು ಕ್ರಮಿಸಿದೆ. ಆ ಮೂಲಕ ಅತಿ ಹೆಚ್ಚು ದೂರವನ್ನು ಕ್ರಮಿಸುವ ಎಲೆಕ್ಟ್ರಿಕ್​ ಟ್ರಕ್​ ಎಂಬ ದಾಖಲೆ ಅದರ ಮೇಲಿದೆ. 6 ತಿಂಗಳಿನಿಂದ ಈ ಟ್ರಕ್ ಅನ್ನು ಪ್ರಾದೇಶಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಇದೀಗ ಗಿನ್ನೆಸ್​ ಪುಟದಲ್ಲಿ ದಾಖಲೆ ಬರೆಯುವ ಮೂಲಕ ಸಾಧನೆ ಮಾಡಿದೆ.

ಡಿಪಿಡಿ ಎಲೆಕ್ಟ್ರಿಕ್​ ಟ್ರಕ್

ಡಿಪಿಡಿ ಎಲೆಕ್ಟ್ರಿಕ್​ ಟ್ರಕ್

 • Share this:
  Guinness World Records: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸದ್ದು ಜೋರಾಗಿದೆ. ಅದರ ಜೊತೆಗೆ ವಿವಿಧ ವಾಹನ ತಯಾರಿಕಾ ಕಂಪನಿಗಳು ಹಲವು ವಿಶೇಷತೆಗಳನ್ನು ಒಳಗೊಂಡ ಎಲೆಕ್ಟ್ರಿಕ್​ ವಾಹನಗಳನ್ನು ಸಿದ್ಧಪಡಿಸುತ್ತಿದೆ. ಸ್ಕೂಟರ್​, ಬೈಕ್ ಅಷ್ಟುಮಾತ್ರವಲ್ಲದೆ, ಎಲೆಕ್ಟ್ರಿಕ್​ ಟ್ರಕ್​ ಕೂಡ ಮಾರುಕಟ್ಟೆಗೆ ಧಾವಿಸುತ್ತಿದೆ. ಅದರಂತೆ ಎಕ್ಸ್​ಪ್ರೆಸ್​​ ಮತ್ತು ಸೇವಾ ಪೂರೈಕೆದಾರ ಡಿಪಿಟಿ ಸ್ವಿಜರ್​ಲ್ಯಾಂಡ್​ ಮೂಲದ ಇ-ಟ್ರಕ್​ ಇದೀಗ ಗಿನ್ನೆಸ್​ ದಾಖಲೆಯನ್ನು ಬರೆದಿದೆ.

  ಒಂದು ಬಾರಿ ಮಾಡಿದ ಚಾರ್ಜ್​​ನಲ್ಲಿ​ ಡಿಪಿಡಿ ಎಲೆಕ್ಟ್ರಿಕ್​ ಟ್ರಕ್​  ಸುಮಾರು 1,099 ಕಿಲೋ ಮೀಟರ್​​ನಷ್ಟು ಕ್ರಮಿಸಿದೆ. ಆ ಮೂಲಕ ಅತಿ ಹೆಚ್ಚು ದೂರವನ್ನು ಕ್ರಮಿಸುವ ಎಲೆಕ್ಟ್ರಿಕ್​ ಟ್ರಕ್​ ಎಂಬ ದಾಖಲೆ ಅದರ ಮೇಲಿದೆ. 6 ತಿಂಗಳಿನಿಂದ ಈ ಟ್ರಕ್ ಅನ್ನು ಪ್ರಾದೇಶಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಇದೀಗ ಗಿನ್ನೆಸ್​ ಪುಟದಲ್ಲಿ ದಾಖಲೆ ಬರೆಯುವ ಮೂಲಕ ಸಾಧನೆ ಮಾಡಿದೆ.

  ವೋಲ್ವೊ ಎಫ್​​ಎಚ್​​ ಅನ್ನು ಎಲೆಕ್ಟ್ರಿಕ್​ ಡ್ರೈವ್​ ಆಗಿ ಪರಿವರ್ತಿಸಿ ಡಿಪಿಡಿ ಸ್ವಿಟ್ಜರ್​ಲ್ಯಾಂಡ್​​​ ತಯಾರಿಸಲಾಗಿದೆ.  19 ಟನ್​ ಟ್ರಕ್​ ಇದಾಗಿದ್ದು, 680 ಬಿಎಚ್​ಪಿ ಮತ್ತು 680 ಕಿಲೋ ವ್ಯಾಟ್​ ಸಾಮರ್ಥ್ಯವನ್ನು ಹೊಂದಿದೆ. ಇದು ಯುರೋಪ್​ನ ಅತಿದೊಡ್ಡ ಟ್ರಕ್​ ಬ್ಯಾಟರಿಯಾಗಿ ಗಮನಸೆಳೆದಿದೆ ಎಂದು ಫ್ಯೂಚರಿಕಮ್​ ಬ್ರಾಂಡ್​ನ ಹಿಂದಿನ ಕಂಪನಿಯಾದ ಡಿಸೈನ್​ವರ್ಕ್​​ ಉತ್ಪನ್ನಗಳ ಸಿಇಒ ಅಡ್ರಿಯನ್​ ಮೆಲ್ಲಿಗರ್​ ವಿವರಿಸಿದರು.

  ಇದನ್ನು ಓದಿ⇒ Xiaomi Smartglass: ಕರೆ, ಮ್ಯಾಪ್, ಫೋಟೋ, ಆಡಿಯೋ​ ಎಲ್ಲವೂ ಗಾಗಲ್ಸ್​ನಲ್ಲೇ ಕಂಟ್ರೋಲ್​ ಮಾಡಬಹುದು..ಏನ್ ಗುರು ಟೆಕ್ನಾಲಜಿ!

  ಎಲೆಕ್ಟ್ರಿಕ್ ಟ್ರಕ್​ ಅನ್ನು ಹ್ಯಾನೋವರ್ ಬಳಿಯ ಕಾಂಟಿನೆಂಟಲ್‌ನ ಆಂತರಿಕ ಪರೀಕ್ಷಾ ಕೇಂದ್ರವಾದ ಕಾಂಟಿಡ್ರೋಮ್‌ನಲ್ಲಿ ಚಲಾಯಿಸಲಾಯಿತು. 2.8 ಕಿಮೀ ವೇಗದ ಓವಲ್ ಟ್ರ್ಯಾಕ್ ಸುತ್ತಲೂ ಟ್ರಕ್ ಓಡಿಸಲಾಯಿತು. ಇಬ್ಬರು ಚಾಲಕರು ಟ್ರ್ಯಾಕ್‌ನ 392 ಲ್ಯಾಪ್‌ಗಳನ್ನು 4.5 ಗಂಟೆಗಳ ಶಿಫ್ಟ್‌ಗಳಲ್ಲಿ ಪೂರ್ಣಗೊಳಿಸಿದರು, ಪ್ರತಿಯೊಂದೂ ಸರಾಸರಿ 50 ಕಿಮೀ/ಗಂ ವೇಗವನ್ನು ತಲುಪಿದೆ, ಇದು ದೈನಂದಿನ ಚಾಲನೆಯ ಸಮಯದಲ್ಲಿ ವಾಸ್ತವಿಕ ವೇಗವಾಗಿದ್ದು, ಒಟ್ಟು 23 ಗಂಟೆಗಳಲ್ಲಿ ಕ್ರಮಿಸಿದೆ.  "ನಾವು ಆರಂಭಿಕ ಹಂತದಲ್ಲಿ ಎಲೆಕ್ಟ್ರಿಕ್​ಗಾಗಿ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ. ಫ್ಯೂಚರಿಕಮ್ ಟ್ರಕ್ ಬಾಸೆಲ್​ಗೆ ಸುಮಾರು ಆರು ತಿಂಗಳಿನಿಂದ ಪ್ರಯಾಣಿಸುತ್ತಿದೆ ಎಂದು ಡಿಪಿಡಿ ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಯತಂತ್ರ ಮತ್ತು ನಾವೀನ್ಯತೆ ನಿರ್ದೇಶಕ ಮಾರ್ಕ್ ಫ್ರಾಂಕ್ ಹೇಳಿದರು.

  "ಇ-ಟ್ರಕ್​ನಲ್ಲಿ ಯಾವುದೇ ತೊಂದರೆಗಳಿಲ್ಲದೆ ಪ್ರತಿದಿನ ಸರಿಸುಮಾರು 300 ಕಿ.ಮೀ. ಕ್ರಮಿಸುತ್ತದೆ. ಹಾಗಾಗಿ ನಾವು ನಮ್ಮ ಕಾರ್ಯಕ್ಷಮತೆಯ ಮಟ್ಟವನ್ನು ಅಧಿಕೃತವಾಗಿ ದಾಖಲಿಸಲು ಸಾಧ್ಯವಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ” ಮಾರ್ಕ್ ಫ್ರಾಂಕ್ ಎಂದರು
  Published by:Harshith AS
  First published: