ಕೇವಲ ಅರ್ಧ ಸೆಕಂಡ್​ನಲ್ಲಿ 100 HD ಸಿನಿಮಾ ಡೌನ್​ಲೋಡ್; ಅತಿ ವೇಗದ ಇಂಟರ್​ನೆಟ್​ ಕಂಡುಹಿಡಿದ ವಿಜ್ಞಾನಿಗಳು

ಇನ್ನು ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿರುವವರ ಸಂಕಟ ಮಾತ್ರ ಹೇಳತೀರದು. ಅತ್ತ ಕಡೆ ಇಂಟರ್​ನೆಟ್​ ಸಮಸ್ಯೆಯಾದರೆ ಇತ್ತ ಕಡೆ ಮುಗಿಯದಷ್ಟು ಕೆಲಸ. ಇದರ ನಡುವೆ ಕೆಲಸ ಪೂರ್ಣಗೊಳಿಸುವ ಚಿಂತೆ. ಇಷ್ಟೆಲ್ಲಾ ಇಂಟರ್​ನೆಟ್​ ಸಮಸ್ಯೆಗಳಿಗೆ ಮುಕ್ತಿ ನೀಡಲು ಸಂಶೋಧನೆ ಮಾಡಲಾಗಿದೆ. ಇದು ವಿಶ್ವದ ಅತಿ ವೇಗದ ಇಂಟರ್​ನೆಟ್​​ ಎಂಬ ದಾಖಲೆಯನ್ನು ಬರೆದಿದೆ!

news18-kannada
Updated:May 24, 2020, 7:27 AM IST
ಕೇವಲ ಅರ್ಧ ಸೆಕಂಡ್​ನಲ್ಲಿ 100 HD ಸಿನಿಮಾ ಡೌನ್​ಲೋಡ್; ಅತಿ ವೇಗದ ಇಂಟರ್​ನೆಟ್​ ಕಂಡುಹಿಡಿದ ವಿಜ್ಞಾನಿಗಳು
ಪ್ರಾತಿನಿಧಿಕ ಚಿತ್ರ
  • Share this:
ಇಂದು 4G ನೆಟ್​ವರ್ಕ್​ ಬಳಕೆ ಮಾಡಿದರು ಇಂಟರ್​ನೆಟ್​ ಮಾತ್ರ ಸ್ಲೋ!. ಇಮೇಜ್​ ಅಪ್ಲೋಡ್​ ಮಾಡಲು, ವಿಡಿಯೋ ಡೌನ್​ಲೋಡ್ ಆಡಲು ಕನಿಷ್ಠವೆಂದರೆ 5 ನಿಮಿಷ ತೆಗೆದುಕೊಳ್ಳುತ್ತದೆ. ಹಾಗಾಗಿ ಮುಂಬರುವ 5G ಇಂಟರ್​ನೆಟ್​ಗಾಗಿ ಜನರು ಕಾದು ಕುಳಿತ್ತಿದ್ದಾರೆ.

ಇನ್ನು ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿರುವವರ ಸಂಕಟ ಮಾತ್ರ ಹೇಳತೀರದು. ಅತ್ತ ಕಡೆ ಇಂಟರ್​ನೆಟ್​ ಸಮಸ್ಯೆಯಾದರೆ ಇತ್ತ ಕಡೆ ಮುಗಿಯದಷ್ಟು ಕೆಲಸ. ಇದರ ನಡುವೆ ಕೆಲಸ ಪೂರ್ಣಗೊಳಿಸುವ ಚಿಂತೆ. ಇಷ್ಟೆಲ್ಲಾ ಇಂಟರ್​ನೆಟ್​ ಸಮಸ್ಯೆಗಳಿಗೆ ಮುಕ್ತಿ ನೀಡಲು ಸಂಶೋಧನೆ ಮಾಡಲಾಗಿದೆ. ಇದು ವಿಶ್ವದ ಅತಿ ವೇಗದ ಇಂಟರ್​ನೆಟ್​​ ಎಂಬ ದಾಖಲೆಯನ್ನು ಬರೆದಿದೆ!

ಆಸ್ಟ್ರೇಲಿಯಾದ ಆರ್​ಎಮ್​ಐಟಿ, ಮೋನಾಶ್​​ ಹಾಗೂ ಸ್ವೇನ್​​​ಬರ್ನ್​ ವಿಶ್ವವಿದ್ಯಾಲಯ ಹೊಸ ಸಂಶೋಧನೆ ನಡೆಸಿ ವೇಗದ ಇಂಟರ್​ನೆಟ್​ ಅನ್ನು ಕಂಡುಹಿಡಿದಿದೆ. ಇದರಲ್ಲಿ 100 ಹೆಚ್​ಡಿ ಸಿನಿಮಾವನ್ನು ಅರ್ಧ ಸೆಕೆಂಡಿನಲ್ಲಿ ಡೌನ್​​ಲೋಡ್​ ಮಾಡಬಹುದಾಗಿದೆ.

ಇಂದು ವೇಗದ ಇಂಟರ್​ನೆಟ್​ ನೀಡಲು ಹಲವು ದೇಶಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ. ಈ ನಡುವೆ ಆಸ್ಟ್ರೇಲಿಯಾ ಅತ್ಯಂತ ವೇಗದ ಇಂಟರ್​​ ಅನ್ನು ಸಂಶೋಧಿಸಿದೆ. ಮೋನಾಶ್​​ ವಿಶ್ವವಿದ್ಯಾಲಯದ ಪ್ರೊಫೆಸರ್​​ ಬಿಲ್​ಕೊರ್​ಕೊರನ್​​ ಹಾಗೂ ಆರ್​​ಎಮ್​​ಐಟಿ ವಿಶ್ವವಿದ್ಯಾಲಯದ ಅರ್ನನ್​​​ ಮಿಚೆಲ್​ ಈ ಹೊಸ ದಾಖಲೆಯನ್ನ ಮಾಡಿದವರು.

ಇದನ್ನೂ ಓದಿ : BattRE ಕಂಪೆನಿಯಿಂದ ಇಂಟರ್​ನೆಟ್​ ಸೌಲಭ್ಯವಿರುವ ಇ-ಸ್ಕೂಟರ್​​!; ಕಡಿಮೆ ಬೆಲೆ ಅತ್ಯುತ್ತಮ ಫೀಚರ್​

ವಿಶೇಷವೆಂದರೆ  ಈ ಇಂಟರ್​ನೆಟ್​​ ಪ್ರತಿ ಸೆಕೆಂಡ್​ಗೆ 44.2 ಟೆರಾಬೈಟ್​​ ಸ್ಟೀಡ್​ ಹೊಂದಿದೆ. ಸದ್ಯ ಆಫ್ಟಿಕಲ್​ ಫೈಬರ್ ಲಿಂಕ್​ ಮೂಲಕ ಇಂಟರ್​ನೆಟ್​ ಸೇವೆ ಒದಗಿಸುತ್ತಿದೆ.
 
First published: May 24, 2020, 7:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading