ಗ್ಯಾಜೆಟ್ಗಳು (Gadgets) ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಆದರೆ ಇತ್ತೀಚೆಗೆ ಈ ಸ್ಮಾರ್ಟ್ ಗ್ಯಾಜೆಟ್ಗಳನ್ನೂ ಬಳಸದೇ ಇರದವರೇ ಇಲ್ಲ. ಅದ್ರಲ್ಲೂ ಕಂಪನಿಗಳನ್ನು ದಿನಕ್ಕೊಂದರಂತೆ ಹೊಸ ಹೊಸ ಗ್ಯಾಜೆಟ್ಗಳನ್ನು ಪರಿಚಯಿಸುತ್ತಾ ಇರುತ್ತದೆ. ಯಾವುದೇ ಮೊಬೈಲ್ (Mobile) ಖರೀದಿ ಮಾಡಬೆಕಾದರೂ ಮೊದಲು ನೋಡುವುದು ಅದರೆ ಬ್ಯಾಟರಿ ಗುಣಮಟ್ಟ ಹೇಗಿದೆ ಎಂದು. ನಂತರ ತಮಗೆ ಬೇಕಾದ ಸ್ಮಾರ್ಟ್ಫೋನ್ಗಳನ್ನು ಖರೀದಿಸುತ್ತಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಕೆಲವು ಮೊಬೈಲ್ ಕಂಪನಿಗಳು ಕೂಡ ಇತ್ತೀಚೆಗೆ ಗುಣಮಟ್ಟದ ಬ್ಯಾಕಪ್ ಹೊಂದಿದ ಬ್ಯಾಟರಿಯನ್ನೇ ಬಿಡುಗಡೆಯಾಗುವ ಮೊಬೈಲ್ಗಳಲ್ಲಿ ಅಳವಡಿಸುತ್ತಿದೆ. ಇದೀಗ ಒನ್ಪ್ಲಸ್ ಕಂಪನಿಯೊಂದು (Oneplus Company) ಗ್ಯಾಜೆಟ್ ಪ್ರಿಯರಿಗಾಗಿ ಹೊಸ ಫಾಸ್ಟ್ ಚಾರ್ಜರ್ (Fast Charger) ಒಂದನ್ನು ಪರಿಚಯಿಸಿದೆ.
ಹೌದು, ಒನ್ಪ್ಲಸ್ ಕಂಪನಿ ಫಾಸ್ಟೆಸ್ಟ್ ಚಾರ್ಜರ್ ಅನ್ನು ಲಾಂಚ್ ಮಾಡಲು ಸಿದ್ಧತೆ ಮಾಡುತ್ತಿದೆ. ಇದುವರೆಗೆ ಹಲವಾರು ಚಾರ್ಜರ್ಗಳು ಬಿಡುಗಡೆಯಾಗಿದೆ. ಆದರೆ ಇದು ಬಹಳಷ್ಟು ವೇಗದ ಚಾರ್ಜರ್ ಆಗಿದ್ದು, ಕೇವಲ 25 ನಿಮಿಷದಲ್ಲಿ ನಿಮ್ಮ ಮೊಬೈಲ್ ಅನ್ನು ಫುಲ್ ಚಾರ್ಜ್ ಮಾಡುತ್ತೆ. ಇನ್ನು ಹಲವಾರು ಫೀಚರ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಏನೆಲ್ಲಾ ಇದೆ ಎಂಬುದು ಇಲ್ಲಿದೆ ಮಾಹಿತಿ.
ಒನ್ಪ್ಲಸ್ ಕಂಪನಿಯ ಮೊದಲ ಚಾರ್ಜರ್
ಒನ್ಪ್ಲಸ್ ಕಂಪನಿಯಿಂದ ಮೊದಲ ಬಾರಿಗೆ ಈ 100W ಡ್ಯುಯಲ್ ಪೋರ್ಟ್ ಸೂಪರ್ ಫ್ಲಾಶ್ ಚಾರ್ಜರ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಚಾರ್ಜರ್ 65 ವ್ಯಾಟ್ ವರೆಗೆ ಪಿಡಿ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಒನ್ಪ್ಲಸ್ನ ಈ ಹೊಸ ಚಾರ್ಜರ್ ಡ್ಯುಯಲ್ ಯುಎಸ್ಬಿ ಎ ಹಾಗೂ ಟೈಪ್ ಸಿ ಚಾರ್ಜಿಂಗ್ ಆಯ್ಕೆಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮೊಬೈಲ್ ರೀಚಾರ್ಜ್ ಖಾಲಿಯಾಗಿದ್ಯಾ? ಇಲ್ಲಿದೆ 2023ರ ಬೆಸ್ಟ್ ಪ್ಲ್ಯಾನ್ಸ್!
ಒಂದೇ ಸಮಯದಲ್ಲಿ 2 ಮೊಬೈಲ್ಗಳನ್ನು ಚಾರ್ಜ್ ಮಾಡ್ಬಹುದು
ಒನ್ಪ್ಲಸ್ ಬಿಡುಗಡೆ ಮಾಡುತ್ತಿರುವ ಈ ಹೊಸ ಚಾರ್ಜಿಂಗ್ ದಿವೈಸ್ನ ಸ್ಪೆಷಲ್ ಫೀಚರ್ ಏನೆಂದರೆ ಈ ಚಾರ್ಜರ್ ಮೂಲಕ ಏಕಕಾಲದಲ್ಲಿ 2 ಡಿವೈಸ್ಗಳನ್ನು ಚಾರ್ಜ್ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಮೊಬೈಲ್, ಇಯರ್ಬಡ್ಸ್ ಈ ರೀತಿಯಾ ಯಾವುದೇ ಸಾಧನಗಳನ್ನು ಈ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಒನ್ಪ್ಲಸ್ 11 ಸ್ಮಾರ್ಟ್ಫೋನ್ಗೆ ಉತ್ತಮ
ಈ ಸೂಪರ್ ಫಾಸ್ಟ್ ಚಾರ್ಜರ್ ನಿಮಿಷಗಳ ಲೆಕ್ಕದಲ್ಲಿ ನಿಮ್ಮ ಡಿವೈಸ್ಗಳನ್ನು ಚಾರ್ಜ್ ಮಾಡುತ್ತದೆ. ಅದರಲ್ಲೂ ಮುಂದೆ ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ಒನ್ಪ್ಲಸ್ 11 ಅನ್ನು ಗುರಿಯಾಗಿಸಿಕೊಂಡು ಈ ಡಿವೈಸ್ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಒನ್ಪ್ಲಸ್ 11 ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಲಿದೆ ಎಂದು ಹೇಲಲಾಗುತ್ತಿದೆ. ಅದಕ್ಕಾಗಿ ಈ ಚಾರ್ಜರ್ ಬಹಳಷ್ಟು ಸಹಕಾರಿಯಾಗಲಿದೆ ಎಮದು ಕೆಲ ವರದಿಯಲ್ಲಿ ಹೇಳಲಾಗಿದೆ.
25 ನಿಮಿಷದಲ್ಲಿ ಫುಲ್ ಚಾರ್ಜ್ ಮಾಡುತ್ತೆ.
ಒನ್ಪ್ಲಸ್ ಬಿಡುಗಡೆ ಮಾಡುತ್ತಿರುವ ಈ 100 ವ್ಯಾಟ್ ಚಾರ್ಜರ್ ಅನ್ನು ಕೇವಲ 25 ನಿಮಿಷದಲ್ಲಿ ನಿಮ್ಮ ಮೊಬೈಲ್ ಅನ್ನು ಫುಲ್ ಚಾರ್ಜ್ ಆಗುವಂತೆ ಮಾಡುತ್ತೆ. ಅಂದರೆ ಕೇವಲ 10 ನಿಮಿಷದಲ್ಲಿ ನಿಮ್ಮ ಮೊಬೈಲ್ 50 ಶೇಕಡಾದಷ್ಟು ಚಾರ್ಜ್ ಆಗುತ್ತೆ. ಕೆಲವೊಂದು ಬಾರಿ ನಮಗೆ ಅಗತ್ಯವಿರುವಾಗ ಸ್ಮಾರ್ಟ್ಫೋನ್ನಲ್ಲಿ ಚಾರ್ಜೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಚಾರ್ಜರ್ ಬಹಳಷ್ಟು ಉಪಕಾರಿಯಾಗುತ್ತದೆ ಎಮದು ಹೇಳ್ಬಹುದು.
ಒನ್ಪ್ಲಸ್ 11 ಸ್ಮಾರ್ಟ್ಫೋನ್ಗೆ ಬೆಂಬಲಿಸುವ ಮೊದಲ ಚಾರ್ಜರ್
ಇನ್ನು ಒನ್ಪ್ಲಸ್ 11 ದೀರ್ಘ ಸಾಮರ್ಥ್ಯ ಬ್ಯಾಟರಿ ಇರುವ ಸ್ಮಾರ್ಟ್ಫೋನ್ ಆಗಿರಲಿದ್ದು, ಈ ಹೊಸ ಚಾರ್ಜರ್ ಬೆಂಬಲಿಸುವ ಮೊದಲ ಸ್ಮಾರ್ಟ್ಫೋನ್ ಆಗಿರಲಿದೆ . ಈ ಫೋನ್ 13 ಸೆನ್ಸಾರ್ ಮತ್ತು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿ ನಿರ್ವಹಣೆ ಚಿಪ್ ಮೂಲಕ ಇದು ಕಾರ್ಯನಿರ್ವಹಿಸಲಿದ್ದು, ಬ್ಯಾಟರಿಯ ರಕ್ಷಣೆಯ ಬಗ್ಗೆ ಈ ಕಂಪನಿ ಯಾವತ್ತಿಗೂ ಶ್ರಮಿಸುತ್ತಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ