ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Company). ಆದರೆ ಈ ಕಂಪೆನಿಗಳು ಬಳಕೆದಾರರಿಗಾಗಿ 10 ಅಂಕಿಯ ನಂಬರ್ಗಳನ್ನು ನೀಡಿರುತ್ತದೆ. ಸಾಮಾನ್ಯವಾಗಿ ಮೊಬೈಲ್ ಬಳಕೆದಾರರಿಗೆ ವಿವಿಧ ಬಗೆಯ ಜಾಹೀರಾತು ಕುರಿತಾದ ಕರೆಗಳು ಮತ್ತು ಮೆಸೇಜ್‌ಗಳು ಬರುತ್ತವೆ. ಈ ರೀತಿ ಅನಗತ್ಯ ಮತ್ತು ಪ್ರಚಾರದ ಕರೆಗಳು ಮತ್ತು ಮೆಸೇಜ್‌ಗಳಿಂದ ಬಳಕೆದಾರರು ತೊಂದರೆಗೊಳಗಾಗುತ್ತಾರೆ. ಹೀಗೆ ಅನಗತ್ಯವಾದ ಕರೆ ಹಾಗೂ ಮೆಸೇಜ್‌ಗಳ ಕಿರಿ ಕಿರಿಯನ್ನು ತಪ್ಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ (Telemarketing Companies) ಶಾಕ್ ನೀಡಿದೆ. ಈ ಮೂಲಕ ಕಂಪೆನಿಗಳು ಟ್ರಾಯ್ (TRAI) ನಿಯಮ ಮೀರಿದರೆ, 10 ಅಂಕಿಗಳ ಆಯ್ದ ಮೊಬೈಲ್ ಸಂಖ್ಯೆಯನ್ನು ಸ್ಥಗಿತಗೊಳಿಸಲು ಟ್ರಾಯ್ ನಿರ್ಧರಿಸಿದೆ.
ಈ ಟೆಲಿಕಾಂ ಕಂಪೆನಿಗಳು, ಟೆಲಿ ಮಾರ್ಕೆಟಿಂಗ್ ಕಂಪೆನಿಗಳು ಬಳಕೆದಾರರಿಗೆ ಹಗಲು ರಾತ್ರಿಯೆನ್ನದೆ ಬಳಕೆದಾರರಿಗೆ ಕಾಲ್ ಅಥವಾ ಮೆಸೇಜ್ಗಳನ್ನು ಮಾಡುತ್ತಿರುತ್ತದೆ. ಇದರಿಂದ ಬಳಕೆದಾರರಿಗೆ ಬಹಳಷ್ಟು ಕಿರಿಕಿರಿ ಉಂಟು ಮಾಡುವುದನ್ನು ಅರಿತ ಟ್ರಾಯ್ ಸಂಸ್ಥೆ, ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
10 ಅಂಕಿಗಳ ಸಂಖ್ಯೆ ಸ್ಥಗಿತ
ಇನ್ನು ಟ್ರಾಯ್ ಸಂಸ್ಥೆ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಜಾಹೀರಾತಿಗಾಗಿ ಕರೆ, ಮೆಸೇಜ್ ಮಾಡುವಂತಹ ಕಂಪೆನಿಗಳಿಗೆ, ಟೆಲಿ ಮಾರ್ಕೆಟಿಂಗ್ ಮಾಡುವ ಕಂಪೆನಿಗಳಿಗೆ ಟೆಲಿಕಾಂ ಕಂಪೆನಿಗಳಿಂದ ವಿಶೇಷ ಸಂಖ್ಯೆಯನ್ನು ನೀಡಲಾಗಿರುತ್ತದೆ. ಅಂತಹ ಸಂಖ್ಯೆಗಳಿಂದ ಕರೆಗಳು ಅಥವಾ ಮೆಸೇಜ್‌ಗಳು ಬಂದಾಗ, ಅದು ಪ್ರಚಾರದ ಕರೆ ಅಥವಾ ಎಸ್‌ಎಮ್‌ಎಸ್ ಎಂದು ಬಳಕೆದಾರರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, ಕೆಲವು ಸಂಸ್ಥೆಗಳು ನಿಯಮಗಳನ್ನು ನಿರ್ಲಕ್ಷಿಸಿ 10 ಅಂಕಿಗಳ ಸಾಮಾನ್ಯ ಮೊಬೈಲ್ ಸಂಖ್ಯೆ ಬಳಿಸಿ ಪ್ರಚಾರದ ಕರೆಗಳು ಅಥವಾ ಮೆಸೇಜ್ ಮಾಡುತ್ತವೆ. ಇದಕ್ಕಾಗಿ ಟ್ರಾಯ್ ಈ ನಿರ್ಧಾರವನ್ನು ಕೈಗೊಂಡಿದೆ.
ಇದನ್ನೂ ಓದಿ: ಒನ್ಪ್ಲಸ್ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್ಫೋನ್ನ ಪ್ರೀಬುಕಿಂಗ್ ಆರಂಭ! ಫೀಚರ್ಸ್ ನೋಡಿದ್ರೆ ಖರೀದಿಸೋದು ಗ್ಯಾರಂಟಿ
ಟ್ರಾಯ್ನಿಂದ ಕಠಿಣವಾದ ನಿಯಮ
ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೇಜ್‌ಗಳ ಬಗ್ಗೆ ಟ್ರಾಯ್ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಬಳಕೆದಾರರಿಗೆ ಅನಗತ್ಯ ಕಿರಿ ಕಿರಿ ನೀಡುವ ಟೆಲಿಮಾರ್ಕೆಟಿಂಗ್ ಪ್ರಚಾರದ ಕರೆಗಳ ಹಾಗೂ ಎಸ್‌ಎಮ್‌ಎಸ್‌ಗಳ ಕಾಟ ತಪ್ಪಿಸುವ ಉದ್ದೇಶದಿಂದ ಟ್ರಾಯ್ ನಿಂದ ಹೊಸ ನಿರ್ಧಾರ ಜಾರಿಗೆ ಬರಲಿದೆ. ಇದೀಗ ಟ್ರಾಯ್ ಆದೇಶವನ್ನು ಹೊರಡಿಸಿದ್ದು, ಆದೇಶದ ಪ್ರಕಾರ ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಟೆಲಿಕಾಂ ರೆಗ್ಯುಲೇಟರಿ ಸಂಸ್ಥೆಯು 30 ದಿನಗಳ ಕಾಲಾವಕಾಶ ನೀಡಿದೆ.
ನಿಯಮ ಮೀರಿದರೆ ಕಠಿಣ ಕ್ರಮ
ಯಾವುದೇ ಸಂಸ್ಥೆಯು 30 ದಿನಗಳ ಸಮಯದ ಮಿತಿಯ ನಂತರವೂ ಪ್ರಚಾರಕ್ಕಾಗಿ 10 ಸಂಖ್ಯೆಗಳ ಸಾಮಾನ್ಯ ಮೊಬೈಲ್ ಸಂಖ್ಯೆಯನ್ನು ಬಳಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಟ್ರಾಯ್ ತಿಳಿಸಿದೆ. ಪ್ರಚಾರದ ಕರೆಗಳಿಗಾಗಿ ಬಳಸಲಾಗುವ ನೋಂದಾಯಿಸದ ಸಂಖ್ಯೆಗಳನ್ನು ನಿರ್ಬಂಧಿಸಲು ಟ್ರಾಯ್ (TRAI) ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.
ಇನ್ನು ಟೆಲಿಮಾರ್ಕೆಟ್ ಕಂಪೆನಿಗಳಿಗೆ ಈಗಾಗಲೇ ಇದ್ದಂತಹ ನಂಬರ್ಗಳನ್ನು ನಿರ್ಬಂಧಿಸಲು 30 ದಿನಗಳ ಕಾಲಾವಕಾಶವನ್ನು ನೀಡಿದ್ದು, 30 ದಿನದ ನಂತರವೂ ಒಂದು ವೇಳೆ ಬಳಕೆಯಲ್ಲಿದ್ದರೆ ಅಂತಹ ಕಂಪೆನಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಟ್ರಾಯ್ ಎಚ್ಚರಿಕೆ ನೀಡಿದೆ. ಇನ್ನು ಈ ಮೂಲಕ ಬಳಕೆದಾರರು ಮುಂದಿನ ದಿನಗಳಲ್ಲಿ ಕಂಪೆನಿಗಳಿಂದ ಬರುವಂತಹ ಜಾಹೀರಾತಿನ ಕರೆ ಮತ್ತು ಮೆಸೇಜ್ಗಳನ್ನು ಬೇಗನೆ ತಿಳಿಯಬಹುದು ಮತ್ತು ಜಾಹೀರಾತಿನ ಕಿರಿಕಿರಿಯೂ ಸ್ವಲ್ಪ ಕಡಿಮೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ