• Home
  • »
  • News
  • »
  • state
  • »
  • Deepinder Goyal: ಬೆಂಗಳೂರು ಮಹಿಳೆಯ ಒಂದೇ ಒಂದು ದೂರಿಗೆ ಜೊಮ್ಯಾಟೋ CEO ಪ್ರತಿಕ್ರಿಯೆ

Deepinder Goyal: ಬೆಂಗಳೂರು ಮಹಿಳೆಯ ಒಂದೇ ಒಂದು ದೂರಿಗೆ ಜೊಮ್ಯಾಟೋ CEO ಪ್ರತಿಕ್ರಿಯೆ

ದೀಪೇಂದ್ರ ಗೋಯಲ್ ಪ್ರತಿಕ್ರಿಯೆ

ದೀಪೇಂದ್ರ ಗೋಯಲ್ ಪ್ರತಿಕ್ರಿಯೆ

ಸಾಂಘ್ವಿ ಅವರ ಟ್ವಿಟ್ಟರ್ ಪೋಸ್ಟ್ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ರೆಸ್ಟೋರೆಂಟ್ ನ ಹೆಸರನ್ನು ತೆಗೆದು ಹಾಕುವ ಬದಲು ಜೊಮ್ಯಾಟೋ ಇವರ ವಿಮರ್ಶೆಯನ್ನು ಏಕೆ ತೆಗೆದುಹಾಕಿತು ಎಂದು ಪ್ರಶ್ನೆ ಮಾಡಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಸಾಮಾನ್ಯವಾಗಿ ನಾವು ಈ ಫುಡ್ ಅಗ್ರಿಗೆಟರ್​​ಗಳಿಂದ (Food Aggregator) ಆಹಾರವನ್ನು ಆರ್ಡರ್ (Online Food Order) ಮಾಡಿ ತರಿಸಿಕೊಂಡಾಗ ಏನೋ ಒಂದು ಸಮಸ್ಯೆ ಅಥವಾ ಏನೋ ಚೆನ್ನಾಗಿರದೇ ಇದ್ದಾಗ ನಾವು ಅವರ ಬಗ್ಗೆ ಅಥವಾ ಹೋಟೆಲ್ ಗಳ ಬಗ್ಗೆ ರಿವೀವ್​​ಗಳನ್ನ (Food Review) ಬರೆಯುತ್ತೇವೆ. ಗ್ಯಾರೆಂಟಿ ಅದು ನೆಗೆಟಿವ್ ಎಂದರೆ ನಕಾರಾತ್ಮಕ ವಿಮರ್ಶೆಯೆ ಆಗಿರುತ್ತದೆ. ಆದರೆ ಕೆಲವೊಬ್ಬ ಗ್ರಾಹಕರು (Customers) ಹೀಗೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಅಂತ ಫುಡ್ ಅಗ್ರಿಗೆಟರ್​ಗೆ ಮತ್ತು ಆ ಆರ್ಡರ್ ನೀಡಿದ ಹೋಟೆಲ್​​ಗಳಿಗೆ ಸಲಹೆ ಸಹ ನೀಡಿರುತ್ತಾರೆ. ಆನಂತರ ಆ ಗ್ರಾಹಕರು ಹಾಕಿದ ರಿವೀವ್​​ಗಳನ್ನು (Customers Review) ಫುಡ್ ಅಗ್ರಿಗೆಟರ್ ಮತ್ತು ಆ ಹೋಟೆಲ್​ಗಳು ನೋಡಿ ಆ ತಪ್ಪುಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತವೆ. ಅದರ ಜೊತೆಗೆ ಸಲಹೆ ಸೂಚನೆಗಳು ಇದ್ದರೆ ಅದನ್ನು ಸ್ವೀಕರಿಸುತ್ತವೆ ಮತ್ತು ತಮ್ಮ ಸೇವೆಯ ಗುಣಮಟ್ಟವನ್ನು (Service Quality) ಸುಧಾರಿಸಿಕೊಳ್ಳುವತ್ತ ಕೆಲಸ ಮಾಡುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಈಗ ಇದೇ ರೀತಿಯಾಗಿ ಬೆಂಗಳೂರಿನ ಮಹಿಳೆಯೊಬ್ಬರು ಜೊಮ್ಯಾಟೊ ಪ್ಲಾಟ್​​ಫಾರ್ಮ್​​ನಲ್ಲಿ ಪೋಸ್ಟ್ ಮಾಡಿದಂತಹ ರೆಸ್ಟೋರೆಂಟ್​ ವಿಮರ್ಶೆಯನ್ನು ಫುಡ್ ಅಗ್ರಿಗೇಟರ್ ತೆಗೆದು ಹಾಕಿರುವ ಘಟನೆ ನಡೆದಿದೆಯಂತೆ ಎಂದು ಹೇಳಲಾಗುತ್ತಿದೆ.


ತಾನು ಹಾಕಿದ ರಿವೀವ್ ತೆಗೆದು ಹಾಕಲಾಗಿದೆ ಅಂತ ಬೆಂಗಳೂರಿನ ನಿವಾಸಿಯೊಬ್ಬರು ನೀಡಿದ ದೂರಿಗೆ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಖುದ್ದು ಸೋಮವಾರ ಪ್ರತಿಕ್ರಿಯಿಸಿದ್ದಾರೆ.


ಮಹಿಳೆ ದೂರಿನ ಬಗ್ಗೆ ಜೊಮ್ಯಾಟೋ ಸಿಇಒ ಹೇಳಿದ್ದೇನು?


ಈಗ ತೆಗೆದು ಹಾಕಲಾಗಿರುವ "ನೀತಿ" (ಪಾಲಿಸಿ), "(ಕಾನೂನು) ಅತಿಯಾದ ಚಿಂತನೆಯ" ಪರಿಣಾಮವಾಗಿದೆ ಎಂದು ಅವರು ಹೇಳಿದರು. ಮಹಿಳೆಯ ವಿಮರ್ಶೆಯನ್ನು ಆ ಫುಡ್ ಅಗ್ರಿಗೆಟರ್ ವೇದಿಕೆಯಲ್ಲಿ ಮರುಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.


ದಿಶಾ ಸಾಂಘ್ವಿ ಅವರು ಭಾನುವಾರ ಬೆಂಗಳೂರು ನಗರದ ಜನಪ್ರಿಯ ರೆಸ್ಟೋರೆಂಟ್​​ನಿಂದ ಆಹಾರವನ್ನು ಸೇವಿಸಿದ ನಂತರ ನನಗೆ ಮತ್ತು ತನ್ನ ಸಹೋದ್ಯೋಗಿಗೆ ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದರು. "ಆರೋಗ್ಯ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡಲು ಇದು ಸೂಕ್ತ ವೇದಿಕೆಯಲ್ಲ" ಎಂದು ಉಲ್ಲೇಖಿಸಿ ಜೊಮ್ಯಾಟೋ ತನ್ನ ವಿಮರ್ಶೆಯನ್ನು ತೆಗೆದುಹಾಕಿದೆ ಎಂದು ಅವರು ದೂರಿದ್ದರು.


ಮಹಿಳೆ ರಿವೀವ್ ಬರೆದಿದ್ದು ಕೋರಮಂಗಲದ ರೆಸ್ಟೋರೆಂಟ್ ಬಗ್ಗೆ ಅಂತೆ


"ಕೋರಮಂಗಲದ ರೆಸ್ಟೋರೆಂಟ್​​ಗೆ ಇತ್ತೀಚೆಗೆ ಭೇಟಿ ನೀಡಿದ್ದಾಗ, ನಾನು ಮತ್ತು ನನ್ನ ಸಹೋದ್ಯೋಗಿಗೆ ಫುಡ್ ಪಾಯಿಸನ್ ಆಗಿತ್ತು" ಎಂದು ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ವೃತ್ತಿಪರಳಾಗಿರುವ ದಿಶಾ ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: Money Saving Tips: ಏನಿದು 50-30-20 ಸೇವಿಂಗ್ಸ್​ ಸೂತ್ರ? ಇದೊಂದು ಫಾಲೋ ಮಾಡಿದ್ರೆ ದುಡ್ಡಿನ ಸಮಸ್ಯೆ ಬರಲ್ಲ!


"ನಾನು ಅದರ ಬಗ್ಗೆ ವಿಮರ್ಶೆಯನ್ನು ಬರೆದಿದ್ದೇನೆ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಜನರು ಇದೇ ರೀತಿಯ ಅನುಭವವನ್ನು ಹೊಂದಿದ್ದಾರೆಂದು ಕಂಡುಕೊಂಡೆ" ಎಂದು ಹೇಳಿದ್ದಾರೆ.



ಜೊಮ್ಯಾಟೋದ ಇ-ಮೇಲ್ ನ ಸ್ಕ್ರೀನ್‌ಶಾಟ್ ಅನ್ನು ಸಹ ಅವರು ತಮ್ಮ ವಿಮರ್ಶೆಯನ್ನು ತೆಗೆದು ಹಾಕಲು ಕಾರಣವನ್ನು ಉಲ್ಲೇಖಿಸಿ ಹಂಚಿಕೊಂಡಿದ್ದಾರೆ. "ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಮತ್ತು ಸಕಾರಾತ್ಮಕ ಬದಲಾವಣೆಯ ಮೇಲೆ ಪ್ರಭಾವ ಬೀರಿದ್ದಕ್ಕಾಗಿ ಧನ್ಯವಾದಗಳು" ಎಂದು ಗೋಯಲ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.


ಕೋರಮಂಗಲದ ಟ್ರಫಲ್ಸ್ ಮಳಿಗೆಯ ಬಗ್ಗೆ ಸಾಂಘ್ವಿ ಇದೇ ರೀತಿಯ ಹಲವಾರು ವಿಮರ್ಶೆಗಳನ್ನು ಎತ್ತಿ ತೋರಿಸಿದ್ದರು, ಹಲವಾರು ಜನರು ಅಲ್ಲಿಂದ ಆಹಾರವನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ಒಳಗಾದರು ಎಂದು ಸಹ ಹೇಳಿದರು.


ಸಾಂಘ್ವಿ ಟ್ವಿಟ್ಟರ್ ಪೋಸ್ಟ್​​ಗೆ ಪ್ರತಿಕ್ರಿಯಿಸಿದ ಬಳಕೆದಾರರು


ಸಾಂಘ್ವಿ ಅವರ ಟ್ವಿಟ್ಟರ್ ಪೋಸ್ಟ್ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ರೆಸ್ಟೋರೆಂಟ್ ನ ಹೆಸರನ್ನು ತೆಗೆದು ಹಾಕುವ ಬದಲು ಜೊಮ್ಯಾಟೋ ಇವರ ವಿಮರ್ಶೆಯನ್ನು ಏಕೆ ತೆಗೆದುಹಾಕಿತು ಎಂದು ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ:  Maruti Car: 5 ಲಕ್ಷಕ್ಕೆ ಹೊಚ್ಚ ಹೊಸ ಮಾರುತಿ ಫ್ಯಾಮಿಲಿ ಕಾರು! ಮೈಲೇಜ್​ ಕೇಳಿದ್ರೆ ಈಗಲೇ ಬುಕ್​ ಮಾಡ್ತೀರಾ!


“ಆಹಾರವು ಸರಾಸರಿಯಾಗಿದ್ದರೆ, ಅದನ್ನು ತಿನ್ನದೇ ಹಾಗೆ ಬಿಟ್ಟು ಬರಬಹುದು, ಆದರೆ ಆ ಆಹಾರವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೆ, ಅದು ಖಂಡಿತವಾಗಿಯೂ ಹೈಲೈಟ್ ಮಾಡಬೇಕಾದ ವಿಷಯವಾಗಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ.

Published by:Mahmadrafik K
First published: