HOME » NEWS » State » ZOMATO BOY ASSAULT CASE COMPLAINT REGISTRATION AGAINST HINDI WOMAN HITESH CHANDRANI MAK

Zomato Boy Assault Case: ಝೊಮೋಟೋ ಬಾಯ್​ನಿಂದ ಹಲ್ಲೆ ಪ್ರಕರಣ; ಹಿಂದಿ ಮಹಿಳೆ ಹಿತೇಶ್​ ಚಂದ್ರಾಣಿ ವಿರುದ್ಧ ಪ್ರತಿದೂರು

ಪ್ರಕರಣದ ವಿಚಾರಣೆ ಬೇರೆಯದೇ ಸತ್ಯವನ್ನು ನುಡಿಯುತ್ತಿದ್ದು, ಇದೇ ಕಾರಣಕ್ಕೆ ಕನ್ನಡಿಗ ಕಾಮರಾಜ್ ಬೆನ್ನಿಗೆ ನಿಂತಿರುವ ಕನ್ನಡ ಪರ ಸಂಘಟನೆಗಳು ಇಂದು ಆತನ ಜೊತೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ತೆರಳಿ ಮೊದಲ ದೂರುದಾರರಾಗಿರುವ ಹಿತೇಶ್ ಚಂದ್ರಾಣಿ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ.

news18-kannada
Updated:March 15, 2021, 9:51 PM IST
Zomato Boy Assault Case: ಝೊಮೋಟೋ ಬಾಯ್​ನಿಂದ ಹಲ್ಲೆ ಪ್ರಕರಣ; ಹಿಂದಿ ಮಹಿಳೆ ಹಿತೇಶ್​ ಚಂದ್ರಾಣಿ ವಿರುದ್ಧ ಪ್ರತಿದೂರು
ಪೆಟ್ಟು ತಿಂದ ಮಹಿಳೆ ಹಿತೇಶ್ ಚಂದ್ರಾಣಿ.
  • Share this:
ಬೆಂಗಳೂರು (ಮಾರ್ಚ್​ 15); ಝೊಮೋಟೋ ಆಹಾರ ಪೂರೈಕೆ ಕಂಪೆನಿ ಉದ್ಯೋಗಿ ಕಾಮರಾಜ್ ಇತ್ತೀಚೆಗೆ ಹಿತೇಶ್ ಚಂದ್ರಾಣಿ ಎಂಬ ಹಿಂದಿ ಗ್ರಾಹಕಿಗೆ ಪಂಚ್​ ನೀಡಿದ್ದ ಪ್ರಕರಣ ಇದೀಗ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಕಾಮರಾಜ್​ನಿಂದ ಹಲ್ಲೆಗೊಳಗಾಗಿದ್ದ ಹಿತೇಶ್​ ಚಂದ್ರಾಣಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಗೊಳಗಾದ ತಮ್ಮ ಪೋಟೋವನ್ನು ಹಂಚಿಕೊಳ್ಳುವ ಮೂಲಕ ಜನರ ಅನುಕಂಪವನ್ನೂ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಪ್ರಕರಣದ ವಿಚಾರಣೆ ಬೇರೆಯದೇ ಸತ್ಯವನ್ನು ನುಡಿಯುತ್ತಿದ್ದು, ಇದೇ ಕಾರಣಕ್ಕೆ ಕನ್ನಡಿಗ ಕಾಮರಾಜ್ ಬೆನ್ನಿಗೆ ನಿಂತಿರುವ ಕನ್ನಡ ಪರ ಸಂಘಟನೆಗಳು ಇಂದು ಆತನ ಜೊತೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ತೆರಳಿ ಮೊದಲ ದೂರುದಾರರಾಗಿರುವ ಹಿತೇಶ್ ಚಂದ್ರಾಣಿ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ.​

ದೂರಿನಲ್ಲಿ "ಊಟದ ಪಾರ್ಸಲ್ ತಡವಾಗಿ ತಲುಪಿದ್ದಕ್ಕೆ ಹಿತೇಶ್​ ಚಂದ್ರಾಣಿ ಝೊಮೋಟೋ ಉದ್ಯೋಗಿ ಕಾಮರಾಜ್ ಅವರನ್ನು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆತ ತೆರಳುವ ಸಂದರ್ಭದಲ್ಲಿ ಕಾಮರಾಜ್ ಮೇಲೆ ಕೂಗಾಡಿ, ಗಲಾಟೆ ಮಾಡಿದ್ದಲ್ಲದೆ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ. ಇದೇ ಕಾರಣಕ್ಕೆ ಕಾಮರಾಜ್ ಸಹ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಒಂದು ಕ್ಷುಲ್ಲಕ ಕಾರಣಕ್ಕೆ ಹಿತೇಶ್ ಚಂದ್ರಾಣಿ ಇಂತಹ ವರ್ತನೆ ಮಾಡಿದ್ದು ಸರಿಯಲ್ಲ. ಈ ಸಂಬಂಧ ಪೊಲೀಸರು ತೀವ್ರ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಮಾಧ್ಯಮಗಳ ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದ ಕಾಮರಾಜ್, "ನಾನು ಇಷ್ಟು ದಿನಗಳ ಕೆಲಸದಲ್ಲಿ ಇಂತಹ ಮಹಿಳೆಯನ್ನು ನೋಡೇ ಇಲ್ಲ. ಆಹಾರದ ಪಾರ್ಸಲ್ ತಡವಾಗಿ ತಂದದ್ದಕ್ಕೆ ಮೊದಲು ಅವರೇ ನನ್ನನ್ನು ನಿಂದಿಸಿದರು. ಪಾರ್ಸೆಲ್​ಗೆ ಹಣ ಬೇಡ ಎಂದು ಅಲ್ಲೆ ಇಟ್ಟು ಹೋಗುವಾಗ ನನ್ನ ಮೇಲೆ ಚಪ್ಪಲಿ ಎಸೆದು ಕೂಗಾಡಿದರು" ಎಂದು ಹೇಳಿದ್ದ. ಆದರೆ, ಹಿತೇಶ್​ ಚಂದ್ರಾಣಿ ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ಪೊಲೀಸ್​ಗೆ ನೀಡಿದ ದೂರಿನಲ್ಲಾಗಲಿ ಎಲ್ಲೂ ಈ ಕುರಿತು ಉಲ್ಲೇಖ ಮಾಡಿಲ್ಲ.

ಇದನ್ನೂ ಓದಿ: Crime News: ಮಹಿಳೆ ಮುಖಕ್ಕೆ ಪಂಚ್ ಮಾಡಿದ ಪುಡ್ ಡೆಲಿವರಿ ಬಾಯ್: ಕ್ಷಮೆ ಕೇಳಿದ ಜೊಮೊಟೊ ಸಂಸ್ಥೆ

ಈ ನಡುವೆ ಝೊಮೋಟೋ ಉದ್ಯೋಗಿ ಕಾಮರಾಜ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದಿ ಜನ ಎಲ್ಲಿಂದಲೋ ಬಂದು ಬಡ ಕನ್ನಡಿಗ ಉದ್ಯೋಗಿಯ ಮೇಲೆ ದರ್ಪ ತೋರಿದ್ದಾರೆ ಎಂಬಂತಹ ಮನೋಭಾವವನ್ನು ಹುಟ್ಟುಹಾಕಿತ್ತು. ಇದೇ ಕಾರಣಕ್ಕೆ ಇದೀಗ ಎಲ್ಲಾ ಕನ್ನಡ ಪರ ಸಂಘಟನೆಗಳು ಕಾಮರಾಜ್​ ಬೆಂಬಲಕ್ಕೆ ನಿಂತಿದ್ದು ಹಿತೇಶ್ ಚಂದ್ರಾಣಿ ವಿರುದ್ಧ ಪ್ರತಿದೂರು ದಾಖಲಿಸಲು ಮುಂದಾಗಿದ್ದಾರೆ.

ಆದರೆ, ಕಾಮರಾಜ್​ನನ್ನು ಝೊಮೋಟೋ ಈಗಾಗಲೇ ಕೆಲಸದಿಂದ ವಜಾ ಮಾಡಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಹೋರಾಟಗಾರರು ಆತನಿಗೆ ಕೆಲಸ ಕೊಡಿಸುತ್ತಾರ? ಈ ಪ್ರಕರಣ ಮುಂದೆ ಏನಾಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.
Published by: MAshok Kumar
First published: March 15, 2021, 9:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories