ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಸರಿಯಲ್ಲ - ಮುಂಚಿತವಾಗಿಯೇ ಪೂರ್ವ ತಯಾರಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಭವಾನಿ ರೇವಣ್ಣ ಸಲಹೆ

ಶಿಕ್ಷಣ ಒಂದು ಶಿಕ್ಷೆ ಎಂದುಕೊಳ್ಳದೇ ವಿದ್ಯೆಯನ್ನುಅನುಭವಿಸಬೇಕು ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ, ಸ್ವ- ಪ್ರಯತ್ನ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು

news18-kannada
Updated:January 18, 2020, 2:56 PM IST
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಸರಿಯಲ್ಲ - ಮುಂಚಿತವಾಗಿಯೇ ಪೂರ್ವ ತಯಾರಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಭವಾನಿ ರೇವಣ್ಣ ಸಲಹೆ
ಭವಾನಿ ರೇವಣ್ಣ
  • Share this:
ಹಾಸನ (ಜ.18) : ವಿದ್ಯಾರ್ಥಿಗಳು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೇ ಪರೀಕ್ಷೆಗೆ ಮುಂಚಿತವಾಗಿಯೇ ಶಾಲಾ ಆರಂಭ ದಿನಗಳಿಂದಲೂ ನಿತ್ಯ ಅಭ್ಯಾಸ ಮಾಡುವ ಮೂಲಕ ಸೂಕ್ತ ತಯಾರಿ ಮಾಡಬೇಕು ಎಂದು ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಭವಾನಿ ರೇವಣ್ಣ ತಿಳಿಸಿದ್ದಾರೆ.

ಎಸ್​ಎಸ್​ಎಲ್​ಸಿ ಫಲಿತಾಂಶ ವೃದ್ದಿ ಹಾಗೂ ಪರೀಕ್ಷೆಎದುರಿಸುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು,  ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಅಪಾಯಕಾರಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಅವಶ್ಯಕತೆ ಇದ್ದಲ್ಲಿ ಮಾತ್ರ ಬಳಸಬೇಕು, ಅಂದಿನ ಪಾಠವನ್ನು ಅಂದೇ ಶಾಲೆ ಮುಗಿದ ನಂತರ ಮಕ್ಕಳು ಗುಂಪು ಚರ್ಚೆ ಮಾಡಿದರೆ ಕಲಿತ ಪಾಠ ಸುಲಭವಾಗಿ ಅರ್ಥವಾಗುತ್ತದೆ ಎಂದರು.

ಶಿಕ್ಷಣ ಒಂದು ಶಿಕ್ಷೆ ಎಂದುಕೊಳ್ಳದೇ ವಿದ್ಯೆಯನ್ನುಅನುಭವಿಸಬೇಕು ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ, ಸ್ವ- ಪ್ರಯತ್ನ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕಳೆದ ಬಾರಿ ಎಸ್​ಎಸ್​ಎಲ್​ಸಿಪರೀಕ್ಷೆ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಅಂತೆಯೇ ಈ ಬಾರಿಯೂ ಕೂಡ ಆ ಸ್ಥಾನವನ್ನು ಉಳಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಆರ್.ಗಿರೀಶ್ ಮಾತನಾಡಿ ಮೊದಲನೇ ಸ್ಥಾನ ಗಳಿಸುವುದಕ್ಕಿಂತ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ, ಹಾಗಾಗಿ ವಿದ್ಯಾರ್ಥಿಗಳುಪರೀಕ್ಷೆಗೆ ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಬೇಕುಎಂದರು.

ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡು ಪರೀಕ್ಷೆಯಲ್ಲಿಉತ್ತಮ ಅಂಕ ಗಳಿಸುತ್ತೇನೆಂಬ ಮನೋಸ್ಥೈರ್ಯಹೊಂದಬೇಕು ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ : ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಬಿಟ್ಟು ಕೊಡೋ ಮನಸ್ಸಿಲ್ಲ - ಮಕ್ಕಳ ಪ್ರಗತಿಗಾಗಿ ಕುಟುಂಬ ಸಮೇತ ದುಡೀತೀವಿ ; ಭವಾನಿ ರೇವಣ್ಣಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಸ್. ಪ್ರಕಾಶ್ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಪರೀಕ್ಷೆ ಎಂಬುದು ರಣರಂಗ ಎಂದುಕೊಳ್ಳದೇ ಪರೀಕ್ಷೆಯನ್ನು ಒಂದು ಕ್ರೀಡೆ ಎಂದು ಭಾವಿಸಿ ಮುಕ್ತ ಮನಸ್ಸಿನಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಪರೀಕ್ಷೆಗೆ ಇನ್ನು 69-75 ದಿನಗಳು ಮಾತ್ರವೇ ಉಳಿದಿವೆ,ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದ್ದು ಆಯ್ಕೆಪ್ರಶ್ನೆಗಳನ್ನು ಕಡಿಮೆ ಇರಿಸಿ, ಬರವಣಿಗೆ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ವಿವರಣಾತ್ಮಕ ಪ್ರಶ್ನೆಗಳನ್ನು ಹೆಚ್ಚಿಸಿರುವುದಲ್ಲದೇ ಈ ಬಾರಿ ನೀಲಿನಕ್ಷೆ ಇಲ್ಲವಾದ ಕಾರಣ ಮಕ್ಕಳು ಎಲ್ಲಾ ವಿಷಯಗಳ ಸಂಪೂರ್ಣ ಪುಸ್ತಕವನ್ನು ಓದಿದರೆ ಮಾತ್ರ ಹೆಚ್ಚು ಅಂಕ ಗಳಿಸಬಹುದು ಎಂದು ತಿಳಿಸಿದರು.

 
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ