‘ಎಚ್​ಡಿಕೆ ಸರ್ಕಾರ ಬೀಳಿಸಲು ಸಾಧ್ಯವಿಲ್ಲ, ಮುಂದೆ ಗೆದ್ದು ಸಿದ್ದು ಸಿಎಂ ಆಗಲಿದ್ದಾರೆ: ಜಮೀರ್​


Updated:August 28, 2018, 1:59 PM IST
‘ಎಚ್​ಡಿಕೆ ಸರ್ಕಾರ ಬೀಳಿಸಲು ಸಾಧ್ಯವಿಲ್ಲ, ಮುಂದೆ ಗೆದ್ದು ಸಿದ್ದು ಸಿಎಂ ಆಗಲಿದ್ದಾರೆ: ಜಮೀರ್​

Updated: August 28, 2018, 1:59 PM IST
ನ್ಯೂಸ್​-18 ಕನ್ನಡ

ಹುಬ್ಬಳ್ಳಿ(ಆಗಸ್ಟ್​.28): ನಾನು ಮತ್ತೊಮ್ಮೆ ಸಿಎಂ ಆಗಲಿದ್ಧೇನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಗೊಂದಲವುಂಟಾಗಿದೆ. ಎಚ್​ಡಿ ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಭರವಸೆ ನೀಡಿದ್ಧಾರೆ. ​​

ಈ ಸಂಬಂಧ ಹುಬ್ಬಳಿಯಲ್ಲಿ ಮಾತಾಡಿದ ಸಚಿವ ಜಮೀರ್ ಅಹ್ಮದ್ ಖಾನ್  ಅವರು, ಹೆಚ್‌ಡಿಕೆ ಸರ್ಕಾರ ಬೀಳಿಸಲು ಯಾರೂ ಷಡ್ಯಂತ್ರ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು ಮುಂದಿನ ಎಲೆಕ್ಷನ್‌ನಲ್ಲಿ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದಾರೆ. ಅವರೇನು ಕುಮಾರಸ್ವಾಮಿ ಸರ್ಕಾರ ಬೀಳಿಸಿ ಸಿಎಂ ಆಗ್ತೀನಿ ಅಂದಿಲ್ಲ ಎಂದಿದ್ಧಾರೆ.

ಸಿದ್ದರಾಮಯ್ಯ ನಮ್ಮ ನಾಯಕರು, ಯಾವತ್ತಿದ್ದರೂ ಅವರೇ ನಮ್ಮ‌ ನಾಯಕರು. ಅವರ ಯುರೋಪ್​ ಪ್ರವಾಸ ಪೂರ್ವ ನಿಗದಿಯಾಗಿದೆ. ಅದರೆಲ್ಲೇನೂ ವಿಶೇಷತೆ ಇಲ್ಲ. ನನ್ನನ್ನು ಕರೆದಿದ್ದರೆ ನಾನೂ ಪ್ರವಾಸಕ್ಕೆ ಹೋಗುತ್ತಿದ್ದೆ. ನನ್ನನ್ನು ಕರೆದಿಲ್ಲ ಹೀಗಾಗಿ ನಾನು ಹೋಗುತ್ತಿಲ್ಲ ಎಂದು ಹೇಳಿದರು.

ಮಾಜಿ ಸಿಎಂ ಹೇಳಿಕೆ ನಂತರ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣ ಉಂಟಾಗಲಿದೆ ಎಂದು ಎನ್ನಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸದ್ಯದಲ್ಲೇ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ತತ್ವ ಸಿದ್ದಾಂತ ಇಲ್ಲದೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದು ಬಾಲಗ್ರಹ ಪೀಡಿತ ಸರ್ಕಾರ ಹೆಚ್ಚು ದಿನ ಮುಂದುವರೆಯುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಪರಸ್ಪರ ವಿರುದ್ದ ದಿಕ್ಕಿಗೆ ಸಾಗುತ್ತಿವೆ. ಎರಡು ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಉಳಿಯುವುದ ಖಚಿತ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...