• Home
 • »
 • News
 • »
 • state
 • »
 • ಪಾದರಾಯನಪುರ ಗಲಾಟೆಯ ಆರೋಪಿಗಳಿಗೆ ಜಮೀರ್​ ಅಹ್ಮದ್ ಅದ್ದೂರಿ ಸ್ವಾಗತ​!

ಪಾದರಾಯನಪುರ ಗಲಾಟೆಯ ಆರೋಪಿಗಳಿಗೆ ಜಮೀರ್​ ಅಹ್ಮದ್ ಅದ್ದೂರಿ ಸ್ವಾಗತ​!

ಮಾಜಿ ಸಚಿವ ಜಮೀರ್‌ ಅಹಮದ್

ಮಾಜಿ ಸಚಿವ ಜಮೀರ್‌ ಅಹಮದ್

ಪ್ರಕರನಕ್ಕೆ ಸಂಬಂಧಿಸಿದ 126 ಆರೋಪಿಗಳಿಗೆ ಹೈಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿತ್ತು. ವಿಚಿತ್ರ ಎಂದರೆ, ಇವರನ್ನು ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್ ಖಾನ್‌ ತಮ್ಮದೇ ಬಸ್‌ಗಳಲ್ಲಿ ಪಾದರಾಯನ ಪುರಕ್ಕೆ ಕರೆತಂದಿದ್ದಾರೆ.

 • Share this:

  ಬೆಂಗಳೂರು (ಜೂ 3): ಕೊರೋನಾ ಹಾಟ್​​ಸ್ಪಾಟ್ ಆಗಿದ್ದ ಬೆಂಗಳೂರಿನ ಪಾದರಾಯನಪುರದಲ್ಲಿ ಏಪ್ರಿಲ್​ 19ರಂದು ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರಿಗೆ ಈಗ ಜಾಮೀನು ದೊರೆತಿದೆ. ವಿಚಿತ್ರ ಎಂದರೆ ಮಾಜಿ ಸಚಿವ ಜಮೀರ್​ ಅಹ್ಮದ್​ ಇವರಿಗೆ ಭಾರೀ ಸ್ವಾಗತ ಕೋರುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


  ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ನಲ್ಲಿ ಇಡಲು ಏ.19ರ ರಾತ್ರಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಕ್ವಾರಂಟೈನ್‌ಗೆ ಒಪ್ಪದ ಕೊರೋನಾ ಶಂಕಿತರು ಹಾಗೂ ಸ್ಥಳೀಯರು ಒಟ್ಟಾಗಿ ಪೊಲೀಸರ ಮತ್ತು ಆರೋಗ್ಯ ಸಿಬ್ಬಂದಿಗಳ ವಿರುದ್ಧವೇ ಹಲ್ಲೆಗೆ ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.


  ಪ್ರಕರಣಕ್ಕೆ ಸಂಬಂಧಿಸಿದ 126 ಆರೋಪಿಗಳಿಗೆ ಹೈಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿತ್ತು. ವಿಚಿತ್ರ ಎಂದರೆ, ಇವರನ್ನು ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್ ಖಾನ್‌ ತಮ್ಮದೇ ಬಸ್‌ಗಳಲ್ಲಿ ಪಾದರಾಯನಪುರಕ್ಕೆ ಕರೆತಂದಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಅವರುಗಳಿಗೆ ಅದ್ದೂರಿ ಸ್ವಾಗತ ಕೂಡ ಕೋರಿದ್ದಾರೆ ಎನ್ನಲಾಗಿದೆ.


  ಇದನ್ನೂ ಓದಿ: ರಾಜ್ಯವನ್ನೇ ನಡುಗಿಸಿದ ಪಾದರಾಯನಪುರ ಗಲಾಟೆ, ಕಂಬಿ ಹಿಂದೆ ಆರೋಪಿಗಳು; ಇಲ್ಲಿದೆ ಘಟನೆಯ ಕಂಪ್ಲೀಟ್ ಡೀಟೈಲ್ಸ್‌!


  ಪಾದರಾಯನಪುರ ಗಲಾಟೆ ನಂತರ ಜಮೀರ್​ ಬೇಜವಾಬ್ದಾರಿಯುತ ಹೇಳಿಕೆ ನೀಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದರು. ಈಗ ಪುಂಡರಿಗೆ ಸ್ವಾಗತ ಕೋರಿರುವ ವಿಚಾರಭಾರೀ ಚರ್ಚೆಗೆ ಕಾರಣವಾಗಿದೆ.

  Published by:Rajesh Duggumane
  First published: