• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Zameer Ahmed: 'ಕ್ಷೀರಭಾಗ್ಯ' ಬದಲು 'ಶೀಲಭಾಗ್ಯ' ಎಂದ ಜಮೀರ್ ಅಹ್ಮದ್! ಸಿದ್ದು ಸರ್ಕಾರದ ಭ್ಯಾಗಗಳನ್ನು ಸ್ಮರಿಸುವಾಗ ಎಡವಟ್ಟು

Zameer Ahmed: 'ಕ್ಷೀರಭಾಗ್ಯ' ಬದಲು 'ಶೀಲಭಾಗ್ಯ' ಎಂದ ಜಮೀರ್ ಅಹ್ಮದ್! ಸಿದ್ದು ಸರ್ಕಾರದ ಭ್ಯಾಗಗಳನ್ನು ಸ್ಮರಿಸುವಾಗ ಎಡವಟ್ಟು

ಜಮೀರ್ ಅಹ್ಮದ್ ಖಾನ್

ಜಮೀರ್ ಅಹ್ಮದ್ ಖಾನ್

ರಾಜ್ಯಪಾಲರು ಬಿಜೆಪಿ ಬರೆದುಕೊಟ್ಟ ಭಾಷಣ ಓದಿದ್ದಾರೆ. ರಾಜ್ಯಪಾಲರ ಬಾಯಲ್ಲಿ ಬಿಜೆಪಿ ಅವರು ಬರೀ ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Gulbarga, India
 • Share this:

ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಜಾಧ್ವನಿ (Praja Dhwani) ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಜಮೀರ್​​ ಅಹ್ಮದ್ (Zameer Ahmed Khan), ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ಭಾಗ್ಯಗಳನ್ನು ಸ್ಮರಿಸುವ ಸಮಯದಲ್ಲಿ ಎಡವಟ್ಟು ಮಾಡಿದ್ದಾರೆ. 'ಕ್ಷೀರಭಾಗ್ಯ' (Ksheera Bhagya) ಎನ್ನುವ ಬದಲು 'ಶೀಲಭಾಗ್ಯ' ನೀಡಿದ ಸಿದ್ದರಾಮಯ್ಯ ಎಂದು ಜಮೀರ್ ಹೇಳಿದ್ದು, ಶಾಸಕರ ಹೇಳಿಕೆ ಕಂಡ ಕಾಂಗ್ರೆಸ್ (Congress)​ ಕಾರ್ಯರ್ತರು ಹಾಗೂ ವೇದಿಕೆ ಮೇಲಿದ್ದ ಮುಖಂಡರು ಕ್ಷಣ ಕಾಲ ಕಕ್ಕಾಬಿಕ್ಕಿಯಾಗಿದ್ದಾರೆ.


ನಾವು ಮಾಡಿದ ಕೆಲಸದ ಮೇಲೆ ಮತ ಕೇಳುತ್ತೇವೆ


ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಕಲಬುರಗಿ ಜನರಿಗೆ ಜನರಿಗೆ ಬಂದು ಕಡಿಮೆ ಅನಿಸುತ್ತಿದೆ. ಅದು ನಮ್ಮ ನಾಯಕ್ ಖಮರ್ ಉಲ್ ಇಸ್ಲಾಂ ಅವರ ಕೊರತೆ ಇವತ್ತು ನಮಗೆ ಕಾಣುತ್ತಿದೆ. ಬಿಜೆಪಿ ಅವರು ಯಾವತ್ತೂ ಅಭಿವೃದ್ದಿ ಬಗ್ಗೆ ಮಾತಾಡಲ್ಲ, ನಾವು ಮಾಡಿದ ಕೆಲಸದ ಮೇಲೆ ಮತ ಕೇಳುತ್ತೇವೆ. ಅವರು ಮಾತ್ರ ಭಾವನೆಗಳ ಮೇಲೆ ಮತ ಕೇಳುತ್ತಾರೆ.


ಪ್ರಧಾನಿ ಮೋದಿ ಆಚೆ ದಿನ್ ಆಯೆಂಗೆ ಅಂತಾರೆ, ಆದರೆ ಇಲ್ಲಿವರೆಗೂ ಅದು ಯಾವುದು ಬಂದಿಲ್ಲ. ಬಾರಿ ಬೆಲೆ ಏರಿಕೆ ಬರೆ ಕೊಟ್ಟಿದ್ದಾರೆ. ನಮಗೆ ನಿಮ್ಮ ಅಚೆ ದಿನ್ ಬೇಡ ಸ್ವಾಮಿ, ನಮಗೆ ಮೊದಲಿನ ಅಚೇ ದಿನ್ ಸಾಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Stone Pelting: ರೈಲಿನಲ್ಲಿ ಪ್ರಯಾಣಿಸುವಾಗ ಕಲ್ಲೆಸೆತ; ಒಂದೇ ವಾರದಲ್ಲಿ ಬರೋಬ್ಬರಿ 20 ಕೇಸ್!


ಇನ್ನು ಸಿದ್ದರಾಮಯ್ಯ ಅವರು ಮಾತನಾಡಿ, ಎರಡನೇ ಹಂತಹ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ. ಶರಣರ ನಾಡು ಬಸವಕಲ್ಯಾಣದಿಂದ ಆರಂಭ ಮಾಡಿದ್ದೇವೆ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಬಸವಾದಿ ಶರಣರು ನುಡಿದಂತೆ ನಡೆದರು.


ಅದರಂತೆ ಕಾಂಗ್ರೆಸ್ ಪಕ್ಷ ಕೂಡ ನುಡಿದಂತೆ ನಡೆದ ಪಕ್ಷ. ಅದರಂತೆ ನಮಗೆ ಈ ಹಿಂದೆ ಅವಕಾಶ ಕೊಟ್ಟಿದ್ದರು. ಹಾಗಾಗಿ 5 ವರ್ಷ ಅವಕಾಶ ಸಿಕ್ಕಿದ್ದು ದೇವರಾಜ್ ಅರಸರ ನಂತರ ನನಗೆ ಅವಕಾಶ ಸಿಕ್ಕಿತ್ತು. ಅವಕಾಶ ಸಿಕ್ಕಾಗ ಕೊಟ್ಟ ಎಲ್ಲಾ ಭರವಸೆ ಇಡೆರಿಸಿದ್ದೇವೆ. ಕೊಟ್ಟ ಭರವಸೆ ಇಡೇರಿಸದಿದ್ದರೆ ಜನರಿಗೆ ದ್ರೋಹ ಮಾಡಿದಂತೆ ಎಂದರು.


ಇದನ್ನೂ ಓದಿ: HD Revanna: ಕಣ್ಣು ಬಿಟ್ಟರೆ ಭಸ್ಮ! -ನಿಂಬೆಹಣ್ಣು ವರ್ಕೌಟ್ ಆಗಲ್ಲ ಎಂದ ಡಿಕೆ ಸುರೇಶ್​​ಗೆ ಹೆಚ್​ಡಿ ರೇವಣ್ಣ ಕೌಂಟರ್


ರಾಜ್ಯಪಾಲರ ಕೈಯಲ್ಲಿ ಬಿಜೆಪಿ ಸುಳ್ಳು ಭಾಷಣ ಮಾಡಿಸಿದೆ


ಬಿಜೆಪಿ ಅವರು ಹೇಳೋದು ಒಂದು ಮಾಡೋದು ಒಂದು. ಯಾವತ್ತೂ ಅವರು ನುಡಿದಂತೆ ನಡೆದಿಲ್ಲ. ಯಡಿಯೂರಪ್ಪ ಅವರು 600 ಭರವಸೆ ಕೊಟ್ಟಿದ್ದರು. ಆದರೆ ಅದರಲ್ಲಿ ಈಡೇರಿಸಿದ್ದು, ಕೇವಲ 50 ಭರವಸೆ ಅಷ್ಟೇ. ಬಿಜೆಪಿ ಅವರು ವಚನ ಭ್ರಷ್ಟರು, ಬಿಜೆಪಿ ಅವರು ರಾಜ್ಯಪಾಲರು ಬಜೆಟ್ ಬಗ್ಗೆ ಭಾಷಣ ಮಾಡಿದ್ದರು.


ರಾಜ್ಯಪಾಲರು ಬಿಜೆಪಿ ಬರೆದುಕೊಟ್ಟ ಭಾಷಣ ಓದಿದ್ದಾರೆ. ರಾಜ್ಯಪಾಲರ ಬಾಯಲ್ಲಿ ಬಿಜೆಪಿ ಅವರು ಬರೀ ಸುಳ್ಳು ಹೇಳಿಸಿದ್ದಾರೆ. ಒಂದೇ ಒಂದು ಇವರು ಬಡವರಿಗೆ ಮನೆ ಕೊಟ್ಟಿಲ್ಲ. ನಾವು ಕೊಟ್ಟಿದ್ದ ಮನೆಗಳ ಬಿಲ್ ಕೊಟ್ಟಿಲ್ಲ. ರಾಜ್ಯಪಾಲರ ಬಾಯಲ್ಲಿ ಮನೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದರು.


ಇನ್ನು, ಕಲಬುರಗಿಯ ಲ್ಲಿ ಕಾಂಗ್ರೆಸ್ ಸಮಾವೇಶ ಆರಂಭವಾಗಿ ಮುಗಿಯುವ ಸಮಯದ ಬಂದರೂ ಕಾರ್ಯಕರ್ತರು ಸಿದ್ದರಾಮಯ್ಯ ಬೃಹತ್ ಕಟೌಟ್​ ನಿಲ್ಲಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು. ಕಲಬುರಗಿಯ ಏನ್ ವಿ ಮೈದಾನದಲ್ಲಿ ಇಂದಿನ ಪ್ರಜಾಧ್ವನಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Published by:Sumanth SN
First published: