ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ (Illegal Property Case) ಪ್ರಕರಣದಲ್ಲಿ ಚಾಮರಾಜಪೇಟೆ (Chamrajpet ) ಶಾಸಕ ಜಮೀರ್ ಅಹ್ಮದ್ (Zameer Ahmed) ಹಿನ್ನಡೆಯಾಗಿದೆ. ಪ್ರಕರಣದ ತನಿಖೆ ಕೈ ಬಿಡುವಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಹೈಕೋರ್ಟ್ (High Court) ಸಲ್ಲಿಕೆ ಮಾಡಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ವಜಾಗೊಳಿಸಿದೆ. ಅರ್ಜಿ ವಜಾಗೊಳಿಸಿರುವ ಕೋರ್ಟ್ ತನಿಖೆಗೆ ತಡೆ ನೀಡಲು ನಿರಾಕರಿಸಿದೆ.
80.44 ಕೋಟಿ ರೂ. ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪ
ಎಸಿಬಿ ಅಧಿಕಾರಿಗಳು ಶಾಸಕ ಜಮೀರ್ ಅವರ ವಿರುದ್ಧ 80.44 ಕೋಟಿ ರೂಪಾಯಿ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪ ಮಾಡಿ ಪ್ರಕರಣ ದಾಖಲು ಮಾಡಿದ್ದರು. ಅದಾಯಕ್ಕಿಂತ ಶೇಕಡಾ 2031ರಷ್ಟು ಅಕ್ರಮ ಆಸ್ತಿ ಗಳಿಸಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತನಿಖೆಗೆ ತಡೆ ನೀಡುವಂತೆ ಕೋರಿ ಜಮೀರ್ ಕೋರ್ಟಿನಲ್ಲಿ ಮನವಿ ಮಾಡಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಜಮೀರ್ ಪರ ವಕೀಲರ ವಾದ ಏನಿತ್ತು?
ಕೋರ್ಟಿನಲ್ಲಿ ತಮ್ಮ ವಾದ ಮಂಡಿಸಿದ ಜಮೀರ್ ಅಹ್ಮದ್ ಪರ ವಕೀಲರು, ಯಾವುದೇ ಪ್ರಕರಣ ದಾಖಲಿಸುವ ಮುನ್ನ ತನಿಖಾ ಸಂಸ್ಥೆ ಆರೋಪಿಯ ಪ್ರಾಥಮಿಕ ವಿಚಾರಣೆ ನಡೆಸಬೇಕು. ಇದು ಕಡ್ಡಾಯವಾಗಿದೆ. ಆದರೆ ಈ ನಿಯಮವನ್ನು ತನಿಖಾ ಸಂಸ್ಥೆ ಪಾಲಿಸಿಲ್ಲ. ಪ್ರಾಥಮಿಕ ತನಿಖೆ ನಡೆಸದೆ ನೇರ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ನ್ಯಾಯಾಮೂರ್ತಿಗಳ ಗಮನಕ್ಕೆ ತಂದಿದ್ದರು. ಅಲ್ಲದೆ, ಎಸಿಬಿ ದಾಖಲಿಸಿರುವ ಪ್ರಕರಣ ತನಿಖೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ಇನ್ನು, 2022ರಲ್ಲಿ ಎಸಿಬಿ ಅಧಿಕಾರಿಗಳು ಜಮೀರ್ ನಿವಾಸ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಅಂಶ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದರಂತೆ ಅಧಿಕಾರಿಗಳು ಪ್ರಕರಣ ದಾಖಲು ಮಾಡಿ, ಎಫ್ಐಆರ್ ಮಾಡಿದ್ದರು.
ಶಾಸಕಿ ಸೌಮ್ಯಾ ರೆಡ್ಡಿ ಕಾರು ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು
ಮತದಾರರಿಗೆ ಹಂಚಲು ಸೀರೆಗಳನ್ನ ಇಟ್ಟು ಹೋಗುತ್ತಿದ್ದ ಕಾರನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಕಾರನ್ನು ತಿಲಕ ನಗರ ಠಾಣೆಗೆ ನೀಡಿದ್ದಾರೆ. ಸದ್ಯ ಕಾರನ್ನ ತಿಲಕನಗರ ಠಾಣೆ ಬಳಿ ನಿಲ್ಲಿಸಿರುವ ಪೊಲೀಸರು, ಕಾರಿಗೆ ಕವರ್ ಮಾಡಿ ನಿಲ್ಲಿಸಿದ್ದಾರೆ. ಆದರೆ ಸದ್ಯ ಈ ಬಗ್ಗೆ ಇನ್ನೂ ಪ್ರಕರಣ ದಾಖಲು ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಮಾರೇನಹಳ್ಳಿ ಬಳಿ ಕಾರನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ