ಬೆಂಗಳೂರು: ಚುನಾವಣೆಯ ಚದುರಂಗದಾಟದಲ್ಲಿ (Karnataka Election 2023) ತಂತ್ರ-ಪ್ರತಿತಂತ್ರ ಜೊತೆಗೆ ಈಗ ಸುಪಾರಿ ಪಾಲಿಟಿಕ್ಸ್ ಸೌಂಡ್ ಮಾಡುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬೆಂಕಿ- ಬಿರುಗಾಳಿ ಎಲ್ಲವೂ ಎದ್ದಿದೆ. ಪಕ್ಷಗಳು ಗೆಲುವಿಗೆ ಅಗತ್ಯವಿರೋ ತಂತ್ರಗಾರಿಕೆಯಲ್ಲೂ (strategy) ತೊಡಗಿರುವಾಗ ಸುಪಾರಿ ಪಾಲಿಟಿಕ್ಸ್ ಅಬ್ಬರಿಸ್ತಿದೆ. ಹೌದು, ಕಾಂಗ್ರೆಸ್ (Congress) ಸೋಲಿಸಲು ತೆಲಂಗಾಣ ಸಿಎಂ (Telangana CM) ಕೆ ಚಂದ್ರಶೇಖರ್ ರಾವ್ (KCR) 500 ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾದ ವಿಚಾರ ಹಲವು ಉಹಾಪೋಹಗಳನ್ನು ಸೃಷ್ಟಿಸಿದೆ.
500 ಕೋಟಿ ರೂಪಾಯಿ ಡೀಲ್ ವಿಚಾರದಲ್ಲಿ ಹಲ್ಚಲ್!
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸಿಡಿಸಿದ್ದ ಬಾಂಬ್ ಧಗಧಗಿಸೋಕೆ ಶುರುಮಾಡಿದೆ. ರಾಜ್ಯ ಕಾಂಗ್ರೆಸ್ ಸೋಲಿಸಲು ಓರ್ವ ಶಾಸಕನಿಗೆ 500 ಕೋಟಿ ರೂಪಾಯಿ ಡೀಲ್ ಕೊಡಲಾಗಿದೆ ಅನ್ನೋ ವಿಚಾರ ರಾಜ್ಯ ರಾಜಕೀಯದಲ್ಲಿ ವಿವಿಧ ವಿಶ್ಲೇಷಣೆಗೆ ಕಾರಣವಾಗಿದೆ.
ಈ ಬಗ್ಗೆ ಮೊನ್ನೆ ಮಾತನಾಡಿದ್ದ ರೇವಂತ್ ರೆಡ್ಡಿ, ಕಾಂಗ್ರೆಸ್ ಪಕ್ಷದಲ್ಲಿದ್ದ ಓರ್ವ ಪ್ರಮುಖ ನಾಯಕನನ್ನು ಸೆಳೆಯಲು ಪ್ರಯತ್ನ ಮಾಡಲು ಆತನನ್ನು ಹೈದರಾಬಾದ್ಗೆ ಕರೆಯಿಸಿಕೊಂಡಿದ್ದರು. 20-25 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಅವರನ್ನು ಫಾರ್ಮ್ಹೌಸ್ಗೆ ಕರೆಯಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. 500 ಕೋಟಿ ರೂಪಾಯಿ ಹಣದ ಆಫರ್ ನೀಡಿರುವುದು ನಿಜ ಅಲ್ವಾ?
ಕರ್ನಾಟದಲ್ಲಿ ಈ ಬಾರಿ ಕಾಂಗ್ರೆಸ್ 120 ರಿಂದ 130 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಈ ಬಗ್ಗೆ ವರದಿಗಳನ್ನು ತರಿಸಿಕೊಂಡು, ನಮ್ಮ ಪಕ್ಷದ ಪ್ರಮುಖ ನಾಯಕನನ್ನೇ ಕರೆಯಿಸಿಕೊಂಡು ಚಂದ್ರಶೇಖರ್ ರಾವ್ ಮಾತುಕತೆ ನಡೆಸಿದ್ದರು. ಆ ವೇಳೆ 500 ರೂಪಾಯಿ ಆಫರ್ ನೀಡಿದ್ದರು ಎಂದು ಆರೋಪಿಸಿದ್ದರು.
ಸಿದ್ದರಾಮಯ್ಯ ಜೊತೆ ಜಮೀರ್ ಗೌಪ್ಯ ಸಭೆ!
ರೇವಂತ್ ರೆಡ್ಡಿ ಆರೋಪ ಮಾಡುತ್ತಿದ್ದಂತೆ ಕಾಂಗ್ರೆಸ್ನಲ್ಲಿ ತಳಮಳ ಶುರುವಾಗಿದೆ. ಅಷ್ಟೇ ಅಲ್ಲ ಸುಪಾರಿ ಡೀಲ್ಗೂ ಚಾಮರಾಜಪೇಟೆ ಶಾಸಕ ಹಾಗೂ ಸಿದ್ದರಾಮಯ್ಯ ಪರಮಾಪ್ತ ಜಮೀರ್ ಹಾಗೂ ಕೆಸಿಆರ್ ಭೇಟಿಗೆ ಈ ವಿಚಾರವನ್ನು ತಾಳೆ ಹಾಕ್ತಿದ್ದಾರೆ.
ಕಾರಣ ಬೆಳಗಾವಿ ಅಧಿವೇಶನ ನಡೆಯುತ್ತಿದ್ದರು ಅಧಿವೇಶನದಲ್ಲಿ ಪಾಲ್ಗೊಳ್ಳದೆ ಹೈದರಾಬಾದ್ನಲ್ಲಿ ಕೆಸಿಆರ್ ಭೇಟಿಯಾಗಿದ್ದು, ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಜೊತೆಗಿನ ಮುನಿಸಿನಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ಅಂತರ ಕಾಯ್ದುಕೊಂಡಿದ್ದರು.
ಇನ್ನು, ಈ ವಿಚಾರ ಹಲ್ಚಲ್ ಸೃಷ್ಟಿಸ್ತಿದ್ದಂತೆ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಖಾಸಗಿ ಹೋಟೆಲ್ನಲ್ಲಿ ಜಮೀರ್ ಚರ್ಚೆ ನಡೆಸಿದ್ದಾರೆ. ಕೆಸಿಆರ್ ಭೇಟಿ ಮಾಡಿದ್ದು ನಿಜ, ಆದರೆ ಡೀಲು ಗೀಲು ನನಗೆ ಗೊತ್ತಿಲ್ಲ. ಯಾವ ಆಫರೂ ಇಲ್ಲ ಅಂತಿದ್ದಾರೆ.
ಇದನ್ನೂ ಓದಿ: Zameer Ahmed Khan: ಜಮೀರ್ ಅಹಮದ್ ಕಾಂಗ್ರೆಸ್ ಬಿಡ್ತಾರಾ? ಹೈಕಮಾಂಡ್ನಿಂದ ಬಂತು ಬುಲಾವ್!
ಜಮೀರ್ ಹೇಳಿದ್ದೇನು?
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಮೀರ್, ಯಾರು ಹೇಳಿದ್ರು? ನನಗೆ ಯಾವ ಆಫರ್ ಕೂಡ ಬಂದಿಲ್ಲ. ಮಾಧ್ಯಮದಲ್ಲಿ ಕೋಟಿ ಕೋಟಿ ಹಣದ ಆಫರ್ ಕೊಟ್ಟಿದ್ದಾರೆ ಅನ್ನೋ ವರದಿ ಬಂದಿದ್ದು ನೋಡಿದ್ದೀನಿ. ಆದರೆ ನನಗೆ ಅಂತಹ ಯಾವುದೇ ಆಫರ್ ಬಂದಿಲ್ಲ. ನಾನು ಹೈದರಾಬಾದ್ ಹೋಗಿದ್ದು ನಿಜ. ಸಿಎಂ ಕೆಸಿಆರ್ ಭೇಟಿಯಾಗಿದ್ದು ನಿಜ. ನನ್ನ ಆತ್ಮೀಯ ಸ್ನೇಹಿತ ರೋಹಿತ್ ರೆಡ್ಡಿ ಅವರು ಭೇಟಿ ಮಾಡಲು ಕರೆದ ಕಾರಣ ನಾನು ಹೋಗಿ ಬಂದಿದ್ದೆ ಅಷ್ಟೇ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾಲೆಳೆದ ಬಿಜೆಪಿ
500 ಕೋಟಿ ರೂಪಾಯಿ ಆಫರ್ ವಿಚಾರ ಬಿಜೆಪಿ ನಾಯಕರ ಬಾಯಿಗೆ ಆಹಾರವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಹೇಳಿದ್ದಾರೆ. ಈ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅರೋಪ ಮಾಡಿದ ಕಾರಣ ಸ್ಪಷ್ಟನೆ ಕೊಡಬೇಕು. ಬೆಂಕಿ ಇಲ್ಲದೆ ಹೊಗೆ ಆಡಲ್ಲ ಎಂದಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರೋ ರಾಜ್ಯ ಬಿಜೆಪಿ, ಜಮೀರ್ ತೆಲಂಗಾಣಕ್ಕೆ ಹೋಗಿ ಬಂದದ್ದು, ರೇವಂತ್ ರೆಡ್ಡಿ ಹೇಳಿಕೆಯ ನಂತರ ಹಠಾತ್ತಾಗಿ ಭೇಟಿ ಮಾಡಿದ್ದು ನೋಡಿದರೆ ಗುಪ್ತ ವ್ಯವಹಾರ ನಡೆದಂತೆ ಕಾಣುತ್ತದೆ ಅಂತ ಕಾಲೆಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ