ಬೆಂಗಳೂರು (ಜು.1): ನಗರದಲ್ಲಿ ಕೊರೋನಾ ಸೋಂಕು ಮುಗಿಲು ಮುಟ್ಟುತ್ತಿರುವ ಸಮಯದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಾಲು ತೊಳೆದು, ಹೂ ಹಾಕಿ ಪಾದಪೂಜೆ ಮಾಡಿಸಿಕೊಂಡಿದ್ದಾರೆ. ಕಳೆದ ಭಾನುವಾರ ಕೆಂಪೇಗೌಡನಗರದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಅದ್ದೂರಿ ಸನ್ಮಾನ ಮಾಡಿ ಕೊವೀಡ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಲಾಕ್ ಡೌನ್ ಜಾರಿ ಬಳಿಕ ಸದಾ ಒಂದಲ್ಲೊಂದು ವಿವಾದಗಳಲ್ಲಿ ಸಿಲುಕಿರುವ ಜಮೀರ್ ಅಹ್ಮದ್ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಎಲ್ಲೆಡೆ ಅಬ್ಬರಿಸುತ್ತಿರುವ ವೇಳೆಯಲ್ಲಿ ಜಮೀರ್ ತಮ್ಮ ಬೆಂಬಲಿಗರಿಂದ ಸನ್ಮಾನ ಮಾಡಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
ಜಮೀರ್ ಅಹ್ಮದ್ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಸಹಾಯ ಮಾಡುತ್ತಿದ್ದಾರಂತೆ. ಅದಕ್ಕಾಗಿ ಜಮೀರ್ ಅಹಮದ್ ಗೆ ಸನ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಜೂನ್ 28ರಂದು ಕಾರ್ಯಕ್ರಮ ಆಯೋಜಿಸಿ ಪಾದಪೂಜೆ ಮಾಡಿದ್ದ ಬೆಂಬಲಿಗರು ಜಮೀರ್ ಮೇಲೆ ಹೂ ಸುರಿಮಳೆಗೈದು ಬಳಿಕ ಪಾದಪೂಜೆ ಮಾಡಿದ್ರು. ಪಾದಪೂಜೆ ವೇಳೆ ಅಪಾರ ಬೆಂಬಲಿಗರು ಗುಂಪಗೂಡಿದ್ದು ಸಾಮಾಜಿಕ ಅಂತರವಿಲ್ಲದೆ ಸನ್ಮಾನ ಮಾಡ್ತಿದ್ದದ್ದು ಕಂಡು ಬಂದಿತ್ತು.
ಇದನ್ನೂ ಓದಿ: ಪಾದರಾಯನಪುರ ಗಲಾಟೆಯ ಆರೋಪಿಗಳಿಗೆ ಜಮೀರ್ ಅಹ್ಮದ್ ಅದ್ದೂರಿ ಸ್ವಾಗತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ