‘ಎಸ್​​​ಡಿಪಿಐಗೆ ಮುನ್ನ ಆರ್​​ಎಸ್​ಎಸ್-​​​ಭಜರಂಗ ದಳ ನಿಷೇಧಿಸಿ‘: ಮಾಜಿ ಸಚಿವ ಜಮೀರ್​​​​​​ ಅಹ್ಮದ್​​ ಆಗ್ರಹ

ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬೇಕು. ಈ ಬದಲಾವಣೆ ಎಸ್​​ಡಿಪಿಐ ನಿಷೇಧದಿಂದ ಸಾಧ್ಯವಿಲ್ಲ. ಸಮಾಜದ ನೆಮ್ಮದಿಗಾಗಿ ಮೊದಲು ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸುವಂತೆ ಮನವಿ ಮಾಡುತ್ತೇನೆ ಎಂದರು ಜಮೀರ್​​.

news18-kannada
Updated:January 20, 2020, 8:09 PM IST
‘ಎಸ್​​​ಡಿಪಿಐಗೆ ಮುನ್ನ ಆರ್​​ಎಸ್​ಎಸ್-​​​ಭಜರಂಗ ದಳ ನಿಷೇಧಿಸಿ‘: ಮಾಜಿ ಸಚಿವ ಜಮೀರ್​​​​​​ ಅಹ್ಮದ್​​ ಆಗ್ರಹ
ಜಮೀರ್​ ಅಹ್ಮದ್​​
  • Share this:
ಬೆಂಗಳೂರು(ಜ.20): ಸೋಷಿಯಲ್​​​ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ ಮುನ್ನ ಆರ್​​ಎಸ್​​ಎಸ್​​​ ಮತ್ತು ಭಜರಂಗ ದಳ ನಿಷೇಧಿಸಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಚಿವ ಜಮೀರ್​​ ಅಹ್ಮದ್​​​ ಆಗ್ರಹಿಸಿದ್ದಾರೆ. ಇಂದು ಪುಲಿಕೇಶಿನಗರದ ಫುಟ್ಬಾಲ್ ಮೈದಾನವೊಂದರಲ್ಲಿ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿರೋಧದ ಸಮಾವೇಶದಲ್ಲಿ ಜಮೀರ್​​ ಅಹ್ಮದ್​​ ಭಾಗಿಯಾಗಿದ್ದರು. ಇಲ್ಲಿನ ವೇದಿಕೆ ಮೇಲೆ ಸಮಾವೇಶವನ್ನುದ್ದೇಶಿಸಿ ಮಾತಾಡಿದ ಜಮೀರ್​​ ಬಿಜೆಪಿ ಸರ್ಕಾರಕ್ಕೆ ಎಸ್​​ಡಿಪಿಐಗೆ ಮುನ್ನ ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಎಸ್​​ಡಿಪಿಐ ನಿಷೇಧಿಸಲು ಮುಂದಾಗಿದೆ. ಆರ್​ಎಸ್​ಎಸ್​ ಮತ್ತು ಭಜರಂಗ ದಳ ಬಹಿರಂಗವಾಗಿಯೇ ಕೋಮುದ್ವೇಷ ಬಿತ್ತರಿಸುವ ಹೇಳಿಕೆ ನೀಡುತ್ತಾರೆ. ಇಲ್ಲಿಯವರೆಗೂ ಎಸ್​​ಡಿಪಿಐ ಇಂತಹ ಹೇಳಿಕೆ ನೀಡಿಲ್ಲ. ಎಸ್​​ಡಿಪಿಐ ನೀಡಿರುವ ಒಂದೇ ಒಂದು ಕೋಮುವಾದಿ ಹೇಳಿಕೆಯಾದರೂ ಬಿಜೆಪಿ ತೋರಿಸಲಿ ಎಂದು ಮಾಜಿ ಸಚಿವ ಜಮೀರ್​​​ ಅಹ್ಮದ್​​ ಕಿಡಿಕಾರಿದರು.

ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬೇಕು. ಈ ಬದಲಾವಣೆ ಎಸ್​​ಡಿಪಿಐ ನಿಷೇಧದಿಂದ ಸಾಧ್ಯವಿಲ್ಲ. ಸಮಾಜದ ನೆಮ್ಮದಿಗಾಗಿ ಮೊದಲು ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸುವಂತೆ ಮನವಿ ಮಾಡುತ್ತೇನೆ ಎಂದರು.

ಇದನ್ನೂ ಓದಿ: Fact Check: ಜೈಲೊಳಗಿಂದ ಮಗುವಿಗೆ ಹಾಲು ಕುಡಿಸುತ್ತಿರುವ ತಾಯಿಯ ಕರುಣಾಜನಕ ವಿಡಿಯೋ: ಹಿಂದಿರುವ ನಿಜ ಕಥೆಯೇನು

ರಾಜ್ಯದ ಹಿಂದೂ ಮುಖಂಡರ ಕೊಲೆಗೆ ಯತ್ನಿಸಿದ ಆರೋಪ ಮೇಲೆ ಪಿಎಫ್​ಐ ಮತ್ತು ಎಸ್​​ಡಿಪಿಐ ನಿಷೇಧಿಸುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಶಾಸಕ ತನ್ವೀರ್ ಸೇಠ್, ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಮಾಜಿ ಸಚಿವ ಯು.ಟಿ ಖಾದರ್​​ ಹತ್ಯೆಗೆ ಎಸ್​​ಡಿಪಿಐ ಸಂಚು ರೂಪಿಸಿತ್ತು ಎಂದು ಆರೋಪ ಕೇಳಿ ಬಂದಿದೆ. ಇಂತಹ ಉಗ್ರ ಕೃತ್ಯ ಎಸಗುವ ಸಂಘಟನೆಗಳ ನಿಷೇಧಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಹೇಳಲಾಗುತ್ತಿದೆ.
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading