HOME » NEWS » State » YUVA BRIGADE GIVE NEW LOOK TO GOVERNMENT SCHOOL WHICH AS IN ANEKAL BORDER LG

ಶಿಥಿಲಾವಸ್ಥೆಯಲ್ಲಿದ್ದ ಗಡಿ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟ ಯುವ ಬ್ರಿಗೇಡ್

ಯುವ ಬ್ರಿಗೇಡ್ ಪುನರುಜ್ಜೀವನಗೊಳಿಸಿರುವ ಗಡಿನಾಡ ಕನ್ನಡ ಶಾಲೆ ವಿಸ್ತೃತ ಕಟ್ಟಡ ಸಮರ್ಪಣೆ ಮಾಡಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯುವ ಬ್ರಿಗೇಡ್ನ ಕಾರ್ಯವನ್ನು ಶ್ಲಾಘಿಸಿದ್ದಾರೆ.

news18-kannada
Updated:January 19, 2021, 10:28 PM IST
ಶಿಥಿಲಾವಸ್ಥೆಯಲ್ಲಿದ್ದ ಗಡಿ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟ ಯುವ ಬ್ರಿಗೇಡ್
ಗಡಿ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟ ಯುವ ಬ್ರಿಗೇಡ್
  • Share this:
ಆನೇಕಲ್(ಜ.19): ಅದು 1990 ರಲ್ಲಿ ಸ್ಥಾಪನೆಗೊಂಡಿದ್ದ ಗಡಿನಾಡ ಕನ್ನಡ ಶಾಲೆ. ಪ್ರಾರಂಭದಲ್ಲಿ ಒಂದು ಕೊಠಡಿಯಲ್ಲಿ ಪ್ರಾರಂಭಗೊಂಡ ಶಾಲೆ ಕಾಲ ಕ್ರಮೇಣ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದರು. ಆದ್ರೆ ವ್ಯವಸ್ಥಿತ ಕಟ್ಟಡ ಮೂಲಭೂತ ಸೌಕರ್ಯಗಳಿಲ್ಲದೆ ಶಿಥಿಲಾವಸ್ಥೆಯಲ್ಲಿತ್ತು. ವರ್ಷದ ಹಿಂದೆ ಯುವ ಬ್ರಿಗೇಡ್​​ನ ಯುವಕ ಕಂಡಿದ್ದಾನೆ. ಗಡಿನಾಡ ಕನ್ನಡ ಶಾಲೆ ಅವ್ಯವಸ್ಥೆ ಬಗ್ಗೆ ಚಕ್ರವರ್ತಿ ಸೂಲಿಬೆಲೆಗೆ ವಿವರಿಸಿದ್ದಾರೆ‌. ಬಳಿಕ ನಡೆದದ್ದು ಗಡಿನಾಡ ಕನ್ನಡ ಶಾಲೆ ಪುನರುಜ್ಜೀವನದ ಸಾಹಸಗಾಥೆ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಸೋಲೂರು ಗ್ರಾಮದ ವಿನೋಬಾ ಭಾವೆ ಕನ್ನಡ ಶಾಲೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡದ ಪ್ರರಿಶ್ರಮ ಮತ್ತು ದಾನಿಗಳ ಸಹಾಯ ಹಸ್ತದಿಂದ ಇಂದು ಸಿಂಗಾರಗೊಂಡು ನಳನಳಿಸುತ್ತಿದ್ದೆ. 1990 ರಲ್ಲಿ ಸಮಾಜವಾದಿ ಚಿಂತಕ ಸೋಲೂರು ತೋಪಯ್ಯ ಗಡಿನಾಡ ಮಕ್ಕಳ ಕಲಿಕೆಗಾಗಿ ವಿನೋಬಾ ಭಾವೆ ಕನ್ನಡ ಶಾಲೆಯನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದರು.

ಸರ್ಕಾರದ ಅನುದಾನಿತ ಶಾಲೆಗಳಲ್ಲಿ ಒಂದಾದ ಈ ಶಾಲೆ ಸೂಕ್ತ ಅನುದಾನವಿಲ್ಲದೆ  ಮೂಲಭೂತ ಸೌಕರ್ಯಗಳಿಲ್ಲದೆ ಸೊರಗಿ ಹೋಗಿತ್ತು. ಅದೊಂದು ದಿನ ಯುವ ಬ್ರಿಗೇಡ್​ನ ಯುವಕ ಮಗುವೊಂದನ್ನು ಶಾಲೆಗೆ ಬಿಡಲು ಶಾಲೆಯ ಅತಂತ್ರ ಸ್ಥಿತಿಯ ಬಗ್ಗೆ ಚಕ್ರವರ್ತಿಯವರಿಗೆ ತಿಳಿಸುತ್ತಾನೆ. ಬಳಿಕ ನಡೆದದ್ದೆ ಪವಾಡ. ಚಕ್ರವರ್ತಿ ಸೂಲಿಬೆಲೆ ಅಂಡ್ ಟೀಮ್ ಶಾಲೆಯ ಪುನರುಜ್ಜೀವನಕ್ಕೆ ನಿರ್ಧರಿಸಿತ್ತು.

Covid-19 Vaccines: ನಾಳೆಯಿಂದ ನೆರೆಯ ದೇಶಗಳಿಗೆ ಕೋವಿಡ್​ ಲಸಿಕೆ ರಫ್ತು ಕಾರ್ಯಾರಂಭ

ಟಿಮ್ ಕೆನ್ ಎಂಬ ಸಂಸ್ಥೆ, ಫೇಸ್ಬುಕ್ ಮತ್ತು ಯು ಕೆ ಗೆಳೆಯರ ನೆರವಿನಿಂದ ಎರಡು ಕೊಠಡಿ ಮತ್ತು ಸಭಾಂಗಣವನ್ನು ನಿರ್ಮಿಸಿದ್ದು, ಒಟ್ಟಾರೆ 35 ಲಕ್ಷ ವೆಚ್ಚವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ವಿವಾದಿತ ಬರಹಗಾರ ಪ್ರೋ ಭಗವಾನ್ ರಚಿಸಿರುವ ರಾಮ ಮಂದಿರ ಬೇಕಾ? ಎಂಬ ಪುಸ್ತಕವನ್ನು ಸರ್ಕಾರ ಖರೀದಿಸಿರುವ ಬಗ್ಗೆ ಮಾಹಿತಿ ಇಲ್ಲ ಇದೇ ಸಂದರ್ಭದಲ್ಲಿ ಜಾರಿಕೊಂಡಿದ್ದಾರೆ.

ಇನ್ನು, ಯುವ ಬ್ರಿಗೇಡ್ ಪುನರುಜ್ಜೀವನಗೊಳಿಸಿರುವ ಗಡಿನಾಡ ಕನ್ನಡ ಶಾಲೆ ವಿಸ್ತೃತ ಕಟ್ಟಡ ಸಮರ್ಪಣೆ ಮಾಡಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯುವ ಬ್ರಿಗೇಡ್ನ ಕಾರ್ಯವನ್ನು ಶ್ಲಾಘಿಸಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲ ಎಂದು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು‌. ಸರ್ಕಾರದ ಅನುದಾನ ಗಡಿನಾಡ ಶಾಲೆಗಳಿಗೆ ಸಾಲದು ಎಂದು ಒಪ್ಪಿಕೊಂಡ ಅವರು ಇಂತಹ ಶಾಲೆಗಳಲ್ಲಿ ಓದುವ ಮಕ್ಕಳೇ ಸಮಾಜದ ಆಸ್ತಿಗಳಾಗುತ್ತಾರೆ. ಕೊರೋನಾ ಕಾಲದಲ್ಲಿ ಶಾಲೆಗಳಿಲ್ಲದೆ ಬಾಲ ಕಾರ್ಮಿಕ ಪದ್ದತಿ ಮತ್ತು ಬಾಲ್ಯ ವಿವಾಹ ಪದ್ದತಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ತಜ್ಞರ ಶಿಪಾರಸ್ಸಿನ ಮೇರೆಗೆ 6,7,8,9 ,ತರಗತಿ ವಿದ್ಯಾಗಮ ಕಾರ್ಯಕ್ರಮ ರೂಪಿಸಲಾಗಿದೆ ಎಂದ ಶಿಕ್ಷಣ ಸಚಿವ ಸುರೇಶ್ ಕುಮಾರ್  ವಿವಾದಿತ ಪುಸ್ತಕ ಖರೀದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದಾರೆ.
Youtube Video

ಒಟ್ಟಿನಲ್ಲಿ ಗಡಿಯಲ್ಲಿನ ಕನ್ನಡ ಶಾಲೆಗಳನ್ನು ತಮಿಳುನಾಡು ಸರ್ಕಾರ ಮುಚ್ಚುತ್ತಿರುವ ಹೊತ್ತಿನಲ್ಲಿ ರಾಜ್ಯದ ಗಡಿಯ ಕನ್ನಡ ಶಾಲೆ ದಾನಿಗಳ ನೆರವಿನಿಂದ ಖಾಸಗಿ ಶಾಲೆ ನಾಚಿಸುವಂತಹ ಶೌಚಾಲಯ, ಕೊಠಡಿಗಳು ಒಳಗೊಂಡತೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವುದುದು ನಿಜಕ್ಕೂ ಮಾದರಿಯಾಗಿದೆ.
Published by: Latha CG
First published: January 19, 2021, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories