YSV Datta: ದೇವೇಗೌಡರು ಇರೋವರೆಗೂ ಜೆಡಿಎಸ್​ನಲ್ಲೇ ಇರುತ್ತೇನೆ; ವದಂತಿಗಳಿಗೆ ತೆರೆ ಎಳೆದ ವೈಎಸ್​ವಿ ದತ್ತ 

YSV Datta: ಜೆಡಿಎಸ್​ ಪಕ್ಷ ತತ್ವ ಸಿದ್ಧಾಂತ ಮುರಿಯುವ ಸಂದರ್ಭದಲ್ಲಿ ಪಕ್ಷದ ವೇದಿಕೆಯಲ್ಲಿಯೇ ಅದರ ವಿರುದ್ಧ ಮಾತನಾಡುತ್ತೇನೆ. ಆದರೆ, ದೇವೇಗೌಡರು ಇರುವವರೆಗೂ ನಾನು ಜೆಡಿಎಸ್‌ನಲ್ಲಿ‌ ಇರುತ್ತೇನೆ ಎಂದು ವೈಎಸ್​ವಿ ದತ್ತ ಸ್ಪಷ್ಟನೆ ನೀಡಿದ್ದಾರೆ.

ವೈಎಸ್​ವಿ ದತ್ತಾ

ವೈಎಸ್​ವಿ ದತ್ತಾ

  • Share this:
ಬೆಂಗಳೂರು (ಡಿ. 2): ಜೆಡಿಎಸ್​ ನಾಯಕ ಹಾಗೂ ಮಾಜಿ ಶಾಸಕ ವೈಎಸ್​ವಿ ದತ್ತ ಕಾಂಗ್ರೆಸ್​ಗೆ ಸೇರಲಿದ್ದಾರೆ ಎಂಬ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ವೈಎಸ್​ವಿ ದತ್ತ, ದೇವೇಗೌಡರು ಇರುವವರೆಗೂ ನಾನು ಜೆಡಿಎಸ್​ ತೊರೆಯುವುದಿಲ್ಲ. ಮುಂದೆಯೂ ಜೆಡಿಎಸ್​ನಲ್ಲಿಯೇ ಇರುತ್ತೇನೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು 22‌ ವರ್ಷದ ಹುಡುಗನಾಗಿದ್ದಾಗ ರಾಜಕೀಯಕ್ಕೆ ಪ್ರವೇಶಿಸಿದೆ. ಜೆಪಿ ಅವರ ತತ್ವ, ಸಿದ್ಧಾಂತ ಮೆಚ್ಚಿ ಬಂದವನು ನಾನು. ಅವರ ತತ್ವ, ಸಿದ್ಧಾಂತಗಳಿಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇನೆ. ಜೆಡಿಎಸ್​ ಪಕ್ಷ ತತ್ವ ಸಿದ್ಧಾಂತ ಮುರಿಯುವ ಸಂದರ್ಭದಲ್ಲಿ ಪಕ್ಷದ ವೇದಿಕೆಯಲ್ಲಿಯೇ ಅದರ ವಿರುದ್ಧ ಮಾತನಾಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷದಿಂದ ದೂರ ಸರಿಯುವುದಿಲ್ಲ ಎಂದಿದ್ದಾರೆ.



ದೇವೇಗೌಡರು ಇರುವವರೆಗೂ ನಾನು ಜೆಡಿಎಸ್‌ನಲ್ಲಿ‌ ಇರುತ್ತೇನೆ. ಜೆಡಿಎಸ್​ನಿಂದ ಎಂಎಲ್ಎ ಹಾಗೂ ಎಂಎಲ್‌ಸಿಯಾಗಿ ಕೆಲಸ ಮಾಡಿದ್ದೇನೆ ಎಂದು ವೈಎಸ್​ವಿ ದತ್ತ ಹೇಳಿದ್ದಾರೆ. ಈ ಬಗ್ಗೆ ನಿನ್ನೆ ಟ್ವಿಟ್ಟರ್​ನಲ್ಲೂ ಸ್ಪಷ್ಟನೆ ನೀಡಿದ್ದ ಅವರು, ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಮಾಧ್ಯಮಗಳು ತಾವೇ ಊಹಿಸಿಕೊಂಡು ಪ್ರಸಾರ ಮಾಡುತ್ತಿವೆ ಎಂದಿದ್ದರು.

ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ? ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ ಜೆಡಿಎಸ್​ ಪಕ್ಷ ಸಂಘಟನೆ ಕಡೆ ಗಮನ ಕೊಡೋಣ ಎಂದು ವೈಎಸ್​ವಿ ದತ್ತ ತಾವು ಕಾಂಗ್ರೆಸ್​ಗೆ ಸೇರುವ ವದಂತಿಯನ್ನು ತಳ್ಳಿ ಹಾಕಿದ್ದರು. ಇಂದು ಈ ಬಗ್ಗೆ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ.
Published by:Sushma Chakre
First published: