• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JDS ತೊರೆದು ಕಾಂಗ್ರೆಸ್ ಸೇರಿದ್ದ YSV ದತ್ತಾಗೆ ನಿರಾಸೆ; ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸಸ್ಪೆನ್ಸ್

JDS ತೊರೆದು ಕಾಂಗ್ರೆಸ್ ಸೇರಿದ್ದ YSV ದತ್ತಾಗೆ ನಿರಾಸೆ; ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸಸ್ಪೆನ್ಸ್

ಮಾಜಿ ಶಾಸಕ ವೈಎಸ್​ವಿ ದತ್ತಾ

ಮಾಜಿ ಶಾಸಕ ವೈಎಸ್​ವಿ ದತ್ತಾ

ಕಳೆದ ಬಾರಿ ಸಿದ್ದರಾಮಯ್ಯ ಅವರಿಗಾಗಿ ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿಲದ್ದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಅವರಿಗೆ ಟಿಕೆಟ್ ಸಿಕ್ಕಿದೆ.

  • Share this:

ಬೆಂಗಳೂರು: ಇಂದು ಕಾಂಗ್ರೆಸ್ 42 ಕ್ಷೇತ್ರದ ಅಭ್ಯರ್ಥಿಗಳ (Congress Second list) ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹಾಸನ, ಚನ್ನಪಟ್ಟಣ, ಕೋಲಾರ, ಪುಲಕೇಶಿ ನಗರ ಸೇರಿದಂತೆ ಕೆಲವು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮಾತ್ರ ಇನ್ನು ಸಸ್ಪೆನ್ಸ್ ಆಗಿದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸ್ಪರ್ಧೆ ವದಂತಿ ಇನ್ನುಸಸ್ಪೆನ್ಸ್ ಆಗಿಯೇ ಉಳಿದಿದೆ. ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (Former PM HD Deve Gowda) ಮಾನಸ ಪುತ್ರ ಎಂದು ಬಿಂಬಿತವಾಗಿದ್ದ ವೈಎಸ್​ವಿ ದತ್ತಾ (YSV Datta) ಅವರಿಗೆ ನಿರಾಸೆಯಾಗಿದೆ. ವೈಎಸ್​ವಿ ದತ್ತಾ ಕಡೂರು ವಿಧಾನಸಭಾ ಕ್ಷೇತ್ರದ (Kaduru) ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಕುರುಬ ಸಮುದಾಯದ ನಾಯಕನಿಗೆ ಮಣೆ ಹಾಕಿರುವ ಕಾಂಗ್ರೆಸ್ ಆನಂದ್ ಕೆಎಸ್ (Anand KS) ಅವರಿಗೆ ಟಿಕೆಟ್ ನೀಡಿದೆ.


ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ವೈಎಸ್​ವಿ ದತ್ತಾ ಅವರ ಮುಂದಿನ ನಡೆ ಏನು ಅನ್ನೋದು ಇನ್ನೂ ನಿಗೂಢವಾಗಿದೆ. ವೈಎಸ್​ವಿ ದತ್ತಾ ಟಿಕೆಟ್​ಗಾಗಿ ಬಾರಿ ಕಸರತ್ತು ನಡೆಸಿದ್ದರು. ಸದ್ಯ ಬೆಂಗಳೂರಿನಲ್ಲಿರುವ ವೈಎಸ್​ವಿ ದತ್ತಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


ನಾಗರಾಜ್ ಛಬ್ಬಿಗೆ ನಿರಾಸೆ


ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿಗೆ ನಿರಾಸೆಯುಂಟಾಗಿದೆ. ಕಲಘಟಗಿಯಿಂದ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಸಂತೋಷ್ ಲಾಡ್​ ಅವರಿಗೆ ಟಿಕೆಟ್ ನೀಡಲಾಗಿದೆ.


ಕ್ಷೇತ್ರದಿಂದ ದೂರ ಇರೋ ಮಾಜಿ ಸಚಿವ ವಿನಯ್ ಕುಲಕರ್ಣಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿನಯ್ ಕುಲಕರ್ಣಿ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆಗಳು ನಡೆದಿದ್ದವು. ಇದೀಗ ಈ ಚರ್ಚೆಗಳಿಗೆ ತೆರೆ ಬಿದ್ದಿದೆ.


ಇದನ್ನೂ ಓದಿ:  Karnataka Election 2023: ಕರಾವಳಿಯಲ್ಲಿ ಬಿಜೆಪಿ ಬತ್ತಳಿಕೆ ಸೇರಿದ ‘ಪ್ರವೀಣ’ ಅಸ್ತ್ರ




ಬಿಜೆಪಿಯಿಂದ ಬಂದವರಿಗೆ ಟಿಕೆಟ್


ಕಳೆದ ವಾರವಷ್ಟೇ ಬಿಜೆಪಿ ಸೇರಿದ್ದ ಎನ್​ವೈ ಗೋಪಾಲಕೃಷ್ಣ ಮತ್ತು ಬಾಬುರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ಸಿಕ್ಕಿದೆ. ಕಳೆದ ಬಾರಿ ಸಿದ್ದರಾಮಯ್ಯ ಅವರಿಗಾಗಿ ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಅವರಿಗೆ ಟಿಕೆಟ್ ಸಿಕ್ಕಿದೆ.

First published: