Kalaburagi: ಪ್ರಾಣದ ಹಂಗು ತೊರೆದು ಕಟ್ಟಡ ಏರಿ SSLC ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಟ್ಟ ಯುವಕರು

SSLC ವಿದ್ಯಾರ್ಥಿಗಳಿಗೆ ಯುವಕರು, ಪ್ರಾಣದ ಹಂಗು ತೊರೆದು ಹೊರಗಡೆಯಿಂದ ಕಾಪಿ ಚೀಟಿ ನೀಡುವ ದೃಶ್ಯ, ಜಿಲ್ಲೆಯ ಆಳಂದ ಪಟ್ಟಣದ ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರಿಗೆ ಸೇರಿದ ವಿವೇಕ ವರ್ಧಿನಿ ಶಾಲೆಯಲ್ಲಿ ಕಂಡು ಬಂದಿದೆ.

ಕಾಪಿ ಚೀಟಿ ಕೊಡಲು ಕಟ್ಟಡ ಏರಿದ ಯುವಕರು

ಕಾಪಿ ಚೀಟಿ ಕೊಡಲು ಕಟ್ಟಡ ಏರಿದ ಯುವಕರು

  • Share this:
ಕಲಬುರಗಿ (ಮಾ.30) : ಮಾರ್ಚ್ 28 ರಿಂದ SSLC ಪರೀಕ್ಷೆ  ಆರಂಭವಾಗಿದೆ.  ಎಲ್ಲೆಡೆ ಬಿಗಿ ಭದ್ರತೆಯಲ್ಲಿ ಪರೀಕ್ಷೆ (Exam) ನಡೆಸಲಾಗ್ತಿದೆ. ಪರೀಕ್ಷಾ ಕೊಠಡಿಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ರೂ ಇದನ್ನು ಲೆಕ್ಕಿಸದೆ ಕೆಲ ಯುವಕರ SSLC ವಿದ್ಯಾರ್ಥಿಗಳಿಗೆ ಕಾಪಿ ಚೀಟಿ (Copy Sheet) ಕೊಡಲು ಮುಂದಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ. ವಿವೇಕ ವರ್ಧಿನಿ ಶಾಲೆಯಲ್ಲಿ SSLC ವಿದ್ಯಾರ್ಥಿಗಳು (Students) ಪರೀಕ್ಷೆ ಬರೆಯುವ ವೇಳೆ ಕೆಲ ಯುವಕರು ಪ್ರಾಣದ ಹಂಗು ತೋರೆದು 4 ಅಂತಸ್ತಿನ ಕಟ್ಟಡವನ್ನ ಏರಿ ಕಿಟಕಿಯಲ್ಲಿ ವಿದ್ಯಾರ್ಥಿಗಳಿಗೆ ಕಾಪಿ ಚೀಟಿಯನ್ನು ಕೊಡಲು ಮುಂದಾಗಿದ್ದಾರೆ. ಯುವಕರು ಕಾಪಿ ಚೀಟಿ ಕೊಡ್ತಿರೋದು ಕ್ಯಾಮೆರಾ (Camera) ಕಣ್ಣಲ್ಲಿ ಸೆರೆಯಾಗಿದೆ. 

ಪ್ರಾಣದ ಹಂಗು ತೊರೆದು ಕಾಪಿ ಚೀಟಿ ರವಾನೆ

ಎಸ್ಎಸ್ಎಲ್‌ಸಿ ಎರಡನೇ ದಿನದ ಇಂಗ್ಲಿಷ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಯುವಕರು, ಪ್ರಾಣದ ಹಂಗು ತೊರೆದು ಹೊರಗಡೆಯಿಂದ ಕಾಪಿ ಚೀಟಿ ನೀಡುವ ದೃಶ್ಯ, ಜಿಲ್ಲೆಯ ಆಳಂದ ಪಟ್ಟಣದ ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರಿಗೆ ಸೇರಿದ ವಿವೇಕ ವರ್ಧಿನಿ ಶಾಲೆಯಲ್ಲಿ ಕಂಡು ಬಂದಿದೆ. ಪೊಲೀಸರು ಸಾಕಷ್ಟು ಬಿಗಿ ಬಂದೋಬಸ್ತ್ ಕೈಗೊಂಡರೂ ಕೆಲ ಹುಡುಗರು ಪ್ರಾಣದ ಹಂಗು ತೊರೆದು, ಎರಡನೇ ಮಹಡಿ ಹತ್ತಿ ಚೀಟಿ ನೀಡಿದ್ದಾರೆ.

ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ ಜಾರಿ ಇದೆ

SSLC ಪರೀಕ್ಷಾ ಕೇಂದ್ರದ ಸುತ್ತ ನಿಜೇದಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿ ಸಾರ್ವಜನಿಕರಿಗೆ ಪ್ರವೇಶವಿರೋದೆಲ್ಲಾ. ಆದ್ರೆ ಕಲಬುರ್ಗಿಯಲ್ಲಿ ಜನರು ಇದ್ಯಾವುದಕ್ಕೂ ತಲೆ ಕಡೆಸಿಕೊಂಡಿಲ್ಲ. ಪರೀಕ್ಷೆ ಬರೆಯುತ್ತಿರೋ ಮಕ್ಕಳಿಗೆ ಕಾಪಿ ಚೀಟಿ ಕೊಡಲು ಕಟ್ಟಡ ಹತ್ತಿದ್ದಾರೆ. ವರ್ದಿನಿ ಶಾಲೆಯಲ್ಲಿ ಚೀಟಿ ಕೊಡಲು ಪೈಪೋಟಿ ನಡೆಸಿದ ದೃಶ್ಯ ಕಂಡು ಬಂದಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ

ಯುವಕರ ದುಸ್ಸಾಸಕ್ಕೆ ಸಾರ್ವಜನಿಕರ ಆಕ್ರೋಶ

ಯುವಕರ ದುಸ್ಸಾಸಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.  ಪೊಲೀಸರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದ ಶಾಲೆಗಳಲ್ಲಿ ಚೀಟಿ ಭರಾಟೆ  ಜೋರಾಗಿದೆ ಎಂದು ಪೋಷಕರು ಕಿಡಿಕಾರಿದ್ದಾರೆ. 10 ಕ್ಕೂ ಹೆಚ್ಚು ಯುವಕರು ಶಾಲೆ ಸುತ್ತ ಓಡಾಡಿದ್ದಾರೆ. ಬಳಿಕ 4 ಅಂತಸ್ತಿನ ಕಟ್ಟಡವನ್ನು ಬರಿಗೈಯಲ್ಲಿ ಹತ್ತಿ 2ನೇ ಅಂತಸ್ತಿನಲ್ಲಿ ಪರೀಕ್ಷೆ ಬರೀತಿದ್ದಾ ವಿದ್ಯಾರ್ಥಿಗಳಿಗೆ ಕಿಟಕಿಯಲ್ಲಿ ಕಾಪಿ ಚೀಟಿ ನೀಡಿದ್ದಾರೆ



ಕಾಪಿ ಮಾಡಲು ಬಿಡಲ್ಲ ಅಂದಿದ್ರು ಇಲಾಖೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅಲ್ಲದೆ, ಪರೀಕ್ಷಾ ದಿನಗಳ ವಿಡಿಯೋ ದೃಶ್ಯಾವಳಿಗಳನ್ನು ಜಿಲ್ಲಾ ಹಂತದ ಸಮಿತಿಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಪರೀಕ್ಷಾ ಅಕ್ರಮಗಳು ನಡೆಯದಂತೆ ನಿಯಂತ್ರಿಸಲು ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಇಲಾಖೆ ತಿಳಿಸಿದೆ.

ಆಯಾ ದಿನವೇ ದೃಶ್ಯಾವಳಿ ವರದಿ

ಪ್ರತಿ ದಿನ ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಹಾರ್ಡ್‌ ಡಿಸ್ಕ್‌ಗಳಲ್ಲಿ ಸಂಗ್ರಹಿಸಿ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಆಯಾ ಜಿಲ್ಲೆಯ ಡಯಟ್‌ ಪ್ರಾಂಶುಪಾಲರ ನೇತೃತ್ವ ಸಮಿತಿಯು ದೃಶ್ಯಾವಳಿಗಳನ್ನು ಆಯಾ ದಿನವೇ ಪರಿಶೀಲಿಸಿ ಅಕ್ರಮದ ಮಾಹಿತಿಗಳಿದ್ದರೆ ಏ.20ರೊಳಗೆ ಇಲಾಖೆಗೆ ವರದಿ ನೀಡಬೇಕು ಎಂದು ತಿಳಿಸಿತ್ತು.

ಇದನ್ನೂ ಓದಿ: Hijab ಧರಿಸಿ SSLC ಪರೀಕ್ಷೆ ಬರೆಯಲು ಅವಕಾಶ; ಏಳು ಶಿಕ್ಷಕರ ಅಮಾನತು

ಅದೇ ರೀತಿ ಈ ವರ್ಷವೂ ರಾಜ್ಯದ (Karnataka) ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಈ ಹಿಂದಿನ ವರ್ಷದ ಪರೀಕ್ಷಾ ಅವಧಿಯಲ್ಲಿ ಹಲವು ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಒಂದು ವೇಳೆ ಅಳವಡಿಸದೆ ಇದ್ದಲ್ಲಿ, ಈ ವರ್ಷ ಹೊಸದಾಗಿ ಗುರುತಿಸಿರುವ ಕೇಂದ್ರಗಳಲ್ಲಿ ತಕ್ಷಣ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್‌ ಸೂಚಿಸಿದ್ರು.
Published by:Pavana HS
First published: