Bengaluru Rain: ರಾಜಕಾಲುವೆಯಲ್ಲಿ ಕೊಚ್ಚಿ ಹೋದ 24 ವರ್ಷದ ಯುವಕ

ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ನೀರಿನ ಜೊತೆ ಕೊಚ್ಚಿಹೋಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶುಕ್ರವಾರ ರಾತ್ರಿ ಬೆಂಗಳೂರಿನ (Bengaluru Rains) ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ವಸತಿ ಪ್ರದೇಶಗಳಿಗೆ (Residential Area)  ನೀರು ನುಗ್ಗಿರುವ ವರದಿಗಳು ಬಂದಿವೆ. ರಾತ್ರಿ ಏಳು ಗಂಟೆಯಿಂದ ಆರಂಭವಾದ ಮಳೆ, 1 ಗಂಟೆವರೆಗೆ ಸುರಿದಿದೆ. ಬೆಳಗಿನ ಜಾವವೂ ಸಹ ಅಲ್ಲಲ್ಲಿ ತುಂತುರು ಮಳೆಯಾಗಿದೆ. ತಡರಾತ್ರಿ ಸುರಿದ ಮಳೆಗೆ 24 ವರ್ಷದ ಯುವಕನೋರ್ವ ರಾಜಕಾಲುವೆಯ (Rajakaluve) ಪಾಲು ಆಗಿದ್ದಾನೆ. ಶಿವಮೊಗ್ಗ (Shivamogga) ಮೂಲದ ಮಿಥುನ್ ನೀರು ಪಾಲಾದ ಯುವಕ. ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ (Gayatri Badavane, KR Pura) ಈ ಘಟನೆ ನಡೆದಿದೆ. ಗಾಯತ್ರಿ ಬಡವಾಣೆಯಲ್ಲಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು.

ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ನೀರಿನ ಜೊತೆ ಕೊಚ್ಚಿಹೋಗಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಿಥುನ್

ಸದ್ಯ ಅಗ್ನಿಶಾಮಕ ಸಿಬ್ಬಂದಿ , ಎನ್ ಡಿಆರ್ ಎಪ್ ಸಿಬ್ಬಂದಿ ಕೊಚ್ಚಿ ಹೋದ ಯುವಕನ ಹುಡುಕಾಟ ಆರಂಭಿಸಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಿಥುನ್, ನಾಲ್ಕೈದು ಸ್ನೇಹಿತರ ಜೊತೆ ವಾಸವಾಗಿದ್ದರು.

ಇದನ್ನೂ ಓದಿ:  Power Cut: ಬೆಂಗಳೂರಿಗರೇ, ನಿಮ್ಮ ಏರಿಯಾದಲ್ಲಿ ಇಂದು, ನಾಳೆ ಪವರ್ ಪ್ರಾಬ್ಲೆಮ್ ಆಗುತ್ತೆ! ಬೇಗ ಕೆಲ್ಸ ಮುಗಿಸಿಕೊಳ್ಳಿ 

ಎರಡು ಪ್ರತ್ಯೇಕ ತಂಡಗಳಾಗಿ ಶೋಧ ಕಾರ್ಯ

ಎರಡು ಪ್ರತ್ಯೇಕ ತಂಡಗಳಾಗಿ ಯುವಕನಿಗಾಗಿ ಪತ್ತೆಕಾರ್ಯ ನಡೆಸಲಾಗುತ್ತಿದೆ. ಯುವಕ ರಾಜಕಾಲುವೆಗೆ ಬಿದ್ದ ಸ್ಥಳ (ಗಾಯತ್ರಿ ಬಡಾವಣೆಯಿಂದ) ಸುಮಾರು ಎರಡು ಕಿಲೋ‌ಮೀಟರ್ ವರೆಗೂ ಹುಡುಕಾಟ ಮಾಡಲಾಗುತ್ತಿದೆ. ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಮೊದಲಿಗೆ ಯುವಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Youth Washed Away In raja kaluve bengaluru mrq
ಮಿಥುನ್


ಕೆರೆಗೆ ಲಿಂಕ್ ಆಗಿರುವ ರಾಜಕಾಲುವೆ

ಕೆ.ಆರ್ ಪುರಂ ಬಳಿಯ ಸೀಗೆಹಳ್ಳಿ ಕೆರೆಗೆ ಈ ರಾಜಕಾಲುವೆ  ಸೇರಿಕೊಂಡಿದೆ. ರಾಜಕಾಲುವೆಯ ಜಾಲರಿಯಲ್ಲಿ ಯುವಕ ಪತ್ತೆಯಾಗದಿದ್ದಲ್ಲಿ ಕೆರೆಯಲ್ಲಿ ಯುವಕನ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚೀಫ್ ಫೈರ್ ಆಫೀಸರ್ ರವಿಪ್ರಸಾದ್ ನೇತೃತ್ವದಲ್ಲಿ ಯುವಕನ ಪತ್ತೆಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ:  Namma Metro: ಹೊಸ ಮಾರ್ಗಕ್ಕೆ ನಮ್ಮ ಮೆಟ್ರೋ; ಈ ಭಾಗದ ಜನರಿಗೆ ತಪ್ಪಲಿದೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ

ಬೆಂಗಳೂರು ಪೂರ್ವ ವಿಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ರಾಮಮೂರ್ತಿನಗರ ಕೆ ಆರ್ ಪುರಂ ಕಲ್ಕೇರೆ ಬಳಿ‌ ಮನೆಗಳಿಗೆ ನೀರು ನುಗ್ಗಿದೆ.

ಗೋಡೆ ಕುಸಿದು ಮನೆಯಲ್ಲಿದ್ದ ಮಹಿಳೆ ಸಾವು

ಬೆಂಗಳೂರಿನ ಕಾವೇರಿ ನಗರದಲ್ಲಿ ಗೋಡೆ ಕುಸಿದು 55 ವರ್ಷದ ಮನಿಯಮ್ಮ ಮೃತರಾಗಿದ್ದಾರೆ. ಗೋಡೆ ಬಿದ್ದ ಪರಿಣಾಮ ಉಳಿದ ಮನೆಯಲ್ಲಿದ್ದ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳು ಆಗಿವೆ.

ಮರಣೋತ್ತರ ಪರೀಕ್ಷೆಗೆ ಮೃತ ಮುನಿಯಮ್ಮ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಗೊಂಡಿರುವ ಮನೆಯ ಉಳಿದ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ  ವೆಂಕಟಚಲಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆಯ ಮಳೆಗೆ ಮತ್ತೆ ಸಾಯಿ ಲೇಔಟ್ ಜಾಲವೃತಗೊಂಡಿದೆ. ಮೇನಲ್ಲಿಯೂ ಈ ಲೇಔಟ್ ಜಲಾವೃತಗೊಂಡಿತ್ತು. ಇಡೀ ರಸ್ತೆಯೇ ಕೆರೆಯಾಗಿ ಬದಲಾಗಿದ್ದು, ಜನರು ಹೊರ ಬರಲಾಗದೇ ಮನೆಯಲ್ಲಿಯೇ ಬಂಧಿಯಾಗಿದ್ದಾರೆ.

ಸಚಿವ ಬೈರತಿ ಬಸವರಾಜ್ ಭೇಟಿ

ಇನ್ನೂ ಯುವಕ ಕೊಚ್ಚಿ ಹೋದ ಸ್ಥಳಕ್ಕೆ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಾನು ಶಾಸಕನಾಗುವ ಮುಂಚೆ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಎಂದರು. ಶುಕ್ರವಾರ ರಾತ್ರಿ ಅತಿ ಹೆಚ್ಚು ಮಳೆಯಾಗಿದೆ. ಮಳೆ ಅನಾಹುತ ಅಗಿರುವ ಮನೆಗಳಿಗೆ ಪರಿಹಾರ ಕೊಡುತ್ತೇವೆ. ಒಂದು ಸಾವು ಅಗಿದೆ ಅ ಯುವಕನ ಕುಟುಂಬಕ್ಕೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.
Published by:Mahmadrafik K
First published: