• Home
  • »
  • News
  • »
  • state
  • »
  • Hubballi Crime News: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಮಗನಿಗೆ ಚಾಕುವಿನಿಂದ ಇರಿದ ಅಪ್ಪ

Hubballi Crime News: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಮಗನಿಗೆ ಚಾಕುವಿನಿಂದ ಇರಿದ ಅಪ್ಪ

ಹುಬ್ಬಳ್ಳಿ

ಹುಬ್ಬಳ್ಳಿ

ಗಂಭೀರವಾಗಿ ಗಾಯಗೊಂಡ ಜಗದೀಶನನ್ನು ಕಿಮ್ಸ್ ಗೆ (KIMS Hubballi) ದಾಖಲು ಮಾಡಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂದೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾರೆ.

  • Share this:

Hubballi News: ಹೆತ್ತಪ್ಪನೇ (Father) ಮಗನಿಗೆ (Son) ಚಾಕುವಿನಿಂದ  (Stab) ಇರಿದಿದ್ದಾರೆ. ಇಂಥದ್ದೊಂದು ವಿಚಿತ್ರ ಘಟನೆ ಹುಬ್ಬಳ್ಳಿ ನಗರದಲ್ಲಿ (Hubballi City) ಬೆಳಕಿಗೆ ಬಂದಿದೆ. ತಾಯಿಯನ್ನು (Mother) ಅವಾಚ್ಯ ಶಬ್ದಗಳಿಂದ (Foul Language) ನಿಂದಿಸಿದನೆಂದು ತಂದೆ ಮಗನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ  (Hale Hubballi Police Station) ವ್ಯಾಪ್ತಿಯಲ್ಲಿ ನ ಹೆಗ್ಗೆರಿಯಲ್ಲಿ ಘಟನೆ ನಡೆದಿದೆ. ಶಂಕರ್ ರಾಮಕೃಷ್ಣ ಸೂಗೂರ ಎಂಬಾತನೇ ಮಗನಿಗೆ ಚಾಕುವಿನಿಂದ ಇರಿದ ತಂದೆಯಾಗಿದ್ದಾನೆ. ತನ್ನ ಮಗ ಜಗದೀಶ್ ಶಂಕರ ಸೂಗೂರ (31) ಗೆ ಚಾಕುವಿನಿಂದ ಇರಿದಿದ್ದಾರೆ.


ತಂದೆ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಮಗ ಕೈಗೆ ಸಿಕ್ಕ ವಸ್ತುಗಳನ್ನ ಎಸೆಯುತ್ತಿದ್ದ ಎನ್ನಲಾಗಿದೆ. ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಎಸೆಯೋ ಜೊತೆಗೆ, ಜಗದೀಶ್ ತಂದೆ ತಾಯಿಗೆ ಕಿರುಕುಳ‌ ನೀಡುತ್ತಿದ್ದನು, ಜಗದೀಶ್ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದ್ದು, ಮಗನ ಕಿರುಕುಳಕ್ಕೆ ಸಿಟ್ಟಿಗೆದ್ದ ತಂದೆಯಿಂದ ಕುತ್ತಿಗೆಗೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ.


ಗಂಭೀರವಾಗಿ ಗಾಯಗೊಂಡ ಜಗದೀಶನನ್ನು ಕಿಮ್ಸ್ ಗೆ (KIMS Hubballi) ದಾಖಲು ಮಾಡಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂದೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾರೆ.


ಇದನ್ನೂ ಓದಿ:  Karnataka Weather Report: ನಿಲ್ಲುತ್ತಿಲ್ಲ ವರುಣನ ಆರ್ಭಟ, ಮುಂದಿನ ಮೂರು ದಿನ ಮಳೆ ಸಾಧ್ಯತೆ


ಆಯತಪ್ಪಿ ಮೋರಿಗೆ ಬಿದ್ದ ಹಸು ರಕ್ಷಣೆ


ಹಸುವೊಂದು (Cow) ಆಯ ತಪ್ಪಿ ಮೋರಿಗೆ ಬಿದ್ದ ಘಟನೆ ಹುಬ್ಬಳ್ಳಿಯ ಶೀಲವಂತರ ಓಣಿಯಲ್ಲಿ ನಡೆದಿದೆ. ಮೋರಿ ತುಂಬಿ ಹರಿಯುತ್ತಿದ್ದರಿಂದ ಅಚಾನಕ್ಕಾಗಿ ಹೋಗಿ ಹಸು ಮೋರಿಯಲ್ಲಿ ಸಿಲುಕಿಕೊಂಡಿದೆ. ಮೇಲೇಳಲು ಒದ್ದಾಟ ನಡೆಸುತ್ತಿದ್ದ ಹಸುವನ್ನು ನೋಡಿದ ಸ್ಥಳೀಯರು, ಜಾನುವಾರು ರಕ್ಷಣೆ ಮಾಡಿದ್ದಾರೆ.


ಮೋರಿ ಕಿರಿದಾಗಿದ್ದರಿಂದ ಮೇಲೆತ್ತಲು ಜನ ಹರಸಾಹಸಪಡುವಂತಾಯಿತು. ಹೂಳು ತುಂಬಿರೋದ್ರಿಂದ ಮೋರಿಗಳು ತುಂಬಿ ಹರಿಯುತ್ತಿವೆ. ಮಳೆಗಾಲಕ್ಕೂ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಮೋರಿಯಲ್ಲಿನ ಹೂಳು ತೆಗೆದು ನೀರು ಸಲೀಸಾಗಿ ಹೋಗೋಕೆ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


ನಿರಂತರ ಮಳೆಗೆ ಮನೆಗಳ ಕುಸಿತ


ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಳೆ (Hubballi Rainfall) ಮುಂದುವರಿದಿದೆ. ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಹುಬ್ಬಳ್ಳಿಯ ಹಲವೆಡೆ ಮನೆಗಳ ಕುಸಿತವಾಗಿದೆ. ಮೇದಾರ ಓಣಿ ಸೇರಿ ಹಲವೆಡೆ ಮನೆಗಳು ಕುಸಿದಿವೆ. ನಗರದ ವಿವಿಧೆಡೆ ಸುಮಾರು 20 ಮನೆಗಳ ಕುಸಿತವಾಗಿದೆ ಎಂಬ ಮಾಹಿತಿ ಇದೆ.


ಮನೆ ಬಿದ್ದ ಸ್ಥಳಕ್ಕೆ ಭೇಟಿ ನೀಡುತ್ತಿರುವ ಕಂದಾಯ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಮೇದಾರ ಓಣಿಯಲ್ಲಿ ಬೈಕ್ ಮೇಲೆ ಗೋಡೆ ಕುಸಿದಿರುವುದು ಹೊರತುಪಡಿಸಿ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ನಗರದಲ್ಲಿ ಮಳೆ ಮುಂದುವರೆದಿದ್ದು, ಮಣ್ಣಿನ ಮನೆಗಳು ಬೀಳುವ ಆತಂಕ ಎದುರಿಸುತ್ತಿವೆ.


ಉಸ್ತುವಾರಿ ಸಚಿವರ ಬಗ್ಗೆ ಶೆಟ್ಟರ್ ಅಸಮಾಧಾನ


ಇನ್ನು ಮಳೆ ನಿರಂತರವಾಗಿ ಬರುತ್ತಿದ್ದರು ಕೆಲ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡದೇ ಇರುವ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಅತೃಪ್ತಿ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  Guruji Murder Case: ಚಂದ್ರಶೇಖರ ಗುರೂಜಿ ಹಂತಕರು ಮತ್ತೆ ಪೊಲೀಸ್ ಕಸ್ಟಡಿಗೆ; ಕೊಲೆಗಡುಕರಿಗೆ ಫುಲ್​ ಡ್ರಿಲ್​


ಕೆಲವೆಡೆ ಸಚಿವರು ಭೇಟಿ ನೀಡಿದ್ದರೆ, ಮತ್ತೆ ಕೆಲವೆಡೆ ಭೇಟಿ ನೀಡಿಲ್ಲ. ಮಳೆ ಹಾನಿಗೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವ ಕೆಲಸ ನೆಡಯಬೇಕಿದೆ. ಎಲ್ಲಾ ಕಡೆ ಮಳೆ ಸುರಿಯುತ್ತಿದೆ. ತಮ್ಮ ತಮ್ಮ ಜಿಲ್ಲೆಗಳಲ್ಲಿಯೂ ಮಳೆಯ ಪರಿಸ್ಥಿತಿ ಅವಲೋಕಿಸಿ, ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಿಗೂ ಬರಲಿದ್ದಾರೆ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ

Published by:Mahmadrafik K
First published: