Bengaluru: ಜನನಿಬಿಡ ಪ್ರದೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕ

ಅಂಕುಶ್: ಪಾಕ್​ ಪರ  ಘೋಷಣೆ ಕೂಗಿದ ಯುವಕ

ಅಂಕುಶ್: ಪಾಕ್​ ಪರ ಘೋಷಣೆ ಕೂಗಿದ ಯುವಕ

ಯುವಕನ ಪೂರ್ವಾಪರ ಬಗ್ಗೆ ವಿಚಾರಿಸಿ ಯುವಕನನ್ನು ಕಳುಹಿಸಲಾಗಿದೆ. ಘಟನೆ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಬೆಂಗಳೂರು: ರಾಜಧಾನಿಯ ಮೈಕೋ ಲೇಔಟ್ (Mico Layout) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ (Youth) ಪಾಕಿಸ್ತಾನ ಪರ ಘೋಷಣ ಕೂಗಿದ್ದಾನೆ.ಬಿಟಿಎಂ ಲೇಔಟ್ 2nd ಸ್ಟೇಜ್ 7th ಮೈನ್ ಬಳಿ ಬುಧವಾರ ಬೆಳಗ್ಗೆ 24 ವರ್ಷದ ಅಂಕುಶ್ ಎಂಬಾತ ಪಾಕಿಸ್ತಾನ (Pakistan) ಜಿಂದಾಬಾದ್ಎಂದು ಕೂಗಿದ್ದಾನೆ. ಈ ವೇಳೆ ಉಗ್ರ ಇರಬಹುದು ಎಂದು ಒಂದು ಕ್ಷಣ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಸ್ಥಳೀಯರು ತಕ್ಷಣವೇ ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದ ವಿಚಾರಣೆ ಮಾಡಿದಾಗ ಯುವಕ ಮಾನಸಿಕ ಅಸ್ವಸ್ಥ ಅನ್ನೋದು ಗೊತ್ತಾಗಿದೆ. ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೂ ಯುವಕನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.


ನಂತರ ಅಂಕುಶ್ ಮನೆಯವರಿಗೆ ಮಾಹಿತಿ ನೀಡಿದ್ದು, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ. ಯುವಕ ಪಶ್ಚಿಮ ಬಂಗಾಳ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ.


ನಂತರ ಯುವಕನ ಪೂರ್ವಾಪರ ಬಗ್ಗೆ ವಿಚಾರಿಸಿ ಯುವಕನನ್ನು ಕಳುಹಿಸಲಾಗಿದೆ. ಘಟನೆ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.


ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ


ರಾಜ್ಯದಲ್ಲಿ ನಿನ್ನೆಯಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಬೆಂಗಳೂರಿನಲ್ಲಿ ಲೈಸೆನ್ಸ್ ಹೊಂದಿರುವ ಸಾರ್ವಜನಿಕರು ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ ಹೇರಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯ ಆಗುವವರೆಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಆದೇಶಿಸಲಾಗಿದೆ.




ಲೈಸೆನ್ಸ್ ಹೊಂದಿರುವ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸಬೇಕು ಅಂತಾ ತಿಳಿಸಲಾಗಿದೆ. ಏಪ್ರಿಲ್ 10ರ ಒಳಗಾಗಿ ಠಾಣೆಯಲ್ಲಿ ಡೆಪಾಸಿಟ್ ಮಾಡುವಂತೆ ಕಮಿಷನರ್ ಪ್ರತಾಪ್ ರೆಡ್ಡಿ ‌ಆದೇಶಿಸಿದ್ದಾರೆ.


ಇದನ್ನೂ ಓದಿ: Beluru: ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಕುರಾನ್ ಪಠಣಕ್ಕೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?


ಬಂದೂಕುಗಳು ವಶಕ್ಕೆ

top videos


    ನೆಲಮಂಗಲದ ಟೌನ್ ಪೊಲೀಸರು ಬಂದೂಕುಗಳನ್ನ ವಶಕ್ಕೆ ಪಡೆದಿದ್ದಾರೆ. ಒಂಟಿ ಮನೆ ಹಾಗೂ ಜಮೀನು ಭದ್ರತೆಗೆ ನೀಡಿರುವ ಬಂದೂಕುಗಳನ್ನ ವಶಕ್ಕೆ ಪಡೆಯಲಾಗಿದ್ದು, ಚುನಾವಣೆ ಮುಗಿಯುವವರೆಗೂ ಬಂದೂಕುಗಳು ಪೊಲೀಸರ ವಶದಲ್ಲೇ ಇರಲಿವೆ. ಚುನಾವಣೆ ಮುಗಿದ ಬಳಿಕ ಬಂದೂಕುಗಳನ್ನ ವಾಪಸ್ ನೀಡಲಾಗುತ್ತದೆ

    First published: