Varuna ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಯುವಕರ ಆಕ್ರೋಶ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ನಮಗೆ ಬದಲಾವಣೆ ಬೇಕಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರನ್ನು ಬೆಂಬಲಿಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಸೋಮಣ್ಣ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

  • News18 Kannada
  • 4-MIN READ
  • Last Updated :
  • Mysore, India
  • Share this:

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ (Varuna Constituency) ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ದಲಿತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಂಬಲ ಗ್ರಾಮದ ಯುವಕರು ವಿಡಿಯೋ (Video) ರಿಲೀಸ್ ಮಾಡಿದ್ದು, ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಸಬಾ ಹೋಬಳಿಯಲ್ಲಿ ಸಿದ್ದರಾಮಯ್ಯ ಸಾಧನೆ ಬಗ್ಗೆ ಯುವಕರು ಪ್ರಶ್ನೆ ಮಾಡಿದ್ದಾರೆ. ನಾವು ಕಳೆದ 20-25 ವರ್ಷಗಳಿಂದ ಕಾಂಗ್ರೆಸ್​ಗಾಗಿ (Congress) ದುಡಿಯುತ್ತಿದ್ದೇವೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಿದ್ದರಾಮಯ್ಯ ಅವರು ಜಾತಿ‌ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಭಾಗ ತಮ್ಮ‌ ಜನಾಂಗದ ಪಿಡಿಓಗಳನ್ನು (ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು) ನೇಮಿಸಿಕೊಂಡಿದ್ದಾರೆ ಎಂದು ಯುವಕರ ಗುಂಪು ಆರೋಪಿಸಿದೆ.


ಸಿದ್ದರಾಮಯ್ಯ ಅವರ ಜೊತೆಯಲ್ಲಿದ್ದ ಕಾರ್ಯಕರ್ತರಿಗೆ ಆರಂಭದಲ್ಲಿ ಒಂದು ಗುಂಟೆ ಜಾಗ ಇರಲಿಲ್ಲ. ಈಗ ಹತ್ತತ್ತು ಎಕರೆ ಭೂಮಿ ಮಾಡಿಕೊಂಡಿದ್ದಾರೆ. ಅವರು ಯುವಕರನ್ನು ಬಿಟ್ಟು ಹಲವರನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಯುವಕರನ್ನು ಕಡೆಗಣಿಸಿ ಹಳಬರನ್ನು ತೆಗೆದುಕೊಂಡು ಹೋಗ್ತಿದ್ದಾರೆ ಎಂದಿದ್ದಾರೆ.


ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ


ಪ್ರತಿಯೊಂದು ಪಂಚಾಯಿತಿಯಲ್ಲಿ ತಮ್ಮದೇ ಸಮುದಾಯದ ಜನರನ್ನು ನೇಮಿಸಿಕೊಂಡಿದ್ದರಿಂದ ಕುರುಬು ಸಮುದಾಯದ ಮಂದಿಗೆ ಮಾತ್ರ ಕೆಲಸ ಮಾಡಿಕೊಳ್ಳಲಾಗಿದೆ. ದಲಿತರಿಗೆ ಯಾವುದೇ ಅವಕಾಶ ಕೊಡ್ತಿಲ್ಲ. ಅಹಿಂದ ಅನ್ನೋದು ಅವರ ಹೇಳಿಕೆಯಲ್ಲಿ ಮಾತ್ರ ಇದೆ. ಕುರುಬು ಸಮುದಾಯದ ಹೊರತು ಬೇರೆ ಯಾರಿಗೂ ಯಾವ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂದು ಯುವಕರು ಆರೋಪಿಸಿದ್ದಾರೆ.


ಇದನ್ನೂ ಓದಿ:  BS Yediyurappa: ಮಾಜಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದು ತಿರುಗೇಟು ನೀಡಿದ ಲಿಂಗಾಯತ ಯುವ‌ ಮುಖಂಡ




ನಮಗೆ ಬದಲಾವಣೆ ಬೇಕಿದೆ

top videos


    2013 ಮತ್ತು 2018ರಲ್ಲಿದ್ದ ಸಿದ್ದರಾಮಯ್ಯ ಬೇರೆ. ಈಗಿರೋ ಸಿದ್ದರಾಮಯ್ಯ ಬೇರೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಸಿದ್ದರಾಮಯ್ಯ ಸೀಮಿತರಾಗುತ್ತಿದ್ದಾರೆ. ನಮಗೆ ಬದಲಾವಣೆ ಬೇಕಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರನ್ನು ಬೆಂಬಲಿಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಸೋಮಣ್ಣ ಗೆಲ್ಲುತ್ತಾರೆ ಎಂದು ಹೇಳಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    First published: