Yadagiri: ಬದನೆಕಾಯಿ ಕಳ್ಳತನ; ಮೂವರು ಜೀವದ ಗೆಳೆಯರಲ್ಲಿ ಒಬ್ಬನ ಕೊಲೆ, ಇಬ್ಬರು ಜೈಲು ಪಾಲು

ಬದನೆಕಾಯಿ ಕಳ್ಳತನ (Theft) ಮಾಡುವದನ್ನು ಬಯಲಿಗೆ ಎಳೆದಕ್ಕಾಗಿ ಸ್ನೇಹಿತರು ಗೆಳೆಯನ ಕೊಲೆ ಮಾಡಿ ಈಗ ಜೈಲು (Prison) ಸೇರಿದ್ದಾರೆ.

ಕೊಲೆಯಾದ ಸಚಿನ್

ಕೊಲೆಯಾದ ಸಚಿನ್

  • Share this:
ಯಾದಗಿರಿ: ಅವರು ಜೀವದ ಗೆಳೆಯರು (Friends) ಆದರೆ ಜೀವದ ಗೆಳೆಯರೇ ಸ್ನೇಹಿತನ ಜೀವ ತೆಗೆದಿದ್ದಾರೆ. ಹೆಣ್ಣು, ಹೊನ್ನು, ಮಣ್ಣು ವಿಷಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೊಲೆ ಘಟನೆಗಳು ಜರುಗುತ್ತವೆ. ಆದರೆ ಇಲ್ಲಿ ಈ ವಿಷಯಗಳ ಹೊರತಾಗಿ ಕೇವಲ ಬದನೆಕಾಯಿ ಕಳ್ಳತನ (Theft) ಮಾಡುವದನ್ನು ಬಯಲಿಗೆ ಎಳೆದಕ್ಕಾಗಿ ಸ್ನೇಹಿತರು ಗೆಳೆಯನ ಕೊಲೆ ಮಾಡಿ ಈಗ ಜೈಲು (Prison) ಸೇರಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ (Shahapur, Yadagiri) ತಾಲೂಕಿನ ಚಾಮನಾಳ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮೇ 30 ರಂದು ಸಚಿನ್ ಮುರುಕುಂಡನ ಶವ ಪತ್ತೆಯಾಗಿತ್ತು.

ದಂಡಸೊಲ್ಲಾಪುರ ಗ್ರಾಮದ ಲಕ್ಷ್ಮಿ ಹಾಗೂ ದೇವಿಂದ್ರಪ್ಪನ ದಂಪತಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಅದರಲ್ಲಿ ಹಿರಿಯ ಪುತ್ರನಾದ ಸಚಿನ್ ಚಾಮನಾಳ ಗ್ರಾಮದಲ್ಲಿ ಗ್ಯಾರೇಜ್ ಅಂಗಡಿ ಹಾಕಿಕೊಂಡು ಕುಟುಂಬ ನಡೆಸುತ್ತಿದ್ದನು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕುಟುಂಬಸ್ಥರು ಕೂಡ ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದರು.

ಜೀವದ ಗೆಳೆಯರೇ ಜೀವ ತೆಗೆದರು

ಸಚಿನ್ ಸಂಘ ಜೀವಿಯಾಗಿದ್ದನು. ಹೆಚ್ಚು ಸ್ನೇಹಿತರು ಹೊಂದಿದ್ದ ನು.ಚಾಮನಾಳ ತಾಂಡಾದ ಚಂದ್ರಕಾಂತ್ ರಾಠೋಡ ಹಾಗೂ ದಂಡಸೊಲ್ಲಾಪುರ ಗ್ರಾಮದ ಹಳ್ಳೆಪ್ಪ ಮಾದರ್ ಅವರ ಜೀವದ ಗೆಳೆಯರಾಗಿದ್ದರು. ಮೂವರು ಆತ್ಮೀಯ ಸ್ನೇಹಿತರಿದ್ದರು.

ಏನೇ ಮಾಡಿದರೂ ಒಬ್ಬರಿಗೊಬ್ಬರು ಸಹಾಯವಾಗುತ್ತಿದ್ದರು. ಆದ್ರೆ ಮೂವರು ಸ್ನೇಹಿತರಿಗೆ ಅದೊಂದು ವೀಕ್ನೆಸ್ ಇತ್ತು. ಅದೇನಪ್ಪಾ ಅಂದರೆ ರಾತ್ರಿಯಾದರೆ ಎಣ್ಣೆ ಹಾಕುವದು.

ಇದನ್ನೂ ಓದಿ:  Suicide: ಪುಟ್ಟ ಕಂದನ ಎದುರೇ ನೇಣಿಗೆ ಶರಣಾದ ತಾಯಿ; ಶವದ ಮುಂದೆ 2 ಗಂಟೆ ರೋಧಿಸಿದ ಮಗು

ಕಳ್ಳತನ ದಾರಿ ಹಿಡಿದಿದ್ದ ಮೂವರು ಗೆಳೆಯರು

ಹಳ್ಳೆಪ್ಪ ಹಮಾಲಿ ಕೆಲಸ ಮಾಡುತ್ತಿದ್ದನು. ಚಂದ್ರಕಾಂತ್ ಸಾ ಮೀಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಮೂವರೂ ಮದ್ಯ ವ್ಯಸನಿಗಳಿದ್ದರು. ಆದರೆ ತಾವು ದುಡಿದ ಹಣದಲ್ಲಿ ಜೀವನ ನಡೆಸಲು ಕಷ್ಟವಾಗಿತ್ತು. ಹೀಗಾಗಿ ಮೂವರು ಸ್ನೇಹಿತರು ಕಳ್ಳತನ ದಾರಿ ಹಿಡಿಯುತ್ತಾರೆ.

ಗ್ರಾಮದ ಸುತ್ತಮುತ್ತಲಿನ ಜಮೀನು ಪ್ರದೇಶದಲ್ಲಿರುವ ತರಕಾರಿ ಕದ್ದು ಮಾರಾಟ ಮಾಡಿ ರಾತ್ರಿ ಕಂಠಪೂರ್ತಿ ಕುಡಿಯುತ್ತಿದ್ದರು. ಬೈಕ್ ನಲ್ಲಿರುವ ಡಿಸೇಲ್ ಇಲ್ಲವೇ ಗುಜರಿ ವಸ್ತುಗಳನ್ನು ಕೂಡ ಬಿಡದೆ ಕದ್ದು ಮಾರಾಟ ಮಾಡಿ ಎಣ್ಣೆ ಬಾಟಲ್ ಗಳನ್ನು ಖರೀದಿ ಮಾಡಿ ಮೂವರು ಸ್ನೇಹಿತರು ಮದ್ಯ ಸೇವನೆ ಮಾಡುತ್ತಿದ್ದರು.

ದೂರು ನೀಡದ ಗ್ರಾಮಸ್ಥರು

ಮುಂದೊಂದು ದಿನ ಇದೆ ಕಳ್ಳತನ ಪ್ರಕರಣ ಓರ್ವ ಸ್ನೇಹಿತನ ಬಲಿ ಪಡೆಯುತ್ತೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮೂವರು ಸ್ನೇಹಿತರ ಕಳ್ಳತನ ಪ್ರಕರಣಗಳು ಯಾರು ಕೂಡ ಪೊಲೀಸ ಠಾಣೆಗೆ ದೂರು ನೀಡಿರಿಲಿಲ್ಲ. ಒಂದು ವೇಳೆ ದೂರು ನೀಡಿದದ್ರೆ ಯಾರಾದರೀ ಸ್ನೇಹಿತರು ಜೈಲಿಗೆ ಹೋಗಿದ್ದರೆ ಈ ಘಟನೆ ಜರುಗುತ್ತಿರಲಿಲ್ಲ. ಸಣ್ಣ ಪುಟ್ಟ ಕಳ್ಳತನವೆಂದು ಜನರು ಕೂಡ ಸುಮ್ಮನೆ ಇದ್ದರು.

ಬದನೆಕಾಯಿ ಕಳ್ಳನಿಂದ ಕೊಲೆ..!

ಮೇ 30 ರಂದು ಚಂದ್ರಕಾಂತ್ ರಾಠೋಡ್ ತಮ್ಮದೇ ತಾಂಡಾದ ಜಮೀನಿನಲ್ಲಿರುವ ಸೀತಾರಾಮ್ ರಾಠೋಡ ಅವರ ತೋಟದಲ್ಲಿರುವ ಬದನೆಕಾಯಿ ಹರಿದುಕೊಂಡು ಹೋಗುತ್ತಾನೆ.

ಈ ವಿಷಯ ಸಚಿನ್ ಹಾಗೂ ಹಳ್ಳೆಪ್ಪಗೆ ಗೊತ್ತಾಗುತ್ತದೆ. ಈ ವಿಷಯವನ್ನು ಸಚಿನ್ ಹಾಗೂ ಹಳ್ಳೆಪ್ಪ ಹೊಲದ ಮಾಲೀಕನಿಗೆ ತಿಳಿಸುತ್ತಾರೆ. ಹೊಲದ ಮಾಲೀಕ ಚಂದ್ರಕಾಂತ್ ಜೊತೆ ಜಗಳ ಮಾಡುತ್ತಾನೆ. ನಂತರ ಬದನೆಕಾಯಿ ಕಳ್ಳತನ ಮಾಡಿದ್ದ ವಿಷಯ ಸ್ನೇಹಿತರೇ ಹೇಳಿದ್ದಾರೆಂದು ಚಂದ್ರಕಾಂತ್ ಕೋಪಗೊಳ್ಳುತ್ತಾನೆ. ಮೇ 30 ರಂದು ಮತ್ತೆ ಮೂವರು ಸ್ನೇಹಿತರು ಬದನೆಕಾಯಿ ಕಳ್ಳತನ ಮಾಡಿದ್ದ ಹೊಲದ ಜಾಗಕ್ಕೆ ತೆರಳಿ ಮದ್ಯ ಸೇವನೆ ಮಾಡುತ್ತಾರೆ.

ಬದನೆಕಾಯಿ ತೋಟದಲ್ಲಿಯೇ ಸಚಿನ್ ಕೊಲೆ

ಸಚಿನ್ , ಚಂದ್ರಕಾಂತ್ ಹಾಗೂ ಹಳ್ಳೆಪ್ಪ ಮೂವರು ರಾತ್ರಿ ಬದನೆಕಾಯಿ ತೋಟದಲ್ಲೇ ಮದ್ಯ ಸೇವನೆ ಮಾಡುತ್ತಾರೆ. ಈ ವೇಳೆ ಚಂದ್ರಕಾಂತ್ ಬದನೆಕಾಯಿ ಕಳ್ಳತನ ಮಾಡಿದ್ದು ಯಾಕೆ ಮಾಲೀಕರಿಗೆ ತಿಳಿಸಿದ್ದಿರಿ ಎಂದು ಕೇಳುತ್ತಾನೆ. ಇದಕ್ಕೆ ಸಚಿನ್ ಬದನೆಕಾಯಿ ನಾನು ಕದ್ದಿಲ್ಲ. ಸುಮ್ಮನೆ ನಮ್ಮ ಮೇಲೆ ಜನರು ಆರೋಪ ಮಾಡುತ್ತಾರೆ. ಹೀಗಾಗಿ ನಾನು ಇದ್ದ ವಿಷಯವನ್ನು ಮಾಲೀಕನಿಗೆ ತಿಳಿಸಿದ್ದೇನೆ‌ ಎಂದಾಗ ಚಂದ್ರಕಾಂತ್ ಹಳ್ಳೆಪ್ಪ ನ ಮೇಲೆ ಕೂಡ ಕೋಪಗೊಳ್ಳುತ್ತಾನೆ.

ಬದನೆಕಾಯಿ ಜಗಳ ತಾರಕಕ್ಕೆರುತ್ತದೆ. ಪರಸ್ಪರ ಜಗಳವಾಡುತ್ತಾರೆ. ಈ ವೇಳೆ ಸಚಿನ್ ಮದಿರೆಯ ನಶೆಯಲ್ಲಿ ಹಳ್ಳೆಪ್ಪನಿಗೆ ನಿನ್ನ ಹೆಂಡತಿಯನ್ನು ಒಂದು ದಿನ ನನ್ನ ಕಡೆ ಕಳುಹಿಸಿಕೊಂಡು ನಾನು ಮಲಗುತ್ತೆನೆಂದಾಗ ಬದನೆಕಾಯಿ ಜಗಳದಲ್ಲಿ ಕೋಪದಲ್ಲಿದ್ದ ಚಂದ್ರಕಾಂತ್ ಕಲ್ಲು ಎತ್ತು ಹಾಕುತ್ತಾನೆ.

ನಿರ್ಜನ ಪ್ರದೇಶದಲ್ಲಿ ಶವ ಎಸೆದ್ರು

ಹಳ್ಳೆಪ್ಪ ಸಮೀಪದಲ್ಲಿದ್ದ ಸೀರೆಯನ್ನು ತೆಗೆದುಕೊಂಡು ಸಚಿನ್ ನ ಕುತ್ತಿಗೆಗೆ ಸೀರೆ ಸುತ್ತಿ ಇಬ್ಬರು ಸ್ನೇಹಿತರು ಮದ್ಯದ ನಶೆಯಲ್ಲಿ ಸ್ನೇಹಿತನ ಪ್ರಾಣ ತೆಗೆಯುತ್ತಾರೆ. ಜಮೀನಿನ ಬದುವಿನ ಭಾಗದಲ್ಲಿ ಕೊಲೆ ಮಾಡಿ ನಂತರ ಸ್ವಲ್ಪ ದೂರದ ನಿರ್ಜನ ಪ್ರದೇಶದ ಕೊಲೆ ಮಾಡಿ ಸಚಿನ್ ಶವ ಇಡುತ್ತಾರೆ.

ಇದನ್ನೂ ಓದಿ:  Crime News: ಇಬ್ಬರು ಹೆಂಡ್ತಿಯ ಮುದ್ದಿನ ಗಂಡನ ಬರ್ಬರ ಹತ್ಯೆ! 20 ವರ್ಷ ಬಿಟ್ಟು ಬಂದ ತಂದೆಯನ್ನು ಕೊಂದ ಮಗ

ಕೊಲೆ ಮಾಡಿ ಎಸ್ಕೆಪ್ ಆದ ಸ್ನೇಹಿತರು..!

ಕೊಲೆ ಮಾಡಿ ಸ್ನೇಹಿತರಾದ ಚಂದ್ರಕಾಂತ್ ಹಾಗೂ ಹಳ್ಳೆಪ್ಪ ಎಸ್ಕೆಪ್ ಆಗುತ್ತಾರೆ. ಚಂದ್ರಕಾಂತ್ ತಾನು ಕೆಲಸ ಮಾಡುವ ಸಾ ಮೀಲ್ ಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ನಂತರ ಮನೆಗೆ ಹೋಗುತ್ತಾನೆ. ಇನ್ನೊಬ್ಬ ಸ್ನೇಹಿತ ಹಳ್ಳೆಪ್ಪ ಕೊಲೆ ಮಾಡಿ ಮನೆಗೆ ತೆರಳಿ ಅನುಮಾನ ಬರದಂತೆ ಮನೆಯಲ್ಲಿ ಬಟ್ಟೆ ಬದಲಾಯಿಸಿಕೊಂಡು ಊರಲ್ಲಿ ಚಾಮನಾಳ ಹೊರಭಾಗದಲ್ಲಿ ಯಾರೋ ಸತ್ತಿದ್ದಾರೆ ಎಂದು ಹೇಳುತ್ತಾನೆ

ಶ್ವಾನ ಪತ್ತೆ ಕಾರ್ಯ ಆರೋಪಿಗಳು ಬಂಧನ

ಗೋಗಿ ಪೊಲೀಸರು ಹಾಗೂ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಆಗಮಿಸಿ ಪರಿಶೀಲನೆ ಮಾಡುವಾಗ ಹಳ್ಳೆಪ್ಪ ಸ್ಥಳದಲ್ಲಿಯೇ ಇರುತ್ತಾನೆ. ಈ ವೇಳೆ ಪೊಲೀಸರು ಶ್ವಾನದಳ ಕರೆಸುತ್ತಾರೆ. ಶ್ವಾನವು ಹಳ್ಳೆಪ್ಪನ ಹತ್ತಿರ ತೆರಳಿ ಪತ್ತೆ ಕಾರ್ಯ ಮಾಡುತ್ತದೆ. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ನಂತರ ಪೊಲೀಸರು ಹಳ್ಳೆಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದು ಒಪ್ಪಿಕೊಂಡು ಚಂದ್ರಕಾಂತನ ಜೊತೆ ಸೇರಿಕೊಂಡು ಕೊಲೆ ಮಾಡಿರುವ ವಿಷಯ ಹೇಳುತ್ತಾನೆ. ನಂತರ ಪೊಲೀಸರು ಮನೆಯಲ್ಲಿ ಅಡಗಿ ಕುಳಿತಿರುವ ಚಂದ್ರಕಾಂತನನ್ನು ಬಂಧನ ಮಾಡುತ್ತಾರೆ.
Published by:Mahmadrafik K
First published: