ರಾಮನಗರ : ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಕೊಲೆ ಮಾಡಿರುವ ಘಟನೆ ರಾಮನಗರ (Ramanagara) ತಾಲೂಕಿನ ಬಿಳಗುಂಬ ಬಳಿಯ ನೂತನ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮೃತ ರಂಜಿತ್ (26) ವರ್ಷದ ಯುವಕ, ಮೂಲತ ಬೆಂಗಳೂರು ನಿವಾಸಿ ಎನ್ನಲಾಗಿದೆ. ರಾಮನಗರದ ಹೊಸ ಬೈಪಾಸ್ ಪಕ್ಕದ ಮಾವಿನ ತೋಟದಲ್ಲಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ ನಡೆದಿರುವ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕುಮಾರ್ ಎಂಬುವರಿಗೆ ಸೇರಿದ ಮಾವಿನ ತೋಟದಲ್ಲಿ ಎಣ್ಣೆ ಪಾರ್ಟಿ (Liquor Party) ನಡೆದು ನಂತರ ಕೊಲೆ ನಡೆದಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಚನ್ನಪಟ್ಟಣದ ಕನ್ನಮಂಗಲ ಗ್ರಾಮಕ್ಕೆ ಹಬ್ಬಕ್ಕೆ ಹೋಗಿದ್ದ ಯುವಕ, ಅಲ್ಲಿ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಕೊಲೆಯಾದ ಯುವಕ ಮತ್ತೊರ್ವ ಯುವಕನಿಗೆ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆ ಈತನನ್ನ ರಾಜಿಗೆಂದು ಕರೆ ದುಕೊಂಡು ಬಂದಿದ್ದಾರೆ. ಈತನ ಜೊತೆಯಲ್ಲಿಯೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಬ್ಬದ ದಿನ ಲಾಡ್ಜ್ನಲ್ಲಿ ರೂಮ್ ಮಾಡಿಕೊಂಡು ಯುವಕರ ಎಣ್ಣೆ ಪಾರ್ಟಿ; ಸ್ವಲ್ಪ ಹೊತ್ತಿನಲ್ಲೇ ಬಿತ್ತು ಹೆಣ!
ಎಣ್ಣೆ ಮತ್ತು ತಂದಿತ್ತು ರಂಜಿತ್ ಗೆ ಆಪತ್ತು
ರಂಜಿತ್ ಕೂಡ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೇ. ಆದರೆ ಕಳೆದ ದಿನ ಚನ್ನಪಟ್ಟಣದ ಕನ್ನಮಂಗಲ ಗ್ರಾಮಕ್ಕೆ ಹಬ್ಬಕ್ಕೆಂದು ಬಂದಿದ್ದ.ಈ ಸಂದರ್ಭದಲ್ಲಿ ಅಲ್ಲಿನ ಕೆಲವರ ಜೊತೆಗೆ ಸಣ್ಣ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾನೆ.
ಕಾರ್ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, ನಂತರ ಅದು ವಿಕೋಪಕ್ಕೆ ತಿರುಗಿದೆ. ನಂತರ ರಂಜಿತ್ ಸಹ ಒಬ್ಬನಿಗೆ ಹಲ್ಲೆ ನಡೆಸಿದ್ದಾನೆ. ನಂತರ ಎರಡೂ ಗುಂಪಿಗೆ ಗಲಾಟೆ ನಡೆದಿದೆ. ಆದರೆ ಅದೇ ಸಣ್ಣ ಗಲಾಟೆ ತನ್ನ ಪ್ರಾಣಕ್ಕೆ ಕುತ್ತು ತರಲಿದೆ ಎಂದು ಆತನೂ ಸಹ ಊಹಿಸಿರಲಿಲ್ಲ. ನಂತರ ರಾತ್ರಿ ವೇಳೆಗೆ ರಂಜಿತ್ ನನ್ನ ಕೊಲೆಯಾಗುತ್ತೆ ಎಂದು ರಂಜಿತ್ ಗೆ ಗೊತ್ತಿರಲಿಲ್ಲ.
ಇದನ್ನೂ ಓದಿ: ಎಣ್ಣೆ ಪಾರ್ಟಿಗೆಂದು ಹೋದವನು ಗೆಳೆಯರಿಂದಲೇ ಕೊಲೆಯಾದ..!; ಕುಡಿದ ಮತ್ತಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ಬಾ ಎಣ್ಣೆ ಪಾರ್ಟಿ ಮಾಡೋಣ:
ಬಾ ಎಣ್ಣೆ ಪಾರ್ಟಿ ಮಾಡೋಣ ಎಂದು ಕರೆದೊಯ್ದ ಗುಂಪೊಂದು ರಾಮನಗರದ ಬಿಳಗುಂಬ ಬಳಿಯ ನೂತನ ಬೈಪಾಸ್ ರಸ್ತೆಯ ಪಕ್ಕದ ಕುಮಾರ್ ಎಂಬುವರಿಗೆ ಸೇರಿದ ಮಾವಿನ ತೋಟದಲ್ಲಿ ಮೊದಲಿಗೆ ಚೆನ್ನಾಗಿ ಕುಡಿದು ಪಾರ್ಟಿ ಮಾಡಿದ್ದಾರೆ. ನಂತರ ಎಲ್ಲರೂ ಚೆನ್ನಾಗಿ ಕುಡಿದ ನಂತರ ರಂಜಿತ್ಜೊತೆಗೆ ಸಣ್ಣ ವಿಚಾರಕ್ಕೆ ಜಗಳ ತೆಗೆದಿದ್ದ ಕೊಲೆಗಾರರು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತದೇಹವನ್ನ ರಾಮನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆನೇಕಲ್ ನಲ್ಲಿ ಇಂತಹುವುದೇ ಪ್ರಕರಣ
ಮುನಿರಾಜು ಎಂಬರು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಪಂಪ್ ಹೌಸ್ ನಲ್ಲಿ ವಾಸವಾಗಿದ್ದರು. ಆನೇಕಲ್ನ ಗಾಂಧಿ ಕುಟೀರ ಸಮೀಪದ ಬಸವಣ್ಣ ಬೀದಿಯ ಶ್ರೀಧರ್ ಎಂಬುವವರ ಮನೆಯಲ್ಲಿ ಸ್ನೇಹಿತರ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಲು ಹೋಗಿ ದಾರುಣವಾಗಿ ಕೊಲೆಯಾಗಿದ್ದರು.. ಘಟನೆ ನಡೆದ ಮನೆಯಲ್ಲಿ ಸುಮಾರು ಐದಾರು ಮಂದಿ ಸೇರಿ ನಿನ್ನೆ ರಾತ್ರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಎಲ್ಲರೂ ಕಂಠಪೂರ್ತಿ ಕುಡಿದಿದ್ದಾರೆ.
ಈ ವೇಳೆ ಗೆಳೆಯರ ನಡುವೆಯೇ ವಾಗ್ವಾದ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಕುಡಿದು ನಶೆಯಲ್ಲಿದ್ದ ಸ್ನೇಹಿತರು ಸಮೀಪವೇ ಇದ್ದ ಮಚ್ಚು ತೆಗೆದುಕೊಂಡು ಮುನಿರಾಜುವಿನ ಕುತ್ತಿಗೆ ಭಾಗಕ್ಕೆ ಬೀಸಿದ್ದಾರೆ. ಒಂದೇ ಏಟಿಗೆ ಮುನಿರಾಜು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ