• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi Crime News: ಸ್ನೇಹಿತರೇ ಶತ್ರುಗಳಾದ್ರು, ಹಾಡಹಗಲೇ ಕಣ್ಣಿಗೆ ಖಾರದ ಪುಡಿ ಎರಚಿ ಕೊಂದ್ರು

Hubballi Crime News: ಸ್ನೇಹಿತರೇ ಶತ್ರುಗಳಾದ್ರು, ಹಾಡಹಗಲೇ ಕಣ್ಣಿಗೆ ಖಾರದ ಪುಡಿ ಎರಚಿ ಕೊಂದ್ರು

ನಾಗರಾಜ್ ಚಲವಾದಿ, ಕೊಲೆಯಾದ ವ್ಯಕ್ತಿ

ನಾಗರಾಜ್ ಚಲವಾದಿ, ಕೊಲೆಯಾದ ವ್ಯಕ್ತಿ

ಒಂದೊಮ್ಮೆ ಸ್ನೇಹಿತರಾಗಿದ್ದವರು, ಶತೃಗಳಾಗಿ ಮಾರ್ಪಟ್ಟ ಪರಿಣಾಮ ಓರ್ವನ ಬರ್ಬರ ಹತ್ಯೆ ನಡೆದಿದೆ. ಹಾಡಹಗಲೇ ನಡೆದ ಘಟನೆಯಿಂದ ಹುಬ್ಬಳ್ಳಿ ತಲ್ಲಣಗೊಂಡಿದೆ.

  • Share this:

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಹಾಡಹಗಲೇ ಯುವಕನ ಬರ್ಬರ ಹತ್ಯೆಯಾಗಿದೆ. ಮುಖದ ಮೇಲೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ಮನಬಂದಂತೆ ದಾಳಿ ಮಾಡಿ ಕೊಲೆಗೈದು (Murder) ಪರಾರಿಯಾಗಿದ್ದಾರೆ. ವಿಚಿತ್ರವೆಂದರೆ ಹೀಗೆ ಕೊಲೆ ಮಾಡಿದವರು ಹಿಂದೊಮ್ಮೆ ಕೊಲೆಯಾದವನ ಆಪ್ತ ಸ್ನೇಹಿತರಾಗಿದ್ದರು. ಸ್ನೇಹಿತರಾಗಿದ್ದವರೇ (Friends) ಶತೃಗಳಾದರು. ಕೊನೆಗೆ ಸ್ನೇಹಿತನನ್ನೇ ಹತ್ಯೆಗೈದು ಪರಾರಿಯಾಗಿದ್ದಾರೆ. ಇದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಯುವಕನ ಬರ್ಬರ ಹತ್ಯೆಯ ಹಿಂದಿನ‌ ಕಹಾನಿ. ಹಳೆ ಹುಬ್ಬಳ್ಳಿಯ ನಾಗರಾಜ್ ಚಲವಾದಿ ಕೊಲೆಯಾದ ವ್ಯಕ್ತಿ. ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವದ (Siddharoodha Jatra Mahotsava) ಹಿನ್ನೆಲೆಯಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲೆಂದು ಸಂತೋಷ ನಗರಕ್ಕೆ ಬಂದವನ ಮೇಲೆ ಏಕಾಏಕಿ ಅಟ್ಯಾಕ್ ಮಾಡಲಾಗಿದೆ. ಮುಖ ಮತ್ತು ಕತ್ತಿನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ.


ಹದಿನೈದು ಜನರಿದ್ದ ಗುಂಪು ಏಕಾಏಕಿ ಖಾರದ ಪುಡಿ ಎರಚಿ ದಾಳಿ ಮಾಡಿದೆ. ಈ ವೇಳೆ ಅದನ್ನು ತಡೆಯಲು ಹೋದ ನಾಗರಾಜ್ ಸ್ನೇಹಿತರ ಮೇಲೆ ಮಾರಕಾಸ್ತ್ರದಿಂದ ದಾಳಿಗೆ ಮುಂದಾಗುತ್ತಿದ್ದಂತೆಯೇ ಜೊತೆಗಿದ್ದವರು ಓಡಿ ಹೋಗಿದ್ದಾರೆ.


ಚಿಕಿತ್ಸೆ ಫಲಕಾರಿಯಾಗದೇ ಸಾವು


ತಕ್ಷಣ ನಾಗರಾಜ್ ಮೇಲೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು, ಸಿಕ್ಕ ಸಿಕ್ಕಲ್ಲಿ ದಾಳಿ ಮಾಡಿದ್ದಾರೆ. ನಾಗರಾಜ್ ರಕ್ತದ‌ ಮಡುವಿನಲ್ಲಿ ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ತಕ್ಷಣ ನಾಗರಾಜ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.


ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದ ಸದಸ್ಯರು ಕಿಮ್ಸ್ ಶವಾಗಾರದ ಬಳಿ ಜಮಾಯಿಸಿದ್ದಾರೆ. ಮೃತನ ತಾಯಿ ಮತ್ತಿತರರ ರೋದನ ಮುಗಿಲು ಮುಟ್ಟಿತ್ತು.


ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರ ಆಗ್ರಹ


ಕೊಲೆ ಮಾಡಿದ ದುಷ್ಕರ್ಮಿಗಳು ನನ್ನ ಮಗನ ಸ್ನೇಹಿತರೇ ಆಗಿದ್ದರು. ಹೋಳಿ ಹುಣ್ಣಿಮೆಯಲ್ಲಿ ಜಗಳ ನಡೆದಾಗಲೂ ನನ್ನ ಮಗ ಅವರನ್ನು ಬಿಡಿಸಿಕೊಂಡು ಬಂದಿದ್ದ. ನಂತರದಲ್ಲಿ ಅವರ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಆದರೆ ಅವರು ಈ ಮಟ್ಟಕ್ಕೆ ಹೋಗುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ನಾಗರಾಜ್ ಪೋಷಕರು ಹೇಳುತ್ತಾರೆ.
ಪಾತಕಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಮೃತ ನಾಗರಾಜ್ ತಾಯಿ ಲಕ್ಷ್ಮಿ ಮತ್ತು ಸಂಬಂಧಿಗಳು ಆಗ್ರಹಿಸಿದ್ದಾರೆ.




ಹಳೆ ವೈಷಮ್ಯ ಕಾರಣನಾ?


ಕೊಲೆಗೆ ಹಳೆ ವೈಷಮ್ಯ ಕಾರಣ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕಿಮ್ಸ್ ಮಾರ್ಚುರಿಗೆ ಭೇಟಿ ನೀಡಿದ‌ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಮೃತನ ಶವ ಪರಿಶೀಲಿಸಿದರು.


ಕೂಲಂಕುಶ ತನಿಖೆ


ನಂತರ ಮಾತನಾಡಿದ ರಮಣ್ ಗುಪ್ತಾ, ತನಿಖೆ ಪ್ರಾಥಮಿಕ ಹಂತದಲ್ಲಿದೆ. ಘಟನೆಯ ಹಿನ್ನೆಲೆ ಏನು ಅನ್ನೋದರ ಮಾಹಿತಿ ಸಂಗ್ರಹ ಮಾಡಲಾಗ್ತಿದೆ. ಯಾರು? ಏನು ಅಂತ ಈಗಲೇ ಹೇಳಲು ಆಗಲ್ಲ. ಕೊಲೆಗಾರರ ಬಂಧನಕ್ಕೆ ಜಾಲ ಬೀಸಿದ್ದೇವೆ. ಒಂದು ಕೊಲೆಯಾದ ಕೂಡಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಲು ಆಗಲ್ಲ. ಈ ಕುರಿತು ಕೂಲಂಕುಶ ತನಿಖೆ ನಡೆಸಲಾಗ್ತಿದೆ ಎಂದು ಹೇಳಿದರು.


ಇದನ್ನೂ ಓದಿ: Crime News: iPhone ಖರೀದಿಗೆ ಹಣವಿಲ್ಲದೆ ಡೆಲಿವರಿ ಬಾಯ್‌ನನ್ನೇ ಕೊಂದು ಸುಟ್ಟು ಹಾಕಿದ ಕಿರಾತಕ; ಸಿಸಿಟಿವಿ ನೀಡಿತ್ತು ಹಂತಕನ ಸುಳಿವು!


ಸಣ್ಣ ಪುಟ್ಟ ಸಂಗತಿಗಳಿಗೂ ಚಾಕುವಿನಿಂದ ಇರಿಯುವ, ಮಾರಕಾಸ್ತ್ರಗಳಿಂದ ದಾಳಿ ಮಾಡುವ ಘಟನೆಗಳು ಹುಬ್ಬಳ್ಳಿಯಲ್ಲಿ ಹೆಚ್ಚಾಗಲಾರಂಭಿಸಿವೆ. ಇದೀಗ ಹಾಡಹಗಲೇ ಬರ್ಬರ ಹತ್ಯೆ ನಡೆದಿದ್ದು,‌ ವಾಣಿಜ್ಯ ನಗರಿಯ ಜನರನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

Published by:Mahmadrafik K
First published: