ಪ್ರಿಯಕರನ (Lover) ಜೊತೆಗೂಡಿ ತನ್ನ ಸ್ವಂತ ಸಹೋದರನನ್ನೇ ಹತ್ಯೆಗೈದಿದ್ದ (Murder) ಭೀಕರ ಕೊಲೆಯೊಂದನ್ನು ಪೊಲೀಸರು ಭೇದಿಸಿದ್ದು, ಬರೋಬ್ಬರಿ ಎಂಟು ವರ್ಷಗಳ ನಂತರ ಆರೋಪಿಗಳ ಕೈಗೆ ಕೋಳ ತೊಡಿಸಿದ್ದಾರೆ. ಹಾಗಾದ್ರೆ ಈ ಪ್ರಕರಣವೇನು? ನಡೆದಿದ್ದೆಲ್ಲಿ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಪ್ರಕರಣ ಏನು?
ಭಾಗ್ಯಶ್ರೀ ತಳವಾರ ಮತ್ತು ಆತನ ಸಹೋದರ ನಿಂಗರಾಜು ತಳವಾರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಅದೇ ಊರಿನ ಸುಪುತ್ರ ಎಂಬ ವಿವಾಹಿತನ ಜೊತೆ ಭಾಗ್ಯ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಹೀಗೆ ಒಂದು ದಿನ ಭಾಗ್ಯಶ್ರೀ ಮತ್ತು ಸುಪುತ್ರ ಏಕಾಂತದಲ್ಲಿದ್ದಾಗ ಸಹೋದರ ನಿಂಗರಾಜು ನೋಡುತ್ತಾನೆ. ಇದಾದ ನಂತರ ಅಕ್ಕ ಭಾಗ್ಯಶ್ರೀಗೆ ಆತ ಸುಪುತ್ರನ ಜೊತೆ ಸಂಬಂಧ ಇಟ್ಟುಕೊಳ್ಳದಂತೆ ಎಚ್ಚರಿಸುತ್ತಿದ್ದ. ಈ ವಿಚಾರ ಎಲ್ಲಿ ಈತ ಹೊರಗೆ ಹೇಳಿ ಅವಾಂತರ ಮಾಡುತ್ತಾನೋ ಎಂದು ಇಬ್ಬರೂ ಸೇರಿ 2015 ರಲ್ಲಿ 20 ವರ್ಷದ ನಿಂಗರಾಜು ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: Baburao Chinchansur: ಬಿಜೆಪಿ ಎಂಎಲ್ಸಿ ಬಾಬುರಾವ್ ಚಿಂಚನಸೂರ್ ರಾಜೀನಾಮೆ! ಮತ್ತೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ದೇಹವನ್ನು ಪೀಸ್ ಪೀಸ್ ಆಗಿ ತುಂಡರಿಸಿ ಎಸೆದ ಪಾಪಿಗಳು
ಮರುದಿನ ಭಾಗ್ಯಶ್ರೀ ಮತ್ತು ಸುಪುತ್ರ ಮಚ್ಚು, ಎರಡು ಗೋಣಿ ಚೀಲಗಳು ಮತ್ತು ಏರ್‌ಬ್ಯಾಗ್ ಖರೀದಿಸಿದರು. ಮಧ್ಯಾಹ್ನದ ವೇಳೆಗೆ ನಿಂಗರಾಜು ಮೃತದೇಹವನ್ನು ಪೀಸ್ ಪೀಸ್ ಮಾಡಿ ಕೈಗಳನ್ನು ಮತ್ತು ಕಾಲುಗಳನ್ನು ಏರ್‌ಬ್ಯಾಗ್ ಒಳಗೆ ಹಾಕಿದ್ದಾರೆ. ಮತ್ತು ನಿಂಗರಾಜು ತಲೆಯನ್ನು ಗೋಣಿ ಚೀಲಕ್ಕೆ ಮತ್ತು ದೇಹವನ್ನು ಮತ್ತೊಂದು ಗೋಣಿಚೀಲದಲ್ಲಿ ಹಾಕಿ ವಡೇರಮಂಚನಹಳ್ಳಿ ಕೆರೆ ಬಳಿ ಬೇರೆ ಬೇರೆ ಕಡೆ ಎಸೆದಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
2015 ರ ಆಗಸ್ಟ್ 11 ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಬಳಿಯ ವಡೇರಮಂಚನಹಳ್ಳಿ ಕೆರೆಯ ಪ್ರದೇಶದಲ್ಲಿ ರಕ್ತಸಿಕ್ತವಾಗಿ ಕಂಡ ಬ್ಯಾಗ್ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬ್ಯಾಗನ್ನು ತೆರೆದು ನೋಡಿದಾಗ ಪುರುಷನ ಮೃತದೇಹದ ಅಂಗಾಂಗಳು ಪತ್ತೆಯಾಗಿದ್ದವು. ಆದರೆ ರುಂಡ ಇನ್ನೂ ಸಿಕ್ಕಿರಲಿಲ್ಲ. ಆದರೆ ಗೋಣಿಚೀಲದಲ್ಲಿ ಸಿಕ್ಕ ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಕೊಲೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡರು.
ವೈದ್ಯರನ್ನು ಭೇಟಿ ಮಾಡಿದಾಗ, ಅವರು ಸುಪುತ್ರ ಮತ್ತು ಭಾಗ್ಯಶ್ರೀ ಭೇಟಿ ಬಗ್ಗೆ ತಿಳಿಸಿ ಅವರ ಮನೆ ವಿಳಾಸವನ್ನು ನೀಡಿದರು. ಪೊಲೀಸರು ಅಲ್ಲಿಗೆ ಹೋಗುವಷ್ಟರಲ್ಲಿ ಮನೆಗೆ ಬೀಗ ಹಾಕಲಾಗಿತ್ತು ಮತ್ತು ಮನೆ ಒಡೆದು ನೋಡಿದಾಗ, ಅವರು ಪರಾರಿಯಾಗಿರುವುದನ್ನು ತಿಳಿಯಿತು. ಅವರಿಬ್ಬರ ಬಗ್ಗೆ ಮಾಹಿತಿ ಕಲೆಹಾಕಿ ವಿಜಯಪುರಕ್ಕೆ ಪೊಲೀಸರು ಹೋಗಿ ವಿಚಾರಿಸಿದರು.
ಮೃತದೇಹವನ್ನು ಗುರುತಿಸಲು, ನಿಂಗರಾಜು ಮತ್ತು ಸುಪುತ್ರ ಅವರ ತಾಯಂದಿರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ ಪೊಲೀಸರಿಗೆ ಕತ್ತರಿಸಿದ ದೇಹದ ಭಾಗಗಳು ನಿಂಗರಾಜು ಅವರದ್ದೇ ಎಂದು ದೃಢವಾಯಿತು. ಆದರೆ ಪೊಲೀಸರು ಸುಪುತ್ರ ಮತ್ತು ಭಾಗ್ಯಶ್ರೀಯನ್ನು ಪತ್ತೆಹಚ್ಚಲು ವಿಫಲವಾದ ಕಾರಣ ತನಿಖೆ ಅಂತ್ಯಗೊಂಡಿತು.
ಮತ್ತೆ ರೀಓಪನ್ ಆಯ್ತು ಕೇಸ್
ಆರೋಪಿಗಳ ಫೋನ್ ಸ್ವಿಚ್‌ಆಫ್ ಆಗಿದ್ದರಿಂದ ಪೊಲೀಸರಿಗೆ ಯಾವುದೇ ಸುಳಿವು ಇರಲಿಲ್ಲ. ಮತ್ತೆ ಕಳೆದ ವರ್ಷ ಕೇಸ್ ಅನ್ನು ರೀಓಪನ್ ಮಾಡಿದಾಗ ಸುಪುತ್ರ 2019ರಿಂದ ಮಹಾರಾಷ್ಟ್ರದ ನಾಸಿಕ್ ಬಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದರ ಬಗ್ಗೆ ಪೊಲೀಸರಿಗೆ ತಿಳಿದು ಬಂತು. ಭಾಗ್ಯಶ್ರೀ, ಸುಪುತ್ರ ಸಿಕ್ಕಿಹಾಕಿಕೊಳ್ಳುವ ಭಯಕ್ಕೆ ಇಬ್ಬರು ಫೋನ್ ಕೂಡ ಇಟ್ಟುಕೊಂಡಿರಲಿಲ್ಲ. ಮನೆಯವರು ಕೂಡ ಇವರು ಮೃತಪಟ್ಟಿದ್ದಾರಂತಲೇ ತಿಳಿದುಕೊಂಡಿದ್ದರು.
8 ವರ್ಷಗಳ ಬಳಿಕ ಸಿಕ್ಕಿಬಿದ್ದ ಹಂತಕರು
ಪೊಲೀಸರು ಜಾಡು ಪತ್ತೆ ಮಾಡಿ ಅಲ್ಲಿಗೆ ಧಾವಿಸಿ ಇಬ್ಬರೂ ಆರೋಪಿಗಳನ್ನು ಎಂಟು ವರ್ಷದ ಬಳಿಕ ಬಂಧಿಸಿದ್ದಾರೆ. ಕೇಸ್ ಬಗ್ಗೆ ಮಾತನಾಡಿದ ಬೆಂಗಳೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಶಂಕಿತ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ