ಬೆಂಗಳೂರು: ವರ್ಷಗಳಿಂದ ಪ್ರೀತಿಸುತ್ತಿದ್ದ (Love) ಯುವತಿ ಏಕಾಏಕಿ ಬ್ರೇಕ್ಅಪ್ (Love Breakup) ಮಾಡಿಕೊಂಡಲು ಅಂತ ಯುವನೋರ್ವ ಆತ್ಮಹತ್ಯೆಗೆ ಶರಣಾಗಿ ಜೀವವನ್ನೇ ಕಳೆದುಕೊಂಡಿರುವ ಘಟನೆ ಬೆಂಗಳೂರಿನ (Bengaluru) ಉಲ್ಲಾಳ ಉಪನಗರದಲ್ಲಿ (Ullal Upanagar) ನಡೆದಿದೆ. ಪ್ರೀತಿಸಿದ ಯುವತಿ ಬ್ರೇಕ್ ಅಪ್ ಮಾಡಿಕೊಂಡಳು ಅಂತ ಮನನೊಂದಿದ್ದ ಯುವಕ ನೂರು ವರ್ಷಗಳ ತನ್ನ ಜೀವನವನ್ನು ತ್ಯಾಗ ಮಾಡಿದ್ದಾನೆ. ಮೃತ ಯುವಕನನ್ನು 25 ವರ್ಷದ ರೋಹಿತ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಮೃತ ರೋಹಿತ್ ಕೊರಿಯರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಆರು ವರ್ಷಗಳಿಂದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನಂತೆ. ಆದರೆ ಕೊನೆ ಬಾರಿ ಯುವತಿಯನ್ನು ಭೇಟಿಯಾದಾಗ ಇಬ್ಬರ ನಡುವೆ ಗಲಾಟೆ ಆಗಿತ್ತಂತೆ. ಆಕೆ ಪ್ರೀತಿ ಬೇಡ ನಾವು ಬ್ರೇಕಪ್ ಮಾಡಿಕೊಳ್ಳೋಣಾ ಎಂದು ಹೇಳಿದ್ದಳಂತೆ. ಇದರೊಂದಿಗೆ ಆರು ವರ್ಷಗಳ ಪ್ರೀತಿಗೆ ಬ್ರೇಕ್ ಬಿದ್ದಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: PM Modi: ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಬೆನಿಫಿಟ್; ರಾಜ್ಯ ಬಿಜೆಪಿ ಸರ್ಕಾರವನ್ನು ಕೊಂಡಾಡಿದ ಪ್ರಧಾನಿ ಮೋದಿ
ರೈಲ್ವೆ ಹಳಿ ಮೇಲೆ ವಿದ್ಯಾರ್ಥಿ ಶವ ಪತ್ತೆ
ಶಿವಮೊಗ್ಗದ (Shivamogga) ಪಶು ವಿಶ್ವವಿದ್ಯಾಲಯ ಬಳಿಯಿರುವ ರೈಲ್ವೆ ಬ್ರಿಡ್ಜ್ ಬಳಿ ವಿದ್ಯಾರ್ಥಿಯ (Student) ಮೃತದೇಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ನಗರದ ಹೊಸಮನೆಯ 6ನೇ ಕ್ರಾಸ್ ನಿವಾಸಿ ವಿಶ್ವಾಸ್ (17) ಎಂದು ಗುರುತಿಸಲಾಗಿದೆ. ರೈಲಿಗೆ ಸಿಲುಕಿ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ (Private College) ಓದುತ್ತಿದ್ದ ವಿದ್ಯಾರ್ಥಿ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ (Exam) ಕಡಿಮೆ ಅಂಕ ಬಂದಿದೆ ಎಂದು ನೊಂದು ಕೊಂಡಿದ್ದನಂತೆ. ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿ ಪೋಷಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಇದರಿಂದ ವಿಶ್ವಾಸ್ ಮನನೊಂದಿದ್ದ ಎನ್ನಲಾಗಿದೆ. ವಿದ್ಯಾರ್ಥಿ ನಾಪತ್ತೆಯಾಗಿರುವ ಕುರಿತು ನಗರದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಕುಕ್ಕರ್ ತುಂಬಿದ್ದ ಲಾರಿ ವಶಕ್ಕೆ
ತುಮಕೂರಿನ (Tumakuru) ಕುಣಿಗಲ್ನಲ್ಲಿ ಚುನಾವಣೆ (Election) ಕಾವು ಹೆಚ್ಚಾಗ್ತಿದೆ. ಅಮೃತೂರು ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ತುಂಬಿದ ಲಾರಿಯ ಮೇಲೆ GST ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳು ಕುಕ್ಕರ್ ಬಾಕ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕುಕ್ಕರ್ ಬಾಕ್ಸ್ಗಳ ಮೇಲೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಭಾವಚಿತ್ರವಿದೆ.
ಇದನ್ನೂ ಓದಿ: Vinesh Phogat: WFI ಅಧ್ಯಕ್ಷನಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ, ದೆಹಲಿಯಲ್ಲಿ ಧರಣಿ
ಬೆಂಗಳೂರಿಗೆ ಸ್ಯಾಂಟ್ರೋ ರವಿ ಶಿಫ್ಟ್
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಕೆ. ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು (Santro Ravi) ಸಿಐಡಿ ಅಧಿಕಾರಿಗಳು (CID) ಬೆಂಗಳೂರಿಗೆ (Bengaluru) ಕರೆತಂದಿದ್ದಾರೆ. ಮೊನ್ನೆ ಮೈಸೂರಿನಲ್ಲಿ (Mysuru) ಸ್ಯಾಂಟ್ರೋ ರವಿಯನ್ನ ಸಿಐಡಿ ಕಸ್ಟಡಿಗೆ ಪಡೆದಿದ್ದರು.
ಮೈಸೂರಿನಲ್ಲಿ ಕೆಲವು ತನಿಖೆ ಪ್ರಕ್ರಿಯೆ ಮುಗಿಸಿ ನಿನ್ನೆ ರಾತ್ರಿ ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ಸ್ಯಾಂಟ್ರೋ ರವಿಯನ್ನ ಅಧಿಕಾರಿಗಳ ಕರೆ ತಂದಿದ್ದಾರೆ. ಇನ್ನು ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ವಿಶೇಷ ತಂಡ ಗುಜರಾತ್ನಲ್ಲಿ ಬಂಧಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ