• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ನನ್ನ ಹೆಸರಲ್ಲಿ ಬೇರೆ ಯಾರೋ ವೋಟ್ ಹಾಕಿದ್ದಾರೆ; ಯುವಕನ ಆಕ್ರೋಶ

Karnataka Election 2023: ನನ್ನ ಹೆಸರಲ್ಲಿ ಬೇರೆ ಯಾರೋ ವೋಟ್ ಹಾಕಿದ್ದಾರೆ; ಯುವಕನ ಆಕ್ರೋಶ

ಸೈಯದ್ ಫಹಾದ್

ಸೈಯದ್ ಫಹಾದ್

Voting: ನನ್ನ ಮತ ನನಗೆ ಬೇಕು. ಅದು ನನ್ನ ಹಕ್ಕು ಆಗಿದೆ. ದಯವಿಟ್ಟು ನನಗೆ ಮತದಾನ ಮಾಡಲು ಅವಕಾಶ ಕಲ್ಪಿಸಿ ಎಂದು ಸೈಯದ್ ಫಹಾದ್ ಮನವಿ ಮಾಡಿಕೊಂಡಿದ್ದಾರೆ.

  • Share this:

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಮತದಾನ (Voting) ಮಾಡೋದನ್ನು ಪುಣ್ಯದ ಕೆಲಸ ಎಂದು ಹೇಳುತ್ತಾರೆ. ಇಂದು ಬೆಳಗ್ಗೆಯಿಂದ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election) ಮತದಾರು (Voters) ತಮ್ಮ ಹಕ್ಕು (Voting) ಚಲಾವಣೆ ಮಾಡುತ್ತಿದ್ದಾರೆ. ಮತದಾನ ಮಾಡಲು ಬಂದವರಿಗೆ ಲಿಸ್ಟ್​​ನಲ್ಲಿ ತಮ್ಮ ಹೆಸರಿಲ್ಲ ಎಂದು ಕೇಳಿ ನಿರಾಸೆಯಿಂದ ಹೊರ ಬಂದಿದ್ದಾರೆ. ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ (Pulakeshinagar Constituency) ಮತಗಟ್ಟೆ 144ರಲ್ಲಿ ನಕಲಿ ಮತದಾನ ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಈ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕಾದ ಯುವಕನೋರ್ವ ನನ್ನ ಹೆಸರಿನಲ್ಲಿ ಬೇರೆ ಯಾರೋ ಬಂದು ವೋಟ್ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಸೈಯದ್ ಪಹಾದ್ ಪುಲಕೇಶಿ ವಿಧಾನಸಭಾ ಕ್ಷೇತ್ರದ ಮತದಾರ ಈ ಆರೋಪ ಮಾಡಿದ್ದಾರೆ. ನನ್ನ ಹೆಸರಲ್ಲಿ ಬೇರೆ ಯಾರೋ ವೋಟ್ ಮಾಡಿದ್ದಾರೆಂದು ಯುವಕ ಸೈಯದ್ ಆಕ್ರೋಶ ಹೊರ ಹಾಕಿದ್ದಾರೆ. ವಾರ್ಡ್ 48 ರ ಬೂತ್ ನಂಬರ್ 144ರಲ್ಲಿ ಫಹಾದ್ ಅವರ ಮತ ಇದೆ.




ಇದನ್ನೂ ಓದಿ:  Karnataka Exit Poll 2023 Live Updates: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಕೆಲವೇ ಕ್ಷಣದಲ್ಲಿ ಸಿಗಲಿದೆ ಉತ್ತರ


ನನ್ನ ವೋಟ್ ನನಗೆ ಬೇಕೆಂದ ಸೈಯದ್


ನಾನು ಮತದಾನ ಮಾಡಲು ಮತಕೇಂದ್ರಕ್ಕೆ ಬಂದಾಗ ನಿನ್ನ ವೋಟ್ ಈಗಾಗಲೇ ಆಗಿದೆ ಎಂದು ವಾಪಸ್ ಕಳುಹಿಸಿದ್ದಾರೆ. ಇವರು ಯಾವ ರೀತಿ ಪರಿಶೀಲನೆ ಮಾಡ್ತಿದಾರೆ. ವೋಟರ್ ಐಡಿ, ವೋಟರ್ ಸ್ಲಿಪ್ ನನ್ನ ಹತ್ತಿರವೇ ಇದೆ. ನನ್ನ ಮತ ನನಗೆ ಬೇಕು. ಅದು ನನ್ನ ಹಕ್ಕು ಆಗಿದೆ. ದಯವಿಟ್ಟು ನನಗೆ ಮತದಾನ ಮಾಡಲು ಅವಕಾಶ ಕಲ್ಪಿಸಿ ಎಂದು ಸೈಯದ್ ಫಹಾದ್ ಮನವಿ ಮಾಡಿಕೊಂಡಿದ್ದಾರೆ.

top videos
    First published: