• Home
  • »
  • News
  • »
  • state
  • »
  • Youth Missing: ಆಧ್ಯಾತ್ಮದತ್ತ ನನ್ನ ಪಯಣ ಆರಂಭ, ಭಯಪಡಬೇಡಿ; ಸಂದೇಶ ಕಳುಹಿಸಿ ಯುವಕ ನಾಪತ್ತೆ

Youth Missing: ಆಧ್ಯಾತ್ಮದತ್ತ ನನ್ನ ಪಯಣ ಆರಂಭ, ಭಯಪಡಬೇಡಿ; ಸಂದೇಶ ಕಳುಹಿಸಿ ಯುವಕ ನಾಪತ್ತೆ

ನಾಪತ್ತೆಯಾದ ಯುವಕ

ನಾಪತ್ತೆಯಾದ ಯುವಕ

ಆಧ್ಯಾತ್ಮದತ್ತ ನನ್ನ ಪಯಣ ಆರಂಭವಾಗಿದೆ. ಭಯಪಡಬೇಡಿ, ವಾಪಸ್ಸಾಗುತ್ತೇನೆ ಎಂಬ ಸಂದೇಶ ಕಳುಹಿಸಿ ಯುವಕ ಕಾಣೆಯಾಗಿದ್ದಾನೆ. ಪತ್ತೆಗಾಗಿ ಇಡೀ ಕುಟುಂಬ ಅಲೆದಾಡುತ್ತಿದೆ.

  • Share this:

ಆತ ನೋಡಲು ಸ್ಫುರದ್ರೂಪಿ ಯುವಕ (youth). ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ (Company Employee). ಕೈ ತುಂಬಾ ಸಂಬಳ. ತುಂಬು ಕುಟುಂಬ ಎಲ್ಲವೂ ಚೆನ್ನಾಗಿತ್ತು. ಅಣ್ಣನಿಗೆ ಹತ್ತಿರದ ಸಂಬಂಧದಲ್ಲಿ ಮದುವೆ (Marriage) ಸಹ ನಿಶ್ಚಯವಾಗಿತ್ತು. ಆದ್ರೆ ಮಾರನೇ ದಿನ ಇಡೀ ಕುಟುಂಬಕ್ಕೆ ಶಾಕ್ ಕಾದಿತ್ತು. ಆಧ್ಯಾತ್ಮದತ್ತ (Spirituality) ನನ್ನ ಪಯಣ ಶುರುವಾಗಿದೆ. ಭಯಪಡಬೇಡಿ, ಎಂದಾದರೂ ಒಂದು ದಿನ ವಾಪಸ್ಸಾಗುತ್ತೇನೆ ಎಂಬ ಸಂದೇಶ ಸ್ನೇಹಿತನಿಗೆ ಕಳುಹಿಸಿ ಯುವಕ ಕಾಣೆಯಾಗಿದ್ದಾನೆ. ಬರೋಬ್ಬರಿ ಒಂದೂವರೆ ವರ್ಷ ಕಳೆದರೂ ಸಣ್ಣ ಸುಳಿವು ದೊರೆತ್ತಿಲ್ಲ. ಮನೆ ಮಗನ ಪತ್ತೆಗಾಗಿ ಇಡೀ ಕುಟುಂಬ ಅಲೆದಾಟ ನಡೆಸುತ್ತಿದೆ. ಹೌದು ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಬರಗಿ ಗ್ರಾಮದವನಾದ ಮಂಜುನಾಥ್ ಕಳೆದ ವರ್ಷ ಮಾರ್ಚ್ 7 ನೇ ತಾರೀಖಿನಿಂದ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯಿಂದ ಕಾಣೆಯಾಗಿದ್ದಾನೆ‌.


ಜಿಗಣಿ ಕೈಗಾರಿಕಾ ಪ್ರದೇಶದ ಪ್ರತಿಷ್ಠಿತ ಕಂಪನಿ ಟಾಟಾ ಅಡ್ವಾನ್ಸ್ಡ್ ಉದ್ಯೋಗಿಯಾಗಿದ್ದ ಈತ ಉದ್ಯೋಗ ನಿಮಿತ್ತ ಸಹೋದರ‌ ಮೋನಿಷ್ ಜೊತೆ ನೆಲೆಸಿದ್ದ. ಅದೊಂದು ದಿನ ಅಣ್ಣ ಮೋನಿಷ್​ಗೆ ಹತ್ತಿರದ ಸಂಬಂಧದಲ್ಲಿ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಮಾರನೇ ದಿನದಿಂದಲೇ ತಾನು ವಾಸವಿದ್ದ ಜಿಗಣಿಯಿಂದ ಕಣ್ಮರೆಯಾಗಿದ್ದಾನೆ.


ಮಂಜುನಾಥ್  ಕಾಣೆಯಾಗುವ ಮೊದಲು ಸ್ನೇಹಿತನೊಬ್ಬನ ಮೊಬೈಲ್​ಗೆ ನಾನು ಆಧ್ಯಾತ್ಮದತ್ತ ಪಯಣ ಆರಂಭಿಸಿದ್ದೇನೆ. ಭಯಪಡಬೇಡಿ. ಇಂದಲ್ಲ ನಾಳೆ ಮರಳುತ್ತೆನೆ ಎಂದು ಸಂದೇಶ ಕಳುಹಿಸಿ ಕಣ್ಮರೆಯಾಗಿದ್ದಾನೆ.


Youth goes missing after sending message that he is into spirituality cank mrq
ಮಂಜುನಾಥ್


ಇನ್ನೂ ಬಡ ಕುಟುಂಬವಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ತಂದೆ ಕಾಳಪ್ಪ ಹಗಲು ರಾತ್ರಿ ದುಡಿದಿದ್ದಾರೆ.


ಮಂಜುನಾಥ್ ಸೋದರನ ಕಣ್ಣೀರು


ನಾನು ಮತ್ತು ಸೋದರ ಒಂದೇ ಮನೆಯಲ್ಲಿ ವಾಸವಾಗಿದ್ದೇವು. ಮಂಜುನಾಥ್ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ತಂದೆ ನಮ್ಮಿಬ್ಬರನ್ನು ಕಷ್ಟಪಟ್ಟು ಓದಿಸಿದ್ದರು. ಬೆಂಗಳೂರಿನಲ್ಲಿದ್ದ ನಮ್ಮಿಬ್ಬರಿಗೂ ಒಳ್ಳೆಯ ಸಂಬಳ ಬರುತ್ತಿತ್ತು ಎಂದು ಮಂಜುನಾಥ್ ಸೋದರ ಮೋನಿಷ್ ಹೇಳುತ್ತಾರೆ.


ನನಗೆ ಮದುಗೆ ನಿಶ್ಚಯವಾದ ಹಿನ್ನೆಲೆ ನಾನು ಊರಿಗೆ ಹೋಗಿದ್ದೆ. ಒಂದು ವಾರದ ಬಳಿಕ ಬಂದಾಗ ಮನೆಯಲ್ಲಿ ಇರಲಿಲ್ಲ.  ಸ್ನೇಹಿತರನ್ನು ವಿಚಾರಿಸಿದಾಗ ಮೆಸೇಜ್ ಕಳುಹಿಸಿರುವ ವಿಚಾರ ಗೊತ್ತಾಗಿದೆ. ಹೋಗುವಾಗ ಮನೆಯಲ್ಲಿದ್ದ ಯಾವುದೇ ಬಟ್ಟೆ ಸಹ ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದರು.


Youth goes missing after sending message that he is into spirituality cank mrq
ಮಂಜುನಾಥ್


ತಮ್ಮನ ನಿರ್ಧಾರಕ್ಕೆ ವಿರೋಧ ಇಲ್ಲ


ನಾವು ತಮ್ಮನ ನಿರ್ಧಾರಕ್ಕೆ ವಿರೋಧ ಮಾಡಲ್ಲ. ಆತನ ಆಧ್ಯಾತ್ಮ ಜೀವನಕ್ಕೆ ನಾವು ತೊಂದರೆ ಕೊಡಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ ಎಂಬ ವಿಷಯ ತಿಳಿದ್ರೆ ಸಾಕು ಎಂದು ಮೋನಿಷ್ ಕಣ್ಣೀರು ಹಾಕುತ್ತಾರೆ.


ಇನ್ನು ಈ ಸಂಬಂಧ ಮಂಜುನಾಥ್ ಕಾಣೆಯಾಗಿರುವ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮಂಜುನಾಥ್ ಹುಡುಕಾಟದಲ್ಲಿದ್ದಾರೆ.


ಶವವಾಗಿ ಪತ್ತೆಯಾದ ಯುವತಿ


ಕೋಲಾರದಲ್ಲೂ 2 ದಿನದ ಹಿಂದೆ ಕಾಣೆಯಾಗಿದ್ದ ಯುವತಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮುಳಬಾಗಿಲು ತಾಲೂಕಿನ N.ಕುರುಬರಹಳ್ಳಿಯ ವೆನ್ನೆಲಾ ಮೃತ ಯುವತಿ. ಪ್ರೇಮ ವೈಫಲ್ಯಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ.


ಜಂಗಾನಹಳ್ಳಿ ಗ್ರಾಮದ ಚಂದ್ರಶೇಖರ್ ನನ್ನ ಪ್ರೀತಿಸುತ್ತಿದ್ದ ಯುವತಿ ಕಳೆದ ವಾರ ಮದುವೆಯಾಗಲು ಹೋಗಿದ್ರಂತೆ. ಆದ್ರೆ ಹೆತ್ತವರು ದೂರು ಕೊಟ್ಟಿದ್ರಿಂದ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿಹೇಳಿ ಕಳಿಸಿದ್ರಂತೆ. ಈಗ ತೋಟದ ಬಾವಿಯಲ್ಲಿ ಯುವತಿ ಶವ ಸಿಕ್ಕಿದೆ.


ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ!


ಈ ಗ್ರಾಮದಲ್ಲಿ (Village) ಸುಮಾರು ದಿನಗಳಿಂದ ಗ್ರಾಮಸ್ಥರೆಲ್ಲ (Villagers) ಭಯಗೊಂಡಿದ್ದರು. ರಾತ್ರಿಯಾದ್ರೆ ಸಾಕು ಆ ಗ್ರಾಮದಲ್ಲಿ ವಿಚಿತ್ರ ಆತಂಕ, ಭಯ ಆವರಿಸಿಕೊಳ್ಳುತ್ತಿತ್ತು. ಯಾಕೆಂದ್ರೆ ರಾತ್ರಿಯಾಗಿ, ಎಲ್ಲರೂ ಮನೆ ಸೇರಿದ ಮೇಲೆ ಆ ಒಬ್ಬ ವ್ಯಕ್ತಿ (Unknown Person) ಬರ್ತಿದ್ದ. ಹಾಗೆ ಆತ ಸಾದಾ ಸೀದ ಬರ್ತಾ ಇರಲಿಲ್ಲ. ಮೈಮೇಲೆ ಒಂದೇ ಒಂದು ಬಟ್ಟೆಯ ನೂಲೂ ಇಲ್ಲದಂತೆ ಬೆತ್ತಲೆಯಾಗಿ (Naked) ಬರುತ್ತಿದ್ದ. ಹಾಗೆ ಬಂದವ ಸುಮ್ಮನೆ ಇರುತ್ತಿರಲಿಲ್ಲ, ಮನೆಯ ಕಿಟಕಿಯಲ್ಲಿ ಒಳಗೆ ಬಗ್ಗಿ ನೋಡ್ತಿದ್ದ.


ಸಾಲದ್ದಕ್ಕೆ ಮನೆ ಮುಂದೆ ಒಣಗಿಸಿದ್ದ ಬಟ್ಟೆಗಳನ್ನ (Cloths) ಕದ್ದುಕೊಂಡು ಓಡುತ್ತಿದ್ದ. ಹಾಗಿದ್ರೆ ಆತ ಯಾರು? ಆತ ಬೆತ್ತಲೆಯಾಗಿ ಬರುವುದು ಏಕೆ? ಮನೆಯಲ್ಲಿ ಬಗ್ಗಿ ನೋಡುವುದು ಏಕೆ? ಕೊನೆಗೆ ಏನಾಯ್ತು? ಅಷ್ಟಕ್ಕೂ ಬೆತ್ತಲೆ ಮನುಷ್ಯನ ಕಾಟದಿಂದ ತತ್ತಿರಿಸಿದ ಆ ಗ್ರಾಮ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕಾರಿ ಉತ್ತರ.

Published by:Mahmadrafik K
First published: