• Home
 • »
 • News
 • »
 • state
 • »
 • Bengaluru: ಪಟಾಕಿ ಹಚ್ಚಿ ಜನರ ಮೇಲೆಸೆದು ಪುಂಡಾಟ; ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಮೂಳೆ ಮುರಿಯೋ ಹಾಗೆ ಹೊಡೆದ್ರು

Bengaluru: ಪಟಾಕಿ ಹಚ್ಚಿ ಜನರ ಮೇಲೆಸೆದು ಪುಂಡಾಟ; ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಮೂಳೆ ಮುರಿಯೋ ಹಾಗೆ ಹೊಡೆದ್ರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲ್ಲೆಗೊಳಗಾದ ಮಹದೇವಸ್ವಾಮಿ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಮೂವರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 • Share this:

  ದೇಶದಲ್ಲಿ ದೀಪಾವಳಿ ಸಂಭ್ರಮ (Deepavali Celebration) ಮನೆ ಮಾಡಿದೆ. ಜನರು ಪಟಾಕಿ (Crackers) ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಆದ್ರೆ ಬೆಂಗಳೂರಿನ (Bengaluru) ಜ್ಞಾನಭಾರತಿಯ ಮಾರುತಿ ನಗರದಲ್ಲಿ ಪುಂಡರು ಪಟಾಕಿ ಹಚ್ಚಿ ಓಡಾಡುವರ ಮೇಲೆ ಎಸೆದು ಪುಂಡಾಟ ಮಾಡಿದ್ದಾರೆ. ಮೈಮೇಲೆ ಪಟಾಕಿ ಎಸೆದಿದ್ದನ್ನ ಪ್ರಶ್ನಿಸಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಹದೇವಸ್ವಾಮಿ ಎಂಬವರ ಮೇಲೆ ಸ್ಥಳೀಯ ಯುವಕರು (Youth Gang) ಪಟಾಕಿ ಎಸೆದಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಕುತ್ತಿಗೆ ಮೂಳೆ ಮುರಿಯುವಂತೆ ಹಲ್ಲೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆಯಿಂಲೇ ಏರಿಯಾದಲ್ಲಿ‌ ಏಳರಿಂದ ಎಂಟು ಜನರ ಗುಂಪು ಪಟಾಕಿ ಸಿಡಿಸುತ್ತಾ ಪುಂಡಾಟ ಮೆರೆಯುತ್ತಿತ್ತು.


  ಮಂಗಳವಾರ ಸಂಜೆ ರಸ್ತೆಯಲ್ಲಿ ತೆರಳುತ್ತಿದ್ದ ಮಹದೇವಸ್ವಾಮಿ ಮೇಲೆಯೂ  ಪಟಾಕಿ ಎಸೆದಿದ್ದರು. ಇದರಿಂದ ಕೋಪಗೊಂಡ ಮಹದೇವಸ್ವಾಮಿ, ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪ್ಲಾಸ್ಟಿಕ್​ ಟ್ರೇನಿಂದ ಯುವಕರು ಮಹದೇವಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ.


  ಹಲ್ಲೆಗೊಳಗಾದ ಮಹದೇವಸ್ವಾಮಿ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಮೂವರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


  ಪಟಾಕಿ ಅವಾಂತರ


  ಪ್ರತಿ ದೀಪಾವಳಿ ವೇಳೆಯೂ ಪಟಾಕಿ ಸಿಡಿಸಿ ಗಾಯ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚು. ಈ ಬಾರಿ ಕೂಡ ಪಟಾಕಿ ಸಿಡಿದು ಹಲವರು ದೃಷ್ಟಿ ಕಳೆದುಕೊಂಡಿದ್ದಾರೆ.. ಪಟಾಕಿ ಅವಘಡದಿಂದ ಈವರೆಗೂ ಬೆಂಗಳೂರಲ್ಲಿ 25ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಂಭೀರ ಗಾಯಗಳಾಗಿವೆ.


  ಮಿಂಟೋ ಆಸ್ಪತ್ರೆಯೊಂದರಲ್ಲೇ ಈವರೆಗೂ 19 ಕೇಸ್ ದಾಖಲಾಗಿದೆ. ಮತ್ಯಾರೋ ಹಚ್ಚಿದ್ದ ರಾಕೆಟ್ ಬಂದು ಸಿಡಿದು ಆದಿತ್ಯ ಎಂಬ ಬಾಲಕ ಮುಖ ಸುಟ್ಟುಕೊಂಡಿದ್ದಾನೆ.. ಇನ್ನೊಂದ್ಕಡೆ ಮೈಸೂರು ರಸ್ತೆಯ ನಿವಾಸಿ 19 ವರ್ಷದ ಜಯಸೂರ್ಯ ಎಂಬ ಯುವಕ ಎರಡು ನೇತ್ರವನ್ನೇ ಕಳೆದುಕೊಂಡಿದ್ದಾನೆ. ನಿನ್ನೆ ರಾತ್ರಿ ಪಟಾಕಿ ಸಿಡಿದು ಎರಡೂ ಕಣ್ಣು ಡ್ಯಾಮೇಜ್ ಆಗಿ ದೃಷ್ಟಿಯೇ ಹೋಗಿದೆ.


  ಹೈಟೆನ್ಷನ್ ವೈಯರ್ ತಗುಲಿ ಸಾವು


  ಕೆ.ಆರ್ ಪುರಂ ಬಳಿ ಮನೆಗೆ ಹೈಟೆನ್ಷನ್ ವೈಯರ್ ತಗುಲಿ ಬೆಂಕಿ ಅವಘಡ ಸಂಭವಿಸಿದೆ. ಹೈ ಟೆನ್ಷನ್​​ ವೈಯರ್ ತಗುಲಿ ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ವೇಳೆ ನೆರೆಮನೆಯ ವ್ಯಕ್ತಿ ಭಾಸ್ಕರ್ ಸೇರಿ ಮೂವರಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಚಂದನ್ ಸಾವನ್ನಪ್ಪಿದ್ದಾರೆ.. ಕೆಳಭಾಗದಲ್ಲೇ ವೈರ್ ಅನ್ನು ಅಳವಡಿಸಿದ್ದಾರೆ ಅಂತ ಮನೆ ಮಾಲೀಕ ಭಾಸ್ಕರ್ ವಿರುದ್ಧ FIR ದಾಖಲಾಗಿದೆ.


  ‘ರೋಲ್​ಕಾಲ್’ ಗೂಂಡಾಗಿರಿ


  ರೋಲ್ ಕಾಲ್ ನೀಡದಕ್ಕೆ ಪಟಾಕಿ ಅಂಗಡಿ ಮಾಲೀಕರನ್ನು ಅಟ್ಟಾಡಿಸಿಕೊಂಡು ಹೊಡೆದ ಘಟನೆ ಆನೇಕಲ್​ನ ನೆರಳೂರು ಗೇಟ್ ಬಳಿ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆಯ ದೃಶ್ಯಾವಳಿ ನ್ಯೂಸ್ 18ಗೆ ಲಭ್ಯವಾಗಿವೆ.


  ಇದನ್ನೂ ಓದಿ:  Omicron Variants: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ BQ.1 ತಳಿ ಪತ್ತೆ; ಕರ್ನಾಟಕದಲ್ಲಿ ಎಚ್ಚರಿಕೆಯ ಮಾರ್ಗಸೂಚಿ ಪ್ರಕಟ

   SLV ಕ್ರಾಕರ್ಸ್​ನ ಕಿರಣ್ ಮತ್ತು ಹರೀಶ್ ಮೇಲೆ ಚಂದಾಪುರ ಪುರಸಭೆ ಸದಸ್ಯೆ ಪತಿ ಚರಣ್ ಆಂಡ್ ಟೀಮ್ ಹಲ್ಲೆ ಮಾಡಿದೆ. ಅಂಗಡಿ ಕ್ಲೋಸ್ ಮಾಡಿದ್ದೇವೆ ಬೆಳಗ್ಗೆ ಬನ್ನಿ ಎಂದಿದ್ದಕ್ಕೆ ಅಟ್ಟಾಡಿಸಿಕೊಂಡು ಹೊಡೆಯಲಾಗಿದ್ದು, ಇಬ್ಬರ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಹರೀಶ್​ ಕೈ ಬೆರಳು ಮುರಿದಿದೆ.


  ಪಂಜಿನ ಮೆರವಣಿಗೆ, ಶೋಕಾಚರಣೆ


  ಸೋಮವಾರ ದೀಪಾವಳಿ ಹಬ್ಬದ ದಿನವೇ ಮೇಲುಕೋಟೆಯಲ್ಲಿ ಶೋಕಾಚರಣೆ ಮಾಡಲಾಗಿದೆ. ವಿಶ್ವದೆಲ್ಲೆಡೆ ಹಿಂದೂಗಳು ದೀಪಾವಳಿ ಸಂಭ್ರಮಿಸುವ ವೇಳೆ ಮೇಲುಕೋಟೆ ಮಾತ್ರ ನಿಶ್ಯಬ್ದವಾಗಿತ್ತು.


  ಇದನ್ನೂ ಓದಿ:  Bangalore University Student: ಶಿಲ್ಪಾ ಸಾವು, ತಿರುಗಿಬಿದ್ದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ

   ಮಂಡ್ಯ ಜಿಲ್ಲೆ ಪಾಂಡವಪುರದ ಮೇಲುಕೋಟೆಯಲ್ಲಿ ಮಂಡ್ಯಮ್ ಅಯ್ಯಂಗಾರರ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ ಮಾಡಿದ್ದಾರೆ. ಟಿಪ್ಪು ಕ್ರೌರ್ಯಕ್ಕೆ ಬಲಿಯಾದ ಅಯ್ಯಂಗಾರರಿಗೆ ಕುಟುಂಬಸ್ಥರಿಗೆ ಸಂತಾಪ ಸಲ್ಲಿಕೆ ಮಾಡಲಾಯ್ತು.

  Published by:Mahmadrafik K
  First published: