• Home
  • »
  • News
  • »
  • state
  • »
  • Selfie Death: ಸೆಲ್ಫಿ ಹುಚ್ಚಾಟ, ನೀರಸಾಗರದಲ್ಲಿ ಕೊಚ್ಚಿ ಹೋದ ಯುವಕ

Selfie Death: ಸೆಲ್ಫಿ ಹುಚ್ಚಾಟ, ನೀರಸಾಗರದಲ್ಲಿ ಕೊಚ್ಚಿ ಹೋದ ಯುವಕ

ಕಿರಣ್ ರಜಪೂತ್

ಕಿರಣ್ ರಜಪೂತ್

ಈ ಸಮಯದಲ್ಲಿ ಸೆಲ್ಫಿಗಾಗಿ ಜಲಾಶಯದ ದಡದಲ್ಲಿ ನಿಂತಿದ್ದ ಯುವಕ, ನೀರಿನ ರಭಸ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

  • Share this:

ಹುಬ್ಬಳ್ಳಿ - ರಾಜ್ಯಾದ್ಯಂತ ಮಳೆ ಅಬ್ಬರ  (Heavy Rainfall) ಮುಂದುವರಿದಿದೆ. ನದಿಗಳು (Rivers) ಉಕ್ಕಿ ಹರಿಯುತ್ತಿದ್ದು, ಜಲಾಶಯಗಳು  (Dams) ಭರ್ತಿಯಾಗಿವೆ. ಇನ್ನು ಜಲಪಾತ, ಹಳ್ಳ - ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಇದನ್ನು ಕಣ್ತುಂಬಿಕೊಳ್ಳಲೆಂದು ಹೋಗುತ್ತಿರೋ ಜನ ಸೆಲ್ಫಿ (Selfies) ಹುಚ್ಚಾಟ ನಡೆಸಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಧಾರಾವಾಡ (Dharwad) ಜಿಲ್ಲೆಯಲ್ಲಿ ನಡೆದಿದ್ದು, ಯುವಕನೋರ್ವ ನೀರಸಾಗರದಲ್ಲಿ ಕೊಚ್ಚಿ ಹೋಗಿದ್ದಾನೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ (Selfie Death) ‌ನೀರು ಪಾಲಾದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ನೀರಸಾಗರದ ಜಲಾಶಯದಲ್ಲಿ ನಡೆದಿದೆ.


ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು 22 ವರ್ಷದ ಕಿರಣ್ ರಜಪೂತ ಎಂದು ಗುರುತಿಸಲಾಗಿದೆ. ಕಿರಣ್ ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ‌ ನಿವಾಸಿಯಾಗಿದ್ದು, ಭಾನುವಾರ ಗೆಳೆಯರೊಡನೆ ಪ್ರವಾಸಕ್ಕೆಂದೂ ಹೋಗಿದ್ದನು.


ಈ ಸಮಯದಲ್ಲಿ ಸೆಲ್ಫಿಗಾಗಿ ಜಲಾಶಯದ ದಡದಲ್ಲಿ ನಿಂತಿದ್ದ ಯುವಕ, ನೀರಿನ ರಭಸ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಿರಣ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಕಿರಣ್ ರಜಪೂತ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಕಲಘಟಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Youth falls into water while taking selfie in Dharwad saklb mrq
ಕಿರಣ್ ರಜಪೂತ್


ಇದನ್ನೂ ಓದಿ:  Bengaluru: ಈ ಪಾರ್ಕಿನಲ್ಲಿ ರನ್ನಿಂಗ್, ಜಾಗಿಂಗ್ ಮಾಡಂಗಿಲ್ಲ! ಸೂಚನಾ ಫಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್


ಕೆಸರು ಗದ್ದೆಗಳಾದ ರಸ್ತೆಗಳು


ಈ ಗ್ರಾಮದ ರಸ್ತೆಗಳೆಲ್ಲವೂ ರಾಡಿ.. ರಾಡಿ.. ಇದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಜನರಿಗೊದಗಿದ ರಾಡಿ ಸಂಕಷ್ಟ. ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪನ ಕ್ಷೇತ್ರದಲ್ಲಿ ಬರುವ ಶಿರಗುಪ್ಪಿ ಗ್ರಾಮವಾಗಿದ್ದು, ಇಲ್ಲಿನ ರಸ್ತೆಗಳೆಲ್ಲವೂ ಕೆಸರು ಗದ್ದೆಯಂತಾಗಿ ಮಾರ್ಪಟ್ಟಿವೆ.


ಜಿಟಿ ಜಿಟಿ ಮಳೆಗೆ ಗ್ರಾಮದ ಜನ ಕಂಗೆಟ್ಟಿದ್ದಾರೆ. ಗ್ರಾಮಸ್ಥರು ಅಧಿಕಾರಿಗಳು ಮತ್ತು ಸಚಿವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳಿಗೂ ಗ್ರಾಮಸ್ಥರು ಪರದಾಡುವಂತಾಗಿದೆ.


ಮನೆಯಿಂದ ಹೊರ ಬಂದ್ರೆ ಬೀಳೋದು ಗ್ಯಾರೆಂಟಿ


ಕುಡಿಯಲು ಕೆರೆಯ ನೀರನ್ನೆ ಅವಲಂಬಿಸಿರೋ ಜನತೆ, ಕೆರೆ ನೀರು ತರೋಕೆ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಒಂದೇ ಒಂದು ರಸ್ತೆ ಸರಿಯಿಲ್ಲ. ಈ ರಸ್ತೆಗಳಲ್ಲಿ ಕಾಲಿಟ್ಟರೆ ಬೀಳುವುದು ಗ್ಯಾರಂಟಿ ಅನ್ನೋ ಸ್ಥಿತಿ ಇದೆ. ವಯೋವೃದ್ಧರಿಗೆ ಮನೆಯಿಂದ ಹೊರಗೆ ಬರೋದಕ್ಕೆ ಭಯ ಆಗುವಂತಾಗಿದೆ. ಸಾಯುವ ಮುಂಚೆ ಈ ರಸ್ತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ವೃದ್ಧೆಯೊಬ್ಬರು ಅಂಗಲಾಚಿದ್ದಾರೆ.


Youth falls into water while taking selfie in Dharwad saklb mrq
ನೀರಸಾಗರ


ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು


ರಸ್ತೆಗಾಗಿ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಇಲ್ಲಿಯವರೆಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಗ್ರಾಮೀಣಾಭಿವೃದ್ಧಿಗೆ ಕೋಟಿ ಕೋಟಿ ಖರ್ಚು ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಕೋಟಿ ಕೋಟಿ ಖರ್ಚಾದ್ರೂ ಈ ಗ್ರಾಮದ ರಸ್ತೆಗಳು ಅಭಿವೃದ್ಧಿ ಆಗಿಲ್ಲ ಏಕೆ ಅನ್ನೋ ಪ್ರಶ್ನೆ ಜನತೆಯದ್ದಾಗಿದೆ.


ಸರ್ಕಾರದ ಧೋರಣೆಗೆ ಶಿರಗುಪ್ಪಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ರಸ್ತೆಗಳನ್ನು ಸುಧಾರಿಸುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ತರು ಎಚ್ಚರಿಸಿದ್ದಾರೆ.


ಇದನ್ನೂ ಓದಿ:  Nandini Products Price Hike: ಕನ್ನಡಿಗರಿಗೆ ಬಿಗ್ ಶಾಕ್; ನಾಳೆಯಿಂದ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ


ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ನಿನ್ನೆಯಿಂದ ತಗ್ಗಿದ್ದ ವರುಣನ (Rainfall) ಅಬ್ಬರ ಇಂದು ಹೆಚ್ಚಾಗುವ ಸಾಧ್ಯತೆಗಳಿವೆ. ಕರಾವಳಿ (Coastal), ಮಲೆನಾಡು (Malenadu) ಮತ್ತು ಉತ್ತರ ಕರ್ನಾಟಕದ (North Karnataka) ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯ ಹವಾಮಾನ ಇಲಾಖೆ ಇಂದು ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಿದೆ.


ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿಯಲ್ಲಿ ಇಂದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆ ಉತ್ತರ ಒಳನಾಡಿನ ಕಲಬರುಗಿ  ಮತ್ತು ಬೀದರ್ ನಲ್ಲಿಯೂ ಯೆಲ್ಲೋ ಅಲರ್ಟ್ ಇದೆ.

Published by:Mahmadrafik K
First published: