• Home
  • »
  • News
  • »
  • state
  • »
  • Dharwad: ಫೋನ್ ಮಾಡಿ ಸಂಪರ್ಕಕ್ಕೆ ಬರುವಂತೆ ಒತ್ತಡ; ಸಲಿಂಗಕಾಮಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ

Dharwad: ಫೋನ್ ಮಾಡಿ ಸಂಪರ್ಕಕ್ಕೆ ಬರುವಂತೆ ಒತ್ತಡ; ಸಲಿಂಗಕಾಮಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ

ಪವನ್ ಮತ್ತು ಯಾಸೀನ್

ಪವನ್ ಮತ್ತು ಯಾಸೀನ್

ಮಗನಿಗೆ ಪವನ್ ಬ್ಯಾಳಿ ಎಂಬಾತನ ಜೊತೆ ಗೆಳೆತನವಿತ್ತು. ಆದ್ರೆ ಪವನ್ ಓರ್ವ ಸಲಿಂಗಕಾಮಿಯಾಗಿದ್ದು, ಈತ ನೀಡಿದ ಕಿರುಕುಳದಿಂದಲೇ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯಾಸೀನ್ ತಂದೆ ರಫೀಕ್ ಆರೋಪಿಸಿದ್ದಾರೆ.

  • Share this:

ಗುರುವಾರಷ್ಟೇ ಸಲಿಂಗ ಕಾಮಿ ಯುವತಿ (Young woman) ತನ್ನ ಗೆಳತಿ ಮೇಲೆ ಹಲ್ಲೆ ಮಾಡಿ ಜೈಲು (Prison) ಸೇರಿದ್ದಾಳೆ. ಇದೀಗ ಮತ್ತೊಂದು ಸಲಿಂಗ ಪ್ರೇಮದ (Relationship) ಪ್ರಕರಣ ತಡವಾಗಿ ಧಾರವಾಡ (Dharwad) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಲಿಂಗಕಾಮಿ ಗೆಳೆಯನ ಕಿರುಕುಳಕ್ಕೆ ಬೇಸತ್ತ ಯುವಕನೋರ್ವ (Youth) ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಪೊಲೀಸರು ಯುವಕನ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಸಲಿಂಗಕಾಮಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಧಾರವಾಡದ ಅತ್ತಿಕೊಳ್ಳದ ನಿವಾಸಿ ಯಾಸೀನ್ ರೋಟಿವಾಲೆ ಆತ್ಮಹತ್ಯೆಗೆ ಶರಣಾದ ಯುವಕ. ನಗರದಲ್ಲಿಯ ಆಟೋ ಡ್ರೈವರ್ (Auto Driver) ಕೆಲಸ ಮಾಡಿಕೊಂಡಿದ್ದ ಯಾಸೀನ್ ಅಕ್ಟೋಬರ್ 12ರಂದು ಹೊರಗೆ ಹೋದವ ಹಿಂದಿರುಗಿ ಬಂದಿರಲಿಲ್ಲ. ಅಕ್ಟೋಬರ್ 15ರಂದು ಯಾಸೀನ್ ಶವ ಧಾರವಾಡದ ಕೆಲಗೇರಿಯ ಕೆರೆಯಲ್ಲಿ ಪತ್ತೆಯಾಗಿತ್ತು.


ಮಗನಿಗೆ ಪವನ್ ಬ್ಯಾಳಿ ಎಂಬಾತನ ಜೊತೆ ಗೆಳೆತನವಿತ್ತು. ಆದ್ರೆ ಪವನ್ ಓರ್ವ ಸಲಿಂಗಕಾಮಿಯಾಗಿದ್ದು, ಈತ ನೀಡಿದ ಕಿರುಕುಳದಿಂದಲೇ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯಾಸೀನ್ ತಂದೆ ರಫೀಕ್ ಆರೋಪಿಸಿದ್ದಾರೆ.


ಯಾಸೀನ್-ಪವನ್ ಮದುವೆ ಆಗಿದ್ರಾ?


ಯಾಸೀನ್ ಮತ್ತು ಪವನ್ ಇಬ್ಬರ ಮಧ್ಯೆ ಸುಮಾರು ಏಳೆಂಟು ತಿಂಗಳ ಸ್ನೇಹವಿತ್ತು. ಈ ನಿಕಟವಾದ ಗೆಳತನಕ್ಕೆ ಸಲಿಂಗಕಾಮ ಎಂದು ವರದಿಯಾಗಿದೆ. ಆದ್ರೆ ನಾನು ಯಾಸೀನ್ ಎಂಬಾತನನ್ನು ಮದುವೆ ಆಗಿದ್ದೇನೆ ಎಂದು ಪವನ್ ತನ್ನ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದನಂತೆ. ಮೇಲ್ನೋಟಕ್ಕೆ ಇಬ್ಬರ ಗೆಳತನ ಸಲಿಂಗಕಾಮದ ಸ್ವರೂಪ ಪಡೆದುಕೊಂಡಿತ್ತು ಎಂದು ತಿಳಿದು ಬಂದಿದೆ.


ಆತ್ಮಹತ್ಯೆಗೆ ಶರಣಾಗಿದ್ದೇಕೆ ಯಾಸೀನ್?


ಪ್ರತಿದಿನ ಯಾಸೀನ್​​ಗೆ ಫೋನ್ ಮಾಡುತ್ತಿದ್ದ ಪವನ್ ತನ್ನ ಸಂಪರ್ಕಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದನಂತೆ. ಇದರ ಜೊತೆಗೆ ನಗರದಲ್ಲಿ ಮದುವೆಯಾಗಿದ್ದಾನೆ ಎಂದು ಹೇಳಿಕೊಂಡು ಪವನ್ ತಿರುಗಾಡುತ್ತಿದ್ದನಂತೆ. ಆತ್ಮಹತ್ಯೆಗೂ ಮುನ್ನ ಯಾಸೀನ್ ಮತ್ತು ಮಧ್ಯೆ ಜಗಳ ಉಂಟಾಗಿತ್ತು ಎಂದು ವರದಿಯಾಗಿದೆ. ಈ ಕಾರಣದಿಂದಲೇ ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗ್ತಿದೆ.


ಇದನ್ನೂ ಓದಿ:  Zameer Ahmed Khan: ಡಿಸೆಂಬರ್​ನಲ್ಲಿ ಕಾದಿದೆ ಬಿಜೆಪಿಗೆ ಬಿಗ್​ ಶಾಕ್​​; ಎಚ್​ಡಿಕೆಗೂ ಜಮೀರ್​ ಸವಾಲ್!


ಯಾಸೀನ್ ಪೋಷಕರ ಆರೋಪ ಏನು?


ಅಕ್ಟೋಬರ್ 12ರಂದು ಯಾಸೀನ್ ಜೊತೆಯಲ್ಲಿ ಪವನ್ ಇದ್ದನು. ಪವನ್ ಮಗನಿಗೆ ಕಿರುಕುಳ ನೀಡುತ್ತಿದ್ದನು. ಆದ್ರೆ ಇಬ್ಬರ ಮಧ್ಯೆ ಯಾವ ರೀತಿ ಸಂಬಂಧ ಇತ್ತು ಎಂಬುವುದು ನಮಗೆ ಗೊತ್ತಿಲ್ಲ. ಪುತ್ರನ ಈ ನಿರ್ಧಾರಕ್ಕೆ ಪವನ್ ಕಾರಣ ಎಂದು ಯಾಸೀನ್ ತಂದೆ ಆರೋಪ ಮಾಡಿದ್ದಾರೆ. ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ರಫೀಕ್ ದೂರು ದಾಖಲಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಪೋಷಕರಿಗೆ ಯಾಸೀನ್ ಕೊನೆಯ ಸಂದೇಶ


ಇನ್ನು ಆತ್ಮಹತ್ಯೆಗೂ ಮುನ್ನ ಯಾಸೀನ್ ಪೋಷಕರಿಗೆ ಕೊನೆಯ ಸಂದೇಶವೊಂದನ್ನು ಕಳುಹಿಸಿದ್ದನು. ಸಾಯುವ ಮುನ್ನ ತಂದೆಗೆ ಕರೆ ಮಾಡಿದ್ದ ಪವನ್ ನೀಡುತ್ತಿದ್ದ ಕಿರುಕುಳ ಬಗ್ಗೆ ಹೇಳಿದ್ದನು. ತನ್ನ ಗೆಳೆಯರಿಗೆ ಸಂದೇಶ ಕಳುಹಿಸಿ, ತನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದನು.


ಇದನ್ನೂ ಓದಿ:  Hubballi News: ವಿಮಾನಕ್ಕಿಂತ ಬಸ್ ಟಿಕೆಟ್ ದರವೇ ಹೆಚ್ಚು! ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟವರಿಗೆ ಶಾಕ್



 ಸಲಿಂಗಕಾಮಿಯ ಕಿರುಕುಳಕ್ಕೆ ಯಾಸೀನ್ ಜೀವ ಕಳೆದುಕೊಂಡಿದ್ದಾನೆ. ಇಬ್ಬರ ನಡುವೆ ಸಮ್ಮತಿಯ ಸಂಬಂಧ ಇತ್ತಾ? ಅಕ್ಟೋಬರ್ 12ರಂದು ನಿಜಕ್ಕೂ ನಡೆದಿದ್ದು ಏನು ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬರಬೇಕಿದೆ.

ರೇಡಿಯಂ ಕಟರ್​ನಿಂದ ಹಲ್ಲೆ


ಕೋಕಿಲಾ ಮತ್ತು ಸುಶೀಲಾ (ಹೆಸರು ಬದಲಾಯಿಸಲಾಗಿದೆ) ದಾವಣಗೆರೆಯ ಪದವಿ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರಿಗೂ ಬಹಳ ವರ್ಷದ ಸ್ನೇಹ. ಈ ಸ್ನೇಹ ಇತ್ತೀಚೆಗೆ ಸಲಿಂಗಕಾಮಕ್ಕೆ ತಿರುಗಿತ್ತು. ಕೋಕಿಲಾ ಬೇರೆ ಯುವತಿಯ ಜೊತೆ ಮಾತನಾಡಿದ್ದಕ್ಕೆ ಸುಶೀಲಾ ರೇಡಿಯಂ ಕಟರ್​ನಿಂದ ಹಲ್ಲೆ ನಡೆಸಿದ್ದಾಳೆ.




ಇದನ್ನೂ ಓದಿ:  Hubballi: ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಮುಖ ಆರೋಪಿ ಸಾವಿನ ಸುತ್ತ ಅನುಮಾನದ ಹುತ್ತ!
 ಗುರುವಾರ ಸಂಜೆ ಕೋಕಿಲಾ ಎಂಬ ಯುವತಿ ಮೇಲೆ ಸುಶೀಲಾ ಎಂಬಾಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಹಲ್ಲೆಗೆ ಸಲಿಂಗ ಕಾಮ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಸ್‍ಪಿ ರಿಷ್ಯಂತ್ ಹೇಳಿದ್ದಾರೆ.

Published by:Mahmadrafik K
First published: