ಬೆಂಗಳೂರು: ವೈದ್ಯರ ನಿರ್ಲಕ್ಷಕ್ಕೆ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಪಿ ಅಗ್ರಹಾರ (KP Agrahara, Bengaluru) ಪೊಲೀಸ್ ಠಾಣೆಯಲ್ಲಿ ನಡೆದಿದೆ. 24 ವರ್ಷದ ಸತೀಶ್ ಸಾವನ್ನಪ್ಪಿದ ಯುವಕ. ಭಾನುವಾರ ಮದ್ಯಪಾನ (Drunk) ಮಾಡಿದ್ದ ಸತೀಶ್ ಬಿದ್ದಿದ್ದರು. ಈ ವೇಳೆ ಗಾಜು ಚುಚ್ಚಿ ಗಾಯವಾಗಿತ್ತು. ಪೋಷಕರು ಸತೀಶ್ನನ್ನು ಭಾನುವಾರ ರಾತ್ರಿ ಮಧು ಆಸ್ಪತ್ರೆಗೆ (Private Hospital) ದಾಖಲಿಸಿದ್ದರು. ಸೋಮವಾರ ಶಸ್ತ್ರಚಿಕಿತ್ಸೆ (Surgery) ಸಹ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಸತೀಶ್ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು. ಮಂಗಳವಾರ ಮಧ್ಯಾಹ್ನ ಸತೀಶ್ ಮೃತರಾಗಿದ್ದಾರೆ. ಕೈಗೆ ಪೆಟ್ಟಾಗಿದೆ ಅಂತ ಆಸ್ಪತ್ರೆ ಕರೆದೊಯ್ದರೆ ಪ್ರಾಣವನ್ನೆ ತೆಗೆದಿದ್ದಾರೆ ಎಂದು ಸತೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಸತೀಶ್ ಪೋಷಕರು ಆಸ್ಪತ್ರೆ ವಿರುದ್ಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು (Complaint Files) ದಾಖಲಿಸಿದ್ದಾರೆ.
11 ಗೋವುಗಳ ರಕ್ಷಣೆ
ಅಕ್ರಮವಾಗಿ ಸಾಗಿಸುತ್ತಿದ್ದ 11 ಗೋವುಗಳನ್ನು (Cow Rescue) VHP ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ನೇತೃತ್ವದಲ್ಲಿ ರಕ್ಷಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು (hiriyur, Chitradurga) ತಾಲ್ಲೂಕಿನ ಪಟ್ರೆಹಳ್ಳಿ ಬಳಿ ಈ ಘಟನೆ ನಡೆದಿದೆ. ಗೋವುಗಳ ಸಾಗಿಸುತ್ತಿದ್ದ ಲಾರಿ ಚಾಲಕ ವಿಕಾಸ್, ಕ್ಲೀನರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯದಿಂದ ಹಿರಿಯೂರು ಮಾರ್ಗವಾಗಿ ಅಥಣಿ ಕಡೆಗೆ ಗೋವುಗಳನ್ನು ಸಾಗಿಸಲಾಗ್ತಿತ್ತು. ಖಚಿತ ಮಾಹಿತಿ ಮೇರೆಗೆ VHP ಕಾರ್ಯಕರ್ತರು ಗೋವುಗಳನ್ನು ರಕ್ಷಿಸಿದ್ದಾರೆ.
ಆಪರೇಷನ್ ಒಂಟಿಸಲಗ ಸಕ್ಸಸ್
ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆಯನ್ನ (Wild Elephant) ಬಂಡೀಪುರ ಜಿ.ಎಸ್.ಬೆಟ್ಟ ವಲಯದ ಕಡೇಕೋಟೆಯಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆ ಜಿ.ಎಸ್.ಬೆಟ್ಟ ವಲಯ ಸುತ್ತಮುತ್ತ ಬೆಳೆ ಗಹಾನಿ ಮಾಡಿತ್ತು. ಹೀಗಾಗಿ ಸ್ಥಳೀಯರು ಆನೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದರು.
ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ, ಭೀಮ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಕಾಡಾನೆಯನ್ನ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಕಾಡಾನೆಯನ್ನ ಐನೂರು ಮಾರಿಗುಡಿ ಸಾಕಾನೆಗಳ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಹೊತ್ತಿ ಉರಿದ ಗೋಡೌನ್!
ಆಕಸ್ಮಿಕ ಬೆಂಕಿಯಿಂದ ಸ್ಕ್ರ್ಯಾಪ್ ಗೋಡೌನ್ನಲ್ಲಿ ಬೆಂಕಿ (Fire Accident) ಕಾಣಿಸಿಕೊಂಡ ಘಟನೆ ಬೀದರ್ ಹಾಗೂ ಹೈದ್ರಾಬಾದ್ ಮುಖ್ಯರಸ್ತೆಯಲ್ಲಿರುವ ಅಬ್ದುಲ್ ಪೈಸ್ ದರ್ಗಾ ಬಳಿ ನಡೆದಿದೆ.
ಪಾಷಾ ಎಂಬುವರಿಗೆ ಸೇರಿದ್ದ ಕಚ್ಚಾ ಸಾಮಗ್ರಿ ಸಂಗ್ರಹಿಸಿದ್ದ ಗೋಡೌನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಗೋಡೌನ್ನಲ್ಲಿ 50 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ: Jagadish Shettar: ಜಗದೀಶ್ ಶೆಟ್ಟರ್ ಅತೃಪ್ತಿ ಜ್ವಾಲೆಗೆ ತುಪ್ಪ ಸುರಿಯುವ ಕೆಲಸ ನಡೆಯುತ್ತಿದೆಯಾ?
ಮೂವರಿಗೆ ಗಾಯ, ಆಸ್ಪತ್ರೆಗೆ ಶಿಫ್ಟ್
ಮರಕ್ಕೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದಿದ್ದು, ಮೂವರಿಗೆ ಗಾಯವಾಗಿದೆ. ಈ ಘಟನೆ ಶಿವಮೊಗ್ಗದ ಸಾಗರ ತಾಲ್ಲೂಕಿನ ತ್ಯಾಗರ್ತಿ ಅಬಸೆ ಸಮೀಪ ನಡೆದಿದೆ. ಮೂವರು ಗಾಯಗೊಂಡಿದ್ದು, ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಸಿ ಕಚೇರಿ ಮುಂದೆ ಹೈಡ್ರಾಮಾ
ಯಾದಗಿರಿ ಡಿಸಿ ಕಚೇರಿ ಮುಂದೆ ವಿಷ ಸೇವಿಸಿ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿದ್ದಾನೆ. ಆಸ್ತಿ ಮಾರಾಟ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪ ಮಾಡಿದ್ದು, ಬಿಜೆಪಿ ನಾಯಕರ ಹೆಸರು ಹೇಳಿ ವಿಷ ಸೇವಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಬಳಿಕ ವಿಷ ಸೇವಿಸಿದ ಯುವಕ ಶರಣುಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಯುವಕನ ಆರೋಪದ ವಿರುದ್ಧ ಬಿಜೆಪಿ ಮುಖಂಡರು ಸಹ ಪ್ರತಿಭಟನೆ ಮಾಡಿದ್ದಾರೆ.
ಮಹಿಳೆ ಅರೆಸ್ಟ್
ನಾನು ಪೊಲೀಸ್, ಬಂದಾಗೆಲ್ಲಾ ಫ್ರಿಯಾಗಿ ಬಜ್ಜಿ, ಬೋಂಡಾ (Bajji And Bondas) ನೀಡಬೇಕು ಎಂದು ಹೇಳಿ ಅವಾಜ್ ಹಾಕಿದ್ದ ಮಹಿಳೆಯನ್ನು ಪೊಲೀಸರು (Woman Arrest) ಬಂಧಿಸಿದ್ದಾರೆ. ರಸ್ತೆ ಬದಿ ವ್ಯಾಪಾರಿಗೆ ಅವಾಜ್ ಹಾಕಿದ್ದ ಮಹಿಳೆ, ಫ್ರಿಯಾಗಿ ಬಜ್ಜಿ ಬೋಂಡಾ ತೆಗೆದುಕೊಂಡು ಹೋಗುತ್ತಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ