Kodagu: ವಿವಾದದ ಸ್ವರೂಪ ಪಡೆದ ಬುರ್ಖಾ, ಹಿಜಾಬ್ ಧರಿಸಿ ಮಾಡಿದ ಯುವಕರ ಡ್ಯಾನ್ಸ್

ಬುರ್ಖಾ ಮತ್ತು ಹಿಜಾಬ್ ಅನ್ನು ಈ ರೀತಿ ಬಳಸಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರ ವಿರುದ್ಧ ಪೊಲೀಸರು ಸ್ವತಃ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಬುರ್ಖಾ ಧರಿಸಿದ ಯುವಕರ ಡ್ಯಾನ್ಸ್

ಬುರ್ಖಾ ಧರಿಸಿದ ಯುವಕರ ಡ್ಯಾನ್ಸ್

  • Share this:
ಮಡಿಕೇರಿ: ಕೊಡಗಿನಲ್ಲಿ (Kodagu) ಒಂದಿಲ್ಲಾ ಒಂದು ಘಟನೆ ಧರ್ಮಗಳ ನಡುವಿನ ಗದ್ದಲ (Communal Clash) ಮುನ್ನೆಲೆಗೆ ಬರಲು ಕಾರಣವಾಗುತ್ತಿದೆ. ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಇಲ್ಲಿನ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವದಲ್ಲಿ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಲ ಹಿಂದೂ ಯುವಕರು (Hindu Youths) ಬುರ್ಖಾ ಮತ್ತು ಹಿಜಾಬ್ (Burqa And hijab) ಧರಿಸಿ ನೃತ್ಯ (Dance) ಮಾಡಿರುವುದು ಈಗ ವಿವಾದ ಸ್ವರೂಪ ಪಡೆದುಕೊಂಡಿದೆ. ಕಳೆದ ಹಲವು ದಿನಗಳಿಂದ ಶಾಲೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂಬ ವಿಷಯ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಮುಸಲ್ಮಾನರ ಬುರ್ಖಾ ಮತ್ತು ಹಿಜಾಬ್ ಅನ್ನು ಹಿಂದೂ ಯುವಕರು ಧರಿಸಿ ಅಸಹ್ಯಕರ ರೀತಿಯಲ್ಲಿ ನೃತ್ಯ ಮಾಡಿದ್ದಾರೆ ಎನ್ನುವ ವಿಷಯ ಈಗ ಜಿಲ್ಲೆಯಲ್ಲಿ ಒಂದು ರೀತಿಯ ಅಶಾಂತಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ವೆಸ್ಟ್ ಕೊಳಕೇರಿಯಲ್ಲಿ ಅಲ್ಲಿನ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇದೇ 28 ರಂದು ನಡೆದಿದೆ. ಈ ವೇಳೆ ಕೆಲ ಹಿಂದೂ ಯುವಕರು ಬುರ್ಖಾ ಮತ್ತು ಹಿಜಾಬ್ ಅನ್ನು ಧರಿಸಿ, ಕೊಡವ ಓಲಗ ವಾದ್ಯಕ್ಕೆ ನೃತ್ಯ ಮಾಡಿದ್ದಾರೆ.

ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಡ್ಯಾನ್ಸ್

ನೃತ್ಯ ಮಾಡುವಾಗ ಬುರ್ಖಾ ಮತ್ತು ಹಿಜಾಬ್ ಅನ್ನು ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಬಳಸಿದ್ದಾರೆ ಎನ್ನುವುದು ವಿವಾದಕ್ಕೆ ಕಾರಣವಾಗಿದೆ. ಹೀಗೆ ಅಸಹ್ಯಕರವಾಗಿ ನೃತ್ಯ ಮಾಡಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಎಸ್‍ಡಿಪಿಐ ಮುಖಂಡರು ಅಸಮಾಧಾನ ವ್ಯಕ್ತಪಡಿದ್ದಾರೆ.

ಇದನ್ನೂ ಓದಿ:  B C Nagesh: ನಾಡಗೀತೆಗೆ ಅಪಮಾನ; ನಿರ್ಮಲಾನಂದನಾಥ ಸ್ವಾಮೀಜಿ ಪತ್ರ, ಆದಿಚುಂಚನಗಿರಿ ಮಠಕ್ಕೆ ಸಚಿವ ಬಿ ಸಿ ನಾಗೇಶ್ ದೌಡು

ಈ ನೃತ್ಯಕ್ಕೆ SDPI ಆಕ್ರೋಶ

ಮುಸಲ್ಮಾನರ ಬುರ್ಖಾ ಮತ್ತು ಹಿಜಾಬ್ ಅನ್ನು ಆ ರೀತಿ ಕೆಟ್ಟದಾಗಿ ಬಳಸಿ ನೃತ್ಯ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋಗಳನ್ನು ಸೇರಿಸಿ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ ಅಯ್ಯಪ್ಪ ಮತ್ತು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಬುರ್ಖಾ ಮತ್ತು ಹಿಜಾಬ್ ಅನ್ನು ಈ ರೀತಿ ಬಳಸಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರ ವಿರುದ್ಧ ಪೊಲೀಸರು ಸ್ವತಃ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.ಕಾರ್ಯಕ್ರಮದಲ್ಲಿ ವೀಣಾ ಅಚ್ಚಯ್ಯ, ಬೋಪಯ್ಯ ಭಾಗಿ

ಈ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಕಾಂಗ್ರೆಸ್ ಎಂಎಲ್‍ ಸಿ ವೀಣಾ ಅಚ್ಚಯ್ಯ ಮತ್ತು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಇಬ್ಬರು ಭಾಗವಹಿಸಿದ್ದರು. ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತ್ತೊಂದು ಧರ್ಮಕ್ಕೆ ಅಪಮಾನ ಮಾಡುವಂತೆ ನೃತ್ಯ ಮಾಡಿರುವುದು ಸರಿಯಲ್ಲ. ಕೊನೆ ಪಕ್ಷ ಕಾಂಗ್ರೆಸ್ ಇದಕ್ಕೊಂದು ಖಂಡನೆ ವ್ಯಕ್ತಪಡಿಸಿಲ್ಲ ಎಂದು ಎಸ್‍ಡಿಪಿಐ ಅಸಮಾಧಾನ ವ್ಯಕ್ತಪಡಿಸಿದೆ.

ಬುರ್ಖಾ ತೊಟ್ಟು ನೃತ್ಯ ಮಾಡಿರುವ ವಿಷಯ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘವು ಇದು ಉದ್ದೇಶ ಪೂರ್ವಕವಾಗಿ ಮಾಡಿರುವುದಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೊಡವ ಓಲಗಕ್ಕೆ ಹಲವು ತಂಡಗಳು ನೃತ್ಯ ಮಾಡಿವೆ.

ಸಂಘದ ಅಧ್ಯಕ್ಷ ರಮೇಶ್ ಸ್ಪಷ್ಟನೆ

ಈ ವೇಳೆ ಯಾರು ನೃತ್ಯ ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಊರಿನ ಕೆಲ ಯುವಕರು ಬುರ್ಖಾ ತೊಟ್ಟು ನೃತ್ಯ ಮಾಡಿದ್ದಾರೆ. ಇದರಲ್ಲಿ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಸಂಘದ ಅಧ್ಯಕ್ಷ ರಮೇಶ್ ಮುದ್ದಯ್ಯ ಹೇಳಿದ್ದಾರೆ.

ಇದನ್ನೂ ಓದಿ:  Rohit Chakratirtha: ನಾಡಗೀತೆಗೆ ಅವಮಾನ; ರೋಹಿತ್ ಚಕ್ರತೀರ್ಥ ವಿರುದ್ಧ ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ

ಬಹಿರಂಗ ಕ್ಷಮೆಗೆ SDPI ಆಗ್ರಹ

ಆದರೆ ಎಸ್‍ಡಿಪಿಐ ಕಾರ್ಯಕ್ರಮ ಆಯೋಜಕರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಗೆ ನಿರ್ಧರಿಸಿದೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಸಂಘವು ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಎಸ್‍ಡಿಪಿಐ ಮುಖಂಡರು ಹೇಳಿದ್ದಾರೆ.
Published by:Mahmadrafik K
First published: