• Home
  • »
  • News
  • »
  • state
  • »
  • Congress Protest: ಆ ಚಡ್ಡಿ ಏನು ರಾಷ್ಟ್ರಧ್ವಜನಾ? ಅದರಲ್ಲಿ ಅಷ್ಟೊಂದು ಪವರ್ ಇದೆಯಾ?: ಕೀರ್ತಿಗಣೇಶ್ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Congress Protest: ಆ ಚಡ್ಡಿ ಏನು ರಾಷ್ಟ್ರಧ್ವಜನಾ? ಅದರಲ್ಲಿ ಅಷ್ಟೊಂದು ಪವರ್ ಇದೆಯಾ?: ಕೀರ್ತಿಗಣೇಶ್ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಚಡ್ಡಿಯಲ್ಲಿ ಅಷ್ಟೊಂದು ಪವರ್ ಇದೆಯಾ..? ಆ ಚಡ್ಡಿಯಲ್ಲಿ ಇರುವ ಪವರ್ ದೇಶವನ್ನು ಹೊಡೆಯುವಂತ ಪವರ್. ನಾವು ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕ್ತೀವಿ. ಪೊಲೀಸರೇ ಎಷ್ಟು ಜನರನ್ನು ಬಂಧಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.

  • Share this:

NSUI ಅಧ್ಯಕ್ಷ ಕೀರ್ತಿ ಗಣೇಶ್ (Kirti Ganesh Arrest) ಬಂಧನ ವಿರೋಧಿಸಿ ಇಂದು ಯೂಥ್ ಕಾಂಗ್ರೆಸ್ (Youth Congress) ಧರಣಿ ನಡೆಸಿತು. ಬೆಂಗಳೂರಿನ ಪ್ರೀಡಂ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಮತ್ತು ರಾಜ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮೊದ್ ನಲಪಾಡ್ (Mohmmad Nalpad) ಭಾಗಿಯಾಗಿ ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುದ್ಧ ಆಕ್ರೋಶ ಹೊರ ಹಾಕಿದರು. ಸಚಿವ ಬಿ.ಸಿ. ನಾಗೇಶ್ (Minister BC Nagesh) ಮನೆ ಮೇಲಿನ ದಾಳಿ ಹಿನ್ನೆಲೆ ಕೀರ್ತಿ ಗಣೇಶ್ ಅವರನ್ನು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ವೇಳೆ ಮಾತನಾಡಿದ ಯೂಥ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ಇಡೀ ಕರ್ನಾಟಕದ ಜಿಲ್ಲೆಗಳಲ್ಲಿ ಚಡ್ಡಿ ಸುಡುತ್ತೇವೆ. ಇವತ್ತು ಒಂದು ಚಡ್ಡಿ ಸುಟ್ಟಿದ್ದಕ್ಕೆ ಕೀರ್ತಿ ಗಣೇಶ್ ಅರೆಸ್ಟ್ ಮಾಡಿದ್ದೀರಿ. ನಾವು ಎಲ್ಲಾ ಜಿಲ್ಲೆಗಳಲ್ಲಿ ಚಡ್ಡಿ ಸುಡ್ತೀವಿ. ಅವಾಗ ಎಷ್ಟು ಜನರನ್ನು ಅರೆಸ್ಟ್ ಮಾಡ್ತೀರಿ ಅಂತಾ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.


ಈ ಚಡ್ಡಿಯಲ್ಲಿ ಅಷ್ಟೊಂದು ಪವರ್ ಇದೆಯಾ..? RSS ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ನಲಪಾಡ್ ಹ್ಯಾರೀಸ್ ಆಕ್ರೋಶ ಹೊರಹಾಕಿದರು. ಈ ಚಡ್ಡಿ ಸುಟ್ಟಿದ್ದಕ್ಕೆ ಎಷ್ಟು ಜನರನ್ನು ಬಂಧಿಸ್ತೀರಿ..? ಮೊದಲು ಮುಸ್ಲಿಮರನ್ನು ಹೊಡೆದ್ರು, ಆಮೇಲೆ ದಲಿತರನ್ನು, ಕ್ರಿಶ್ಚಿಯನ್ಸರನ್ನು ಹೊಡೆದರು. ಇವರು ಬಸವಣ್ಣನ, ಕುವೆಂಪು ಅವರನ್ನು ಸಹ ಬಿಟ್ಟಿಲ್ಲ. RSS ನವರು ಸಂವಿಧಾನದ ಮೇಲೆ ಹಲ್ಲೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.


ಆ ಚಡ್ಡಿಯಲ್ಲಿ ಅಷ್ಟೊಂದು ಪವರ್ ಇದೆಯಾ?


ಈ ಚಡ್ಡಿಯಲ್ಲಿ ಅಷ್ಟೊಂದು ಪವರ್ ಇದೆಯಾ..? ಆ ಚಡ್ಡಿಯಲ್ಲಿ ಇರುವ ಪವರ್ ದೇಶವನ್ನು ಹೊಡೆಯುವಂತ ಪವರ್. ನಾವು ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕ್ತೀವಿ. ಪೊಲೀಸರೇ ಎಷ್ಟು ಜನರನ್ನು ಬಂಧಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.


ಇದನ್ನೂ ಓದಿ:  Siddaramaiah: ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ; ಸಿದ್ದರಾಮಯ್ಯ


ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಸಚಿವರೇ ಮೊದಲು ರಾಜೀನಾಮೆ ಕೊಡಿ. ಈ ಚಡ್ಡಿಗೆ ಯಾಕೆ ಇಷ್ಟೊಂದು ಟೆನ್ಸನ್ ಆಗಿದ್ದೀರಿ. ನೀವು ಇವಾಗ ಪ್ಯಾಂಟ್ ತಾನೇ ಹಾಕೋದು. ನೀವು ಪ್ಯಾಂಟ್ ಹಾಕಿ, ಚಡ್ಡಿ ಹಾಕಿ. ಆದರೆ ನಿಮ್ಮ ಯೋಚನೆಗಳು ಮಾತ್ರ ಯಾವತ್ತೂ ಬದಲಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.


ಚಕ್ರತೀರ್ಥನನ್ನ ಜೈಲಿ ಹಾಕಿ


ಕೀರ್ತಿ ಗಣೇಶ್ ಏನು ಬಾಂಬ್ ತಗೊಂಡು ಹೋಗಿದ್ರಾ..? ಹಾಗಿದ್ರೆ ಚಡ್ಡಿಯನ್ನು ಬಾಂಬ್ ಅಂದ್ಕೊಂಡು ಕೇಸ್ ಹಾಕಿದ್ದೀರಾ? ನೀವು ನಿಜವಾಗಿಯೂ ದೇಶಭಕ್ತರು ಆಗಿದ್ರೆ, ಆ ಚಕ್ರತೀರ್ಥನನ್ನು ಜೈಲಿಗೆ ಹಾಕಿ. ಅವನು ಯಾರೋ ಪೇಪರ್ ಸಿಂಹ ಅಂತೆ. ಇವನು ಧ್ವಜ ಬದಲಿಸೋಕೆ ಹೋಗ್ತಾನೆ. ಮೊದಲು ಚಡ್ಡಿನೋ, ಪ್ಯಾಂಟ್ ಬದಲಿಸಿದ್ಯೋ ಅಂತಾ ಹೇಳಪ್ಪ ಎಂದು ಕಿಡಿಕಾರಿದರು.


ಚಡ್ಡಿ ಏನು ರಾಷ್ಟ್ರಧ್ವಜನಾ..?


ಬಿಜೆಪಿ ಅವರು ಯಾರ ಮನೆಗೆ ಹೋಗಿ ಬೇಕಾದ್ರು ಬೆಂಕಿ ಹಚ್ಚಬಹುದು. ಅವರಿಗೆ ಯಾವುದೇ ಕಾನೂನು ಇಲ್ಲ. ಆದರೆ ಕಾಂಗ್ರೆಸ್ ನವರು ಚಡ್ಡಿ ಸುಟ್ಟಿದ್ದಕ್ಕೆ ಕಾನೂನು ಬೇಕಾ.? ಚಡ್ಡಿ ಏನು ರಾಷ್ಟ್ರಧ್ವಜನಾ..? ಕೀರ್ತಿ ಗಣೇಶ್ ಏನು ರಾಷ್ಟ್ರಧ್ವಜ ಸುಟ್ಟಿದ್ದಾರಾ..? ಕೀರ್ತಿ ಗಣೇಶ್ ಬಿಡುಗಡೆ ಆಗಬೇಕು. ಇಲ್ಲವಾದಲ್ಲಿ ಮುಂದಿನ ದೊಡ್ಡ ಹೋರಾಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಿ.ವಿ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.


ಇದನ್ನೂ ಓದಿ:  Siddaramaiah ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡಿತಿಲ್ಲ, ತಲೆ ಮೇಲೆ ಚಪ್ಪಡಿ ಎಳೆದುಕೊಳ್ತಿರೋದು: HD Kumaraswamy


ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಯೂತ್ ಕಾಂಗ್ರೆಸ್ ಕಾರ್ಯಕರ್ತರರನ್ನು ಪೊಲೀಸರು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡರು. ರಾಷ್ಟ್ರೀಯ ಯೂತ್ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್, ರಾಜ್ಯಾಧ್ಯಕ್ಷ  ಮಹಮ್ಮದ್ ನಲ್ಪಾಡ್ ಹ್ಯಾರೀಸ್ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Published by:Mahmadrafik K
First published: