Nalapad​ ಮೇಲೆ ಹತ್ಯೆ ಪ್ರಯತ್ನ ಆರೋಪ, ಅದೆಲ್ಲಾ ಸುಳ್ಳು, ಅಲ್ಲೇನೂ ನಡೆದೇ ಇಲ್ಲ ಎಂದ ಬಳ್ಳಾರಿ ಕಾಂಗ್ರೆಸ್ ಯುವ​ ಅಧ್ಯಕ್ಷ ಸಿದ್ದು

Mohammed Nalapad: ಯುವ ಕಾಂಗ್ರೆಸ್ ಎಲೆಕ್ಷನ್ ವಿಚಾರಕ್ಕೆ  ಈ ಗಲಾಟೆ ನಡೆದಿದೆ ಎಂದು ಸುದ್ದಿ ಹರಿದಾಡುತಿತ್ತು. ಮಂಜುನಾಥ್ ಗೌಡ ಗೆ ಚುನಾವಣೆಯಲ್ಲಿ ಬೆಂಬಲಿಸಿದ್ದೀಯಾ,  ನನಗೆ ನೀನು ಬೆಂಬಲಿಸಿಲ್ಲ ಎಂದು ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಸಿದ್ದು ಆರೋಪಿಸಿದ್ದಾರೆ ಎನ್ನಲಾಗಿತ್ತು.  

ಮೊಹಮ್ಮದ್​ ನಲಪಾಡ್​

ಮೊಹಮ್ಮದ್​ ನಲಪಾಡ್​

  • Share this:
ಯುವ ಕಾಂಗ್ರೆಸ್​ (Youth Congress) ನಾಯಕ ಮೊಹಮ್ಮದ್​  ನಲಪಾಡ್ (Mohammed Haris Nalapad) ಮತ್ತೆ ರಾದ್ಧಾಂತ ಮಾಡಿಕೊಂಡಿರುವ ಬಗ್ಗೆ ಸುದ್ದಿ ಹರಿದಾಡಿತ್ತು.  ಬಳ್ಳಾರಿ (Bellary)  ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ, ಆತನ ಕಾರು ಚಾಲಕ , ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನೆ ತಡರಾತ್ರಿ ಯಲಹಂಕದ (Yelahanka)  ಕ್ಲಬ್ ನಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಸಿದ್ದು ಕಾಂಗ್ರೆಸ್ ನಾಯಕರಿಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನ್ನ ಮೇಲೆ ಯಾವುದೇ ಹಲ್ಲೆಯಾಗಿಲ್ಲ ಎಂದು ತಿಳಿಸಿದ್ಧಾರೆ. 

ನನ್ನ‌ಮೇಲೆ ಯಾರೂ ಹಲ್ಲೆ ಮಾಡಿಲ್ಲ. ಇದೆಲ್ಲ ಸತ್ಯಕ್ಕೂ ದೂರವಾದದ್ದು, ಅಂದು ನಾನು  jw ಮ್ಯಾರೇಟ್ ಹೋಟೆಲ್ ಹೋಗಿದ್ದು ನಿಜ, ಅಲ್ಲಿ ಪೂರ್ವಭಾವಿ ಸಭೆ ಮುಗಿಸಿಕೊಂಡು ಹೊರಟೆ. ಆದರೆ ಆನಂತರ ನಲಪಾಡ್ ಕಡೆಯವರು ನನಗೆ ಬೆದರಿಕೆ ಯಾವುದೇ ಹಾಕಿಲ್ಲ.  ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಫೋಟೋ ನನ್ನದಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಯಾಕೆ ಈ ರೀತಿ ಸುದ್ದಿ ಹಬ್ಬಿದೆಯೋ ಗೊತ್ತಿಲ್ಲ. ನಾನೇ ಸುದ್ದಿ ಹಬ್ಬಿಸಿರೋದೇ ಆಗಿದ್ದರೆ ನನ್ನ ಹೆಸರು, ಡಿಸಿಗ್ನೇಷನ್ ಸಹಿತ ಮೆಸೇಜ್ ಮಾಡಿ ಹರಿಬಿಡುತ್ತಿರಲಿಲ್ಲ. ಇದೆಲ್ಲ ಸುಳ್ಳು ಎಂದಿದ್ಧಾರೆ.

ಘಟನೆಯ ಸ್ಥಳದಲ್ಲಿ ನಾನಿರಲ್ಲಿ-ನಲಪಾಡ್ ಸ್ಪಷ್ಟನೆ

ಇನ್ನು ಈ ಬಗ್ಗೆ ನಲಪಾಡ್ ಪ್ರತಿಕ್ರಿಯೆ ನೀಡಿದ್ದು ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ನಾನು ನನ್ನ ಕುಟುಂಬದೊಂದಿಗೆ ಇದ್ದೆ, ಇದಕ್ಕಾಗಿ ನಾನು ಹೇಗೆ ಹಲ್ಲೆ ಮಾಡಲು ಸಾಧ್ಯ? ಅಲ್ಲಿ ನಮ್ಮ ಕೆಲವು ಸದಸ್ಯರ ನಡುವೆ ಕೆಲವು ತಪ್ಪು ತಿಳುವಳಿಕೆ ಇತ್ತು. ಅದಕ್ಕೆ ನಾನು ಜವಾಬ್ದಾರನಲ್ಲ. ಈ ಬಗ್ಗೆ ಸಿದ್ದು ಹಳೇ ಗೌಡ ಅದೇ ವಾಟ್ಸಾಪ್ ಗ್ರೂಪ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಜ.31ರಂದು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಕಾರಣಕ್ಕೆ ನನ್ನ ವರ್ಚಸ್ಸು ಹಾಳು ಮಾಡುವ ಷಡ್ಯಂತ್ರ ಇದಾಗಿದೆ. ಅಲ್ಲಿ ನನ್ನ ಉಪಸ್ಥಿತಿಯ ಬಗ್ಗೆ ಏನಾದರೂ ಪುರಾವೆ ಇದೆಯೇ? ಎಂದು ನಲಪಾಡ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಅಕ್ರಮ ಹಣ ವರ್ಗಾವಣೆ: ತನಿಖೆಗಿಳಿದ ED

ಯುವ ಕಾಂಗ್ರೆಸ್ ಎಲೆಕ್ಷನ್ ವಿಚಾರಕ್ಕೆ  ಈ ಗಲಾಟೆ ನಡೆದಿದೆ ಎಂದು ಸುದ್ದಿ ಹರಿದಾಡುತಿತ್ತು. ಮಂಜುನಾಥ್ ಗೌಡ ಗೆ ಚುನಾವಣೆಯಲ್ಲಿ ಬೆಂಬಲಿಸಿದ್ದೀಯಾ,  ನನಗೆ ನೀನು ಬೆಂಬಲಿಸಿಲ್ಲ ಎಂದು ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಸಿದ್ದು ಆರೋಪಿಸಿದ್ದಾರೆ ಎನ್ನಲಾಗಿತ್ತು.  

ಈ ಹಿಂದೆ ಕೂಡ ಹಲವು ರೀತಿಯ ವಿವಾದಗಳಲ್ಲಿ ನಲಪಾಡ್​ ಹೆಸರು ಕೇಳಿ ಬಂದಿತ್ತು. ಅರಮನೆ ರಸ್ತೆಯ ಬಳಿ ಬೆಂಟ್ಲಿ ಕಾರಿನಲ್ಲಿ ನಲಪಾಡ್​​​​ ಚಾಲನೆ ಮಾಡಿ, ಅಪಘಾತ ಮಾಡಿರುವುದು ತನಿಖೆಯಲ್ಲಿ ಬಯಲಾಗಿತ್ತು. ಅರಮನೆ ರಸ್ತೆಯ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಬಳಿ ದುಬಾರಿ ಬೆಲೆಯ ಕಾರುಗಳಲ್ಲಿ ಹೋಗುತ್ತಿರುವಾಗ ಓರ್ವ ಬೈಕ್ ಸವಾರನಿಗೆ ಹಾಗೂ ಆಟೋ ಚಾಲಕನಿಗೆ ಗುದ್ದಿದ್ದರು,  ಬಳಿಕ ನೆಲಕ್ಕೆ ಬಿದ್ದ ಬೈಕ್ ಸವಾರ‌ನನ್ನು ಮಾತನಾಡಿಸದೇ, ಸ್ನೇಹಿತರ‌ ಮತ್ತೊಂದು ಕಾರಿನಲ್ಲಿ ನಲಪಾಡ್​ ಪರಾರಿ ಆಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
Published by:Sandhya M
First published: