Yadagiri: ಸಂಭ್ರಮದಿಂದ ಜರುಗಿದ ಹಾಲೋಕಳಿ ಜಾತ್ರೆ, 60 ಅಡಿ ಎತ್ತರದ ಕಂಬವೇರಿ ಯುವಕರ ಸಾಹಸ!

ಸುರಪುರ ಸಂಸ್ಥಾನದ  ರಾಜಮನೆತನದವರು 300 ವರ್ಷಗಳಿಂದ ಈ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಗೋ ಸಲ ವಂಶಸ್ಥ ಅರಸ ಮನೆತನದವರು ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥಾನದ ಅರಸು ರಾಜಾ ಕೃಷ್ಣಪ್ಪ ನಾಯಕ ಅವರ ನೇತೃತ್ವದಲ್ಲಿ ಅರಸು ಮನೆ ತನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಜಾತ್ರೆಗೆ ಚಾಲನೆ

ಜಾತ್ರೆಗೆ ಚಾಲನೆ

  • Share this:
ಯಾದಗಿರಿ: ಆ ಜಾತ್ರೆಯಲ್ಲಿ ಯುವಕರ ಸಾಹಸ ಮೈ ರೋಮಾಂಚನ ಗೊಳಿಸುತ್ತೆ. 60 ಅಡಿ ಎತ್ತರದ ಕಂಬಗಳನ್ನು ಹತ್ತಿ ಕಂಬದ ಮಂಟಪದ ಮೇಲೆ ಕಟ್ಟಲಾದ ಬಾಳೆ ಹಣ್ಣುಗಳ ಹೋಳುಗಳನ್ನು ಹರಿಯಲು ಯುವಕರು ಕಂಬ ಏರುತ್ತಿದ್ದರೆ ಮತ್ತೊಂದು ಗುಂಪು ಏರುತ್ತಿರುವವರು ಮೇಲೆ ನೀರು ಸುರಿಸಿ ಏರದಂತೆ ಅಡ್ಡಿ ಪಡಿಸುತ್ತಾರೆ. ಇಷ್ಟಾದ್ರೂ ಕಂಬಗಳನ್ನು ಹತ್ತಿ (ಏರಿ) ಬಾಳೆ ಹಣ್ಣುಗಳ ಹೋಳು ಹರಿದು ಸಾಹಸ ಪ್ರದರ್ಶಿಸಲಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದ ವೇಣುಗೋಪಾಲಸ್ವಾಮಿಯ ಹಾಲೋಕಳಿ ಜಾತ್ರೆಯಲ್ಲಿ ಇಂತಹ ಸನ್ನಿವೇಶ ಕಂಡುಬರುತ್ತದೆ.

300 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಜಾತ್ರೆ

ಸುರಪುರ ಸಂಸ್ಥಾನದ  ರಾಜಮನೆತನದವರು 300 ವರ್ಷಗಳಿಂದ ಈ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಗೋ ಸಲ ವಂಶಸ್ಥ ಅರಸ ಮನೆತನದವರು ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥಾನದ ಅರಸು ರಾಜಾ ಕೃಷ್ಣಪ್ಪ ನಾಯಕ ಅವರ ನೇತೃತ್ವದಲ್ಲಿ ಅರಸು ಮನೆ ತನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ತಿರಪತಿಗೆ ಅರಸು ಪ್ರತಿನಿಧಿ ಮೂಲಕ ತಿರುಪತಿ ವೆಂಕಟೇಶ್ವರನಗಿ ಮೂಡುಪು ಸಲ್ಲಿಸಲಾಗುತ್ತದೆ.

ತಿರುಪತಿಗೆ ಮುಡಿಪು ಸಲ್ಲಿಕೆ

ಅರಸು ಕೃಷ್ಣಪ್ಪ ನಾಯಕ ಅವರು ತಮ್ಮ ದರ್ಬಾರ್ ಹಾಲ್ ನಿಂದ ಹೊರಗಡೆ ಭಾಜಾ ಭಜಂತ್ರಿ ಮೇರವಣಿಗೆಯೊಂದಿಗೆ ಮುಡುಪನ್ನು ಅರಸು ಪ್ರತಿನಿಧಿ ಮೂಲಕ ತಿರುಪತಿಗೆ ಕಳುಹಿಸುತ್ತಾರೆ. ಮುಡುಪು ದೇವರಿಗೆ ಸಲ್ಲಿಸಿದ ನಂತರ ನಂತರ  ಅರಸು ಮನೆತನದವರು ಹಾಗೂ  ವತನದಾರರು ಅರಸು ಮನೆತನದ ದರ್ಬಾರ್ ಹಾಲ್ ನಿಂದ ದೇವಸ್ಥಾನಕ್ಕೆ ಮೇರವಣಿಗೆ ಮೂಲಕ ಆಗಮಿಸಿ ದೇವರಿಗೆ ಪೂಜಿಸುತ್ತಾರೆ.

ಇದನ್ನೂ ಓದಿ: Hindu-Muslim: ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ! ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಗದಗ

ನಾಣ್ಯ ತೂರಿ ಜಾತ್ರೆಗೆ ಚಾಲನೆ

ಸಂಸ್ಥಾನದ ಅರಸು ರಾಜಾಕೃಷ್ಣಪ್ಪ ನಾಯಕ ಹಾಗೂ ಅರಸು ಮನೆತನದವರು ರಾಜಾಪೋಷಾಕಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಸಂಸ್ಥಾನದ ಅರಸು ರಾಜಾಕೃಷ್ಣಪ್ಪ ನಾಯಕ ಅವರು ನಾಣ್ಯಗಳನ್ನು ಜನರತ್ತ ತೂರುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಾರೆ. ನಂತರ 60 ಅಡಿ ಎತ್ತರದ 5 ದೇವರಗಂಬಗಳಿಗೆ ಅರದಾಳ (ಜಾರುವ ಪದಾರ್ಥ) ಬೆಣ್ಣೆ ಸವರಲಾಗಿದ್ದ ಕಂಬಗಳನ್ನು ಹತ್ತಿ, ಮಂಟಪದ ಮೇಲೆ ಕಟ್ಟಲಾದ ಬಾಳೆಹಣ್ಣು ಹೋಳುಗಳನ್ನು ಕಿತ್ತೆಸೆಯುವ ಸಾಹಸಮಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತವೆ.

ಕಂಬ ಹತ್ತಿ ಯುವಕರ ಸಾಹಸ

ನಿರ್ದಿಷ್ಟ ಗ್ರಾಮದ ಜನರಿಗೆ ಮಾತ್ರ ಸ್ತಂಭಾರೋಹಣ ಮಾಡಲು ಅವಕಾಶವಿರುವ ಈ ಸಾಹಸಮಯ ಜಾತ್ರೆಗೆ, ಅವರು ಭಾಜಾ ಭಜಂತ್ರಿಗಳ ಮೂಲಕ ಬಣ್ಣದ ನೀರಿನ ಪಿಚಕಾರಿಯಿಂದ ಜನರಿಗೆ ನೀರು ಚಿಮ್ಮಿಸುತ್ತಾ ದೇವಸ್ಥಾನದ ದೇವರಗಂಬಗಳ ಬಳಿ ಸೇರುತ್ತಾರೆ. ನಿರ್ದಿಷ್ಟಪಡಿಸಿದ ಯುವಕರು 60 ಅಡಿ ಎತ್ತರದ ಬೃಹತ್ ಕಂಬ ಹತ್ತಿ ಇಳಿಬಿಟ್ಟ ಹಣ್ಣು ಹೋಳುಗಳನ್ನು ಹರಿಯುವುದು ಸಾಹಸವಾದ್ರೆ, ಅದನ್ನು ಹರಿಯಲು ಬಿಡದಂತೆ ಕೆಳಗಿನಿಂದ ಪಿಚಕಾರಿಯಿಂದ ನೀರು ಚಿಮ್ಮಿಸುತ್ತಿದ್ದರೆ, ಮೇಲಿನಿಂದ ಬಾಳೆ ಹಣ್ಣು, ಎಣ್ಣೆ ಮಿಶ್ರಿತ ನೀರು ಸುರಿದು ಕಂಬ ಹತ್ತಲು ಅಡಚಣೆ ಮಾಡಲಾಗುತ್ತದೆ. ಸಾಹಸ ತೋರುವ ಯುವಕರು ಕೊನೆಗೂ ಹೋಳು ಹರಿದು ಕಿತ್ತೆಸೆಯುವ ದೃಶ್ಯವಂತೂ ನೋಡುಗರಿಗೆ ರೋಮಾಂಚನಗೊಳಿಸುತ್ತದೆ.

ಕಂಬ ಹತ್ತಿ ಯುವಕರ ಸಾಹಸ

ಸ್ತಂಭಾರೋಹಣ ಸಂಭ್ರಮದ ನಂತರ ವೇಣುಗೋಪಾಲ ಸ್ವಾಮಿಯ ಪಲ್ಲಕ್ಕಿ ಉತ್ಸವ  ನಡೆಸಲಾಗುತ್ತದೆ.ಸುರಪುರ ಸಂಸ್ಥಾನದಲ್ಲಿ  1687 ರಲ್ಲಿ ಅಧಿಕಾರಕ್ಕೆ ಬಂದ ಪಿತಾಂಬರ ಬಹರಿ ಪಿಡ್ಡನಾಯಕ್ ಈ ವೇಣುಗೋಪಾಲ ದೇವಸ್ಥಾನವನ್ನು 1712ರ ಅವಧಿಯಲ್ಲಿ ನಿರ್ಮಿಸಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಅರಸು ಮನೆತನದವರು ವೇಣುಗೋಪಾಲ ಸ್ವಾಮಿಯ ಜಾತ್ರೆ ಹಾಗೂ ವಿವಿಧ ಸಂಸ್ಕೃತಿ  ಕಾರ್ಯಕ್ರಮವನ್ನು ಉಳಿಸಿಕೊಂಡು ಸಂಪ್ರದಾಯ ಪಾಲನೆ ಮಾಡುತ್ತಿದ್ದು ಹೆಮ್ಮೆಯ ಸಂಗತಿಯಾಗಿದೆ.

ಇದನ್ನೂ ಓದಿ: Bannerghatta park: ಬನ್ನೇರುಘಟ್ಟ ಪಾರ್ಕ್​ನಲ್ಲಿ ಹೊಸ ಮೈಲಿಗಲ್ಲು, ಒಂದೇ ದಿನ ಅರ್ಧ ಕೋಟಿ ಹಣ ಸಂಗ್ರಹ!

ಜಾತ್ರೆಯಲ್ಲಿ ಘಟಾನುಘಟಿಗಳು ಭಾಗಿ

ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕರು ರಾಜಾಪೋಷಾಕಿನ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಜಾತ್ರೆಯಲ್ಲಿ ಭಾಗಿಯಾದರು. ಶಾಸಕ ರಾಜುಗೌಡ ಅವರು ಕೂಡ ಜಾತ್ರೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
Published by:Annappa Achari
First published: