ಹೆಗಲ ಮೇಲೆ ಬೈಕ್ ಹೊತ್ತು ಪ್ರವಾಹ ದಾಟಿದ ಯುವಕ; ಕಾರಣವೇನು ಗೊತ್ತಾ?

ಅಲಮೇಲ ತಾಲೂಕಿನ ತಾರಾಪುರದಲ್ಲಿ ಉಕ್ಕೇರಿದ ಭೀಮಾ ನದಿಯನ್ನು ಬೈಕ್ ಓಡಿಸಿಕೊಂಡು ದಾಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೈಕನ್ನ ಹೆಗಲಿಗೇ ಏರಿಸಿಕೊಂಡು ಈ ಯುವಕ ರಸ್ತೆ ದಾಟಿದ ದೃಶ್ಯ ಈಗ ವೈರಲ್ ಆಗಿದೆ.

news18
Updated:September 13, 2019, 5:32 PM IST
ಹೆಗಲ ಮೇಲೆ ಬೈಕ್ ಹೊತ್ತು ಪ್ರವಾಹ ದಾಟಿದ ಯುವಕ; ಕಾರಣವೇನು ಗೊತ್ತಾ?
ಹೆಗಲ ಮೇಲೆ ಬೈಕ್ ಹೊತ್ತು ಭೀಮಾ ನದಿ ದಾಟುತ್ತಿರುವ ಯುವಕ
  • News18
  • Last Updated: September 13, 2019, 5:32 PM IST
  • Share this:
ವಿಜಯಪುರ(ಸೆ. 13): ಯುವಕನೊಬ್ಬ ಹೆಗಲ ಮೇಲೆ ಬೈಕ್ ಹೊತ್ತುಕೊಂಡು ನೀರನ್ನು ದಾಟಿದ ವಿಡಿಯೋ ಈಗ ವೈರಲ್ ಆಗಿದೆ. ಬಸವನಾಡು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಈಗ ಚರ್ಚೆಗೆ ಗ್ರಾಸ ಒದಗಿಸಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೀಮಾ ನದಿಗೆ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾರಾಪುರ ಗ್ರಾಮವನ್ನು ಈ ನೀರು ಸುತ್ತುವರೆದಿದೆ. ಪರಿಣಾಮ, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ಹೇಳಿದ ಕೆಲಸ ಮಾಡಿಕೊಡುತ್ತಿಲ್ಲ; ಕೋರ್ಟ್​ನಲ್ಲೂ ಇತ್ಯರ್ಥವಾಗುತ್ತಿಲ್ಲ: ಸಿಎಂ ಬಗ್ಗೆ ಅಸಮಾಧಾನಗೊಂಡಿರುವ ಅನರ್ಹ ಶಾಸಕರಿಂದ ಸಭೆ

ಯುವಕನೊಬ್ಬ ತನ್ನ ಕೆಲಸಕ್ಕಾಗಿ ಆಲಮೇಲ ಕಡೆಗೆ ಹೋಗಬೇಕಾಗಿತ್ತು. ಬೈಕ್ ತೆಗೆದುಕೊಂಡು ಬಂದು ನೋಡಿದಾಗ ರಸ್ತೆಯಲ್ಲಿ ನೀರು ತುಂಬಿದೆ. ಆಗ ಬೇರೆ ದಾರಿ ಕಾಣದೇ ತನ್ನ ಹೆಗಲ ಮೇಲೆ ಬೈಕನ್ನೇ ಹೊತ್ತುಕೊಂಡು ನೀರು ನದಿ ನೀರು ದಾಟಿದ್ದಾನೆ. ಈ ಮೂಲಕ ಸುರಕ್ಷಿತವಾಗಿ ನೀರು ಇಲ್ಲದ ರಸ್ತೆಯನ್ನು ತಲುಪಿ ತನ್ನ ಕೆಲಸಕ್ಕೆ ತೆರಳಿದ್ದಾನೆ.

ಎದೆ ಮಟ್ಟದವರೆಗಿನ ನೀರಿನಲ್ಲಿ ನಡೆದುಕೊಂಡು ಹೋಗುವುದೇ ಕಷ್ಟವಾಗಿರುವ ಈ ರಸ್ತೆಯಲ್ಲಿ ನಾಗಯ್ಯ ಮಠಪತಿ ಎಂಬ ಈ ಯುವಕ ತನ್ನ ಹೆಗಲ ಮೇಲೆ ತನ್ನ ಬೈಕ್‌ನ್ನು ಹೊತ್ತುಕೊಂಡು ನೀರು ದಾಟಿರುವುದು ಈತನ ಧೈರ್ಯ ಮತ್ತು ಹುಂಬತನಕ್ಕೆ ಸಾಕ್ಷಿಯಾಗಿದೆ. ಈ ಯುವಕ ಬೈಕ್ ಹೊತ್ತುಕೊಂಡು ನದಿ ನೀರು ದಾಟುತ್ತಿರುವುದನ್ನು ಗಮನಿಸಿದ ತಾರಾಪುರ ಗ್ರಾಮದ ಯುವಕರು, ಈ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಇದೇ ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ: ನನ್ನ ಹೃದಯದಲ್ಲಿದ್ದ ಸಿದ್ದರಾಮಯ್ಯರನ್ನು ಕಿತ್ತು ಪಕ್ಕಕ್ಕೆ ಎಸೆದಿದ್ದೇನೆ; ಎಂಟಿಬಿ ನಾಗರಾಜ್

ಪ್ರತಿ ಬಾರಿ ಭೀಮಾ ನದಿಗೆ ಹೆಚ್ಚಿಗೆ ನೀರು ಬಂದರೆ ತಾರಾಪುರ ಗ್ರಾಮ ನಡುಗಡ್ಡೆಯಾಗಿ ಮಾರ್ಪಡುತ್ತಿದೆ. ಈ ಗ್ರಾಮದ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದ್ದರೂ, ಸ್ಥಳಾಂತರ ಮಾತ್ರ ಆಗಿಲ್ಲ. ಈ ಕುರಿತು ವಿಜಯಪುರ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳುವಂತೆ ತಾರಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.(ವರದಿ: ಮಹೇಶ ವಿ. ಶಟಗಾರ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading