news18-kannada Updated:December 6, 2020, 8:27 PM IST
ರಘು ಗೌಡ
ಹಾಸನ: ನಗರದ ಅರಳಿಕಟ್ಟೆ ವೃತ್ತದ ಬಳಿ ನಾಲ್ಕೈದು ಜನರ ಗುಂಪೊಂದು ಯುವಕನ ಮೇಲೆ ಮಚ್ಚು ಮತ್ತು ಲಾಂಗ್ ನಿಂದ ದೇಹದ ನಾನಾ ಕಡೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಹಲ್ಲೆಗೊಳಗಾದ ಯುವಕ ರಘುಗೌಡ ಮೃತಪಟ್ಟಿದ್ದು, ರೌಡಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶನಿವಾರ ನಡೆದ ಕರ್ನಾಟಕ ಬಂದ್ಗೆ ಹಾಸನದಲ್ಲೂ ಕೂಡ ವ್ಯಾಪಕ ಬೆಂಬಲ ದೊರಕಿತ್ತು. ಇದಾಗಿ ಸಂಜೆ 6 ಗಂಟೆಯ ನಂತರ ಎಲ್ಲಾ ಅಂಗಡಿ ಮುಗ್ಗಟ್ಟುಗಳ ಬಾಗಿಲು ತೆರೆದವು.
ಬಂದ್ ಬಳಿಕ ಜನ ಜೀವನ ಸಹಜ ರೂಪಕ್ಕೆ ಬರುತ್ತಿದ್ದಂತೆ ನಗರದ ಅರಳಿಕಟ್ಟೆ ರಘು ಗೌಡ 26 ವರ್ಷ ಎಂಬುವನ ಯುವಕರ ತಂಡವೊಂದು ಎರಗಿತ್ತು. ಮೊದಲೇ ರೂಪಿಸಿದ್ದ ಪ್ಲ್ಯಾನ್ನಂತೆ ಆಗಮಿಸಿದ ನಾಲ್ಕೈದು ಜನ ಯುವಕರ ಗುಂಪೊಂದು ಮಚ್ಚು ಮತ್ತು ಲಾಂಗ್ ಮೂಲಕ ಮಾರಾಣಂತಿಕ ಹಲ್ಲೆ ನಡೆಸಿದ್ದರು.
ತೀವ್ರ ಹಲ್ಲೆಗೆ ಒಳಗಾದ ರಘು ಗೌಡನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಆತನ ಕುತ್ತಿಗೆಗೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಗಂಭೀರವಾದ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸ್ಥಳಕೆ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ಘಟನೆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ನ್ಯೂಜಿಲೆಂಡ್ ಕ್ರಿಕೆಟಿಗ: ಅಮೆರಿಕ ಪರ ಹೊಸ ಇನಿಂಗ್ಸ್
Published by:
zahir
First published:
December 6, 2020, 8:24 PM IST