ಭಜರಂಗದಳದ ಕಾರ್ಯಕರ್ತನ (Bhajaranagadala Activist) ಹತ್ಯೆಗೆ ಯತ್ನ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ (Sagar, Shivamogga) ಬಿ.ಎಚ್.ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿ ಮಚ್ಚು ಬೀಸಿ ಕಾರ್ಯಕರ್ತನ ಕೊಲೆಗೆ ಸಂಚು ರೂಪಿಸಿದ್ದನು. ಕೂದಲೆಳೆ ಅಂತರದಲ್ಲಿ ಭಜರಂಗದಳದ ಕಾರ್ಯಕರ್ತ ಪಾರಾಗಿದ್ದಾರೆ. ಸುನಿಲ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಆರೋಪಿಯನ್ನು 24 ವರ್ಷದ ಸಮೀರ್ ಎಂದು ಗುರುತಿಸಲಾಗಿದೆ. ಸುನಿಲ್ ಮತ್ತು ಸಮೀರ್ ಇಬ್ಬರು ಸಾಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಜುಪಿಟರ್ ಬೈಕ್ನಲ್ಲಿ ಬಂದು ಮಚ್ಚು ಬೀಸಲಾಗಿದೆ. ಈ ಎಲ್ಲಾ ದೃಶ್ಯಗಳು ಹೋಟೆಲ್ವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿವೆ. ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯ ಮಾದರಿಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಸಮೀರ್ನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.
ಶಿವಮೊಗ್ಗದಲ್ಲಿ ಬೃಹತ್ ಶೌರ್ಯ
ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತರಿಂದ ಬೃಹತ್ ಶೌರ್ಯ ಯಾತ್ರೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ VHP ಸಂಘಟನಾ ಕಾರ್ಯದರ್ಶಿ ಬಸವರಾಜ್, ಮುಸಲ್ಮಾನರು ಈ ದೇಶವನ್ನು ಮಾತ್ರ ಲೂಟಿ ಮಾಡಲಿಲ್ಲ. ಬಾಬರ್ನಂತವರು ದೇಶದ ಶ್ರದ್ಧಾ ಕೇಂದ್ರಗಳು, ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದ್ರು.
ಇದನ್ನೂ ಓದಿ: Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಆಟೋ, ಬೈಕ್ಗಳಿಗೆ ನೋ ಎಂಟ್ರಿ
ದೇಶ, ಮಂದಿರ, ಸಂಸ್ಕೃತಿ ರಕ್ಷಣೆಗೆ ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ಮತಾಂತರ ತಡೆ, ಗೋ ರಕ್ಷಣೆ, ಸಂಸ್ಕೃತಿ ರಕ್ಷಣೆಗೆ ಬಜರಂಗದಳದ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ.
ಮತ್ತೆ ‘ಹಿಜಾಬ್’ ವಿವಾದ ಶುರು!
ಶಾಲಾ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ಹುಟ್ಟಿಕೊಂಡಿರುವ ಚರ್ಚೆ, ವಿವಾದ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್- ಕರ್ನಾಟಕ ಹಿಜಾಬ್ಗೆ ಸಂಬಂಧಿಸಿದಂತೆ ಒಂದು ವರದಿ ಬಿಡುಗಡೆ ಮಾಡಲು ಮುಂದಾಗಿದೆ. ಮುಸ್ಲಿಂ ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆ ಎಂಬ ಶೀರ್ಷಿಕೆಯ ವರದಿಯನ್ನು ನಾಳೆ ಬಿಡುಗಡೆ ಮಾಡಲಾಗುತ್ತಿದೆ.
ಪೂಜಾ ಸಾಮಗ್ರಿ ಗೋಡೌನ್ ಧಗಧಗ
ಬೆಂಗಳೂರಿನ ಬಸವನಗುಡಿಯಲ್ಲಿ (Basavanagudi, Bengaluru) ಪೂಜಾ ಸಾಮಗ್ರಿ ಗೋಡೌನ್ಗೆ ಬೆಂಕಿ ಬಿದ್ದಿದೆ. ಸತೀಶ್ ಸ್ಟೋರ್ ಎಂಬ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕರ್ಪೂರ, ಊದಿನ ಕಡ್ಡಿ, ದೀಪದ ಎಣ್ಣೆ ಮತ್ತು ಇತರೆ ಪೂಜಾ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ ಮುತಾಲಿಕ್ ಗುಡುಗು
ಬೆಳಗಾವಿಯ ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ (Pramod Mutalik), ಮುಸ್ಲಿಮರು, ಕ್ರೈಸ್ತರು, ಕಮ್ಯುನಿಸ್ಟರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ಬಳಿಕ ದೇಶ ಉಳಿಸಿ ಅಂತ ಘೋಷಣೆ ಕೂಗೋ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ.
ಮೂರು ದುಷ್ಟ ಶಕ್ತಿಗಳು ಈ ದೇಶದಲ್ಲಿ ಕೆಲಸ ಮಾಡ್ತೀವೆ. ಒಂದು ಇಸ್ಲಾಂ, 2ನೇಯದು ಕ್ರಿಶ್ಚಿಯನ್ರು, 3ನೇಯದು ಕಮ್ಯುನಿಸ್ಟರು ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಇಸ್ಲಾಂ, ಕ್ರಿಶ್ಚಿಯನ್, ಕಮ್ಯುನಿಸ್ಟರ ವಿರುದ್ಧ ದೇಶ ಉಳಿಸಬೇಕಿದೆ. ಹತ್ತಿಕ್ಕಿ ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕಿದೆ ಎಂದಿದ್ದಾರೆ ಮುತಾಲಿಕ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ