Sullia: ಅನ್ಯಕೋಮಿನ ವಿದ್ಯಾರ್ಥಿನಿ ಜೊತೆ ಸಲುಗೆಯಿಂದ ಮಾತು; ಯುವಕನ ಮೇಲೆ ಗಂಭೀರ ಹಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆಯಾಗಿದ್ದ ಇಂಥಹ  ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಹೆಚ್ಚಾಗುತ್ತಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಇದೇ ವಿಚಾರವಾಗಿ ಹಲವು ಬಾರಿ ಕೋಮು ಸಂಷರ್ಷಗಳು ನಡೆದಿದೆ.

ಸುಳ್ಯ ಪೊಲೀಸ್ ಠಾಣೆ

ಸುಳ್ಯ ಪೊಲೀಸ್ ಠಾಣೆ

  • Share this:
ಅನ್ಯಕೋಮಿನ ವಿದ್ಯಾರ್ಥಿಗಳು (Students) ನಿರ್ಜನ ಪ್ರದೇಶದಲ್ಲಿ ಇದ್ದರು ಎನ್ನುವ ಆರೋಪದ ಮೇಲೆ ವಿದ್ಯಾರ್ಥಿಯ ಮೇಲೆ ವಿದ್ಯಾರ್ಥಿಗಳ ತಂಡವೊಂದು (Student Group) ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ (Sullia, Dakshina Kannada) ನಗರ ಭಾಗದ ಕೊಡಿಯಾಲ ಬೈಲು ಸರಾಸರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (Government PU College) ನಡೆದಿದೆ. ಇದೀಗ ಪ್ರಕರಣ‌ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವಿದ್ಯಾರ್ಥಿ ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಏಳು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ (Complaint Filed) ದಾಖಲಾಗಿದೆ. ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿಯಾದ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ನಿವಾಸಿ ಲತೀಫ್ ಎನ್ನುವವರ ಪುತ್ರ ಮಹಮ್ಮದ್ ಸನೀಫ್ (19) ಹಲ್ಲೆಗೊಳಗಾದ ವಿದ್ಯಾರ್ಥಿ.

ಸನೀಫ್ ತನ್ನದೇ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯೋರ್ವಳ ಜೊತೆ ಸಲುಗೆಯಿಂದ ಇದ್ದಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳ ತಂಡ ಸನೀಫ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದೆ.

ಯಾರ ವಿರುದ್ಧ ದೂರು ದಾಖಲು?

ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ಪ್ರಜ್ವಲ್, ದೀಕ್ಷಿತ್, ತನುಜ್,ಧನುಷ್, ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಅಕ್ಷಯ್, ಅಂತಿಮ ವರ್ಷದ ವಿದ್ಯಾರ್ಥಿ ಮೋಕ್ಷಿತ್ ಹಾಗು ಸುಳ್ಯದ ಎನ್.ಎಂ.ಸಿ ಕಾಲೇಜು ವಿದ್ಯಾರ್ಥಿ ಗೌತಮ್ ವಿರುದ್ಧ ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆಯಾಗಿದ್ದ ಇಂಥಹ  ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಹೆಚ್ಚಾಗುತ್ತಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಇದೇ ವಿಚಾರವಾಗಿ ಹಲವು ಬಾರಿ ಕೋಮು ಸಂಷರ್ಷಗಳು ನಡೆದಿದೆ.

ಇದನ್ನೂ ಓದಿ: Chikkamagaluru: ಒಬ್ಬಳನ್ನೇ ಮದುವೆಯಾದ ಇಬ್ಬರು, ಪತ್ನಿಗಾಗಿ ಗಂಡಂದಿರ ಫೈಟ್, ಕಿಡ್ನಾಪ್ ವೇಳೆ ತಗ್ಲಾಕೊಂಡ 2ನೇ ಪತಿ!

ಜಿಲ್ಲೆಯಲ್ಲಿ ಮತ್ತೆ ಆತಂಕದ ವಾತಾವರಣ

ಈ ವಿಚಾರದ ಬಗ್ಗೆ ಮಾಹಿತಿಯಿದ್ದರೂ ಮತ್ತೆ ಮತ್ತೆ ಜಿಲ್ಲೆಯಲ್ಲಿ ಈ ವಿಚಾರವಾಗಿ ಅಶಾಂತಿ ಉಂಟು ಮಾಡುವ ಘಟನೆಗಳು ನಡೆಯುತ್ತಿರುವುದು ಜಿಲ್ಲೆಯ ಜನತೆಯ ಆತಂಕಕ್ಕೂ ಕಾರಣವಾಗಿದೆ.

ಮುಖ್ಯವಾಗಿ ಹಿಂದೂಪರ ಸಂಘಟನೆಗಳು ಇಂಥಹ ಘಟನೆಗಳು ಹಾಗು ವಿದ್ಯಾಮಾನಗಳು ಲವ್ ಜಿಹಾದ್ ನ ಒಂದು ಭಾಗ ಎಂದು ಆರೋಪಿಸುತ್ತಿದ್ದು, ಇಂಥಹ ಯಾವುದೇ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.

ಹಿಂದೂ ಸಂಘಟನೆಗಳು ನಡೆ ಏನು?

ಆದರೆ ಇಂಥಹ ಘಟನೆಗಳು ಬೆಳಕಿಗೆ ಬಂದಲ್ಲಿ ಕಾನೂನು ಮೀರಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಂಘಟನೆಗೆ ಸೇರಿದ ಮುಖಂಡರು ಬಹಿರಂಗವಾಗಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಂಘಟನೆಗಳೂ ಈವರೆಗೆ ಯಾವುದೇ ಅಭಿಪ್ರಾಯಗಳನ್ನು ನೀಡಿಲ್ಲ ಮತ್ತು ವಿದ್ಯಾರ್ಥಿಗಳ ನಡುವಿನ ಜಗಳಕ್ಕೆ ಮಧ್ಯ ಪ್ರವೇಶಿಸುವುದಿಲ್ಲ ಎನ್ನುವ ಅಭಿಪ್ರಾಯವನ್ನೂ ಈಗಾಗಲೇ ರವಾನಿಸಿದೆ.

ಪುತ್ತೂರಿನಲ್ಲಿಯೂ ನಡೆದಿತ್ತು ಇದೇ ರೀತಿಯ ಘಟನೆ

ಇದೇ ರೀತಿಯ ಘಟನೆ ವಾರದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿದ್ದು, ಬರ್ತ್ ಡೇ ಪಾರ್ಟಿಗಾಗಿ ಹೋಟೆಲ್ ಗೆ ಬಂದಿದ್ದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ತಂಡವೊಂದು ತಡೆದು,ಪಾರ್ಟಿ ಮಾಡದಂತೆ ತಾಕೀತು ಮಾಡಿದೆ.

ಬಳಿಕ ಪೋಲೀಸರ ಮಧ್ಯಪ್ರವೇಶದಿಂದ ಪ್ರಕರಣವನ್ನು ಮುಗಿಸಲಾಗಿದೆ. ಇದೀಗ ಸುಳ್ಯದಲ್ಲಿ ಈ ಘಟನೆ ನಡೆದಿರುವುದು ಜಿಲ್ಲೆಯ ಜನತೆಯಲ್ಲಿ ಅಸಮಾಧಾನ ಮತ್ತು ಆತಂಕವನ್ನೂ ಮೂಡಿಸಿದೆ.

ಇದನ್ನೂ ಓದಿ: Idgah Maidan: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

Tumakuru: ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಬಾಲಕನ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಶಿಕ್ಷಕಿ!

ತುಮಕೂರು‌ ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೂರು ವರ್ಷ ಬಾಲಕ ಚಡ್ಡಿಯಲ್ಲಿಯೇ ಪದೇ ಪದೇ ಮೂತ್ರ ಮಾಡಿಕೊಳ್ಳುತ್ತಿದ್ದನು. ಇದರಿಂದ ಶಿಕ್ಷಕಿ ಬಾಲಕನ ಖಾಸಗಿ ಭಾಗಕ್ಕೆ ಬೆಂಕಿ ಇಟ್ಟಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ನನಗೂ ಮಕ್ಕಳಿದ್ದಾರೆ. ನಾನು ಈ ರೀತಿ ಮಾಡುವಳಲ್ಲ. ಮಗು ಮತ್ತೊಮ್ಮೆ ಚಡ್ಡಿಯಲ್ಲಿ ಮೂತ್ರ ಮಾಡದಿರಲಿ ಎಂದು ಈ ರೀತಿ ಮಾಡಲು ಹೋದೆ ಎಂದು ಹೇಳಿ ಬಾಲಕನ ಪೋಷಕರ ಬಳಿ ಶಿಕ್ಷಕಿ ಕ್ಷಮೆ ಕೇಳಿದ್ದಾರಂತೆ.
Published by:Mahmadrafik K
First published: