Hassan Crime: ಮಗಳನ್ನು ಚುಡಾಯಿಸಬೇಡಿ ಎಂದು ಬುದ್ದಿ ಹೇಳಿದ ತಂದೆ ಮೇಲೆ ಹಲ್ಲೆ

ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದು, ಸಾವು ಬದುಕಿನ ಒದ್ದಾಟ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಾಸನ (ಸೆ. 18): ಮಗಳನ್ನು ಚುಡಾಯಿಸುತ್ತಾ (Teasing ) ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಕಿಡಿಗೇಡಿಗಳಿಗೆ ತಂದೆಯೋರ್ವ ಎಚ್ಚರಿಕೆ ನೀಡಿದ್ದಾರೆ. ಇದೇ ಸಿಟ್ಟನ್ನು ಮನಸಿನಲ್ಲಿಟ್ಟುಕೊಂಡಿದ್ದ ಕಿಡಿಗೇಡಿಗಳು ಅವರ ಬಾಲಕಿಯ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ (hassan Alur) ಜಯಂತಿನಗರದಲ್ಲಿ ನಡೆದಿದೆ. ಪ್ರದೀಪ್​ ಎಂಬ ವ್ಯಕ್ತಿ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದು, ಸಾವು ಬದುಕಿನ ಒದ್ದಾಟ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿದ್ದಾರೆ.

    ಏನಿದು ಘಟನೆ
    ಪ್ರದೀಪ್​ ಎಂಬುವವರ ಮಗಳಿಗೆ ಕಳೆದ ಒಂದು ತಿಂಗಳ ಹಿಂದೆ ಯುವಕನೊಬ್ಬ ಚುಡಾಯಿಸುತ್ತಿದ್ದ. ಈ ಘಟನೆ ತಿಳಿದಾಕ್ಷಣ ಪ್ರದೀಪ್​ ಮಗಳನ್ನು ರೇಗಿಸುತ್ತಿದ್ದ ಹುಡುಗ ಅರ್ಜುನನಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ತಂದೆ ಪ್ರದೀಪ್​ ಮಾತಿನಿಂದ ಸಿಟ್ಟಿಗೆದ್ದಿದ್ದ ಅರ್ಜುನ್​ ಎಂಬ ಯುವಕ ಸ್ನೇಹಿತರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದರು. ತನ್ನ ಮೇಲೆ ಹಲ್ಲೆ ಮಾಡಿದ ಸಿಟ್ಟಿಗೆ ಪ್ರದೀಪ್ ಕೂಡ ಹಲ್ಲೆ ನಡೆಸಿ ಹೊಡೆದಾಡಿದ್ದರು. ಇವರ ಹೊಡೆದಾಟ ಪ್ರಕರಣ ಪೊಲೀಸ್​ ಮೆಟ್ಟಿಲು ಕೂಡ ಏರಿತ್ತು. ಈ ಸಂಬಂಧ ಎರಡು ಕಡೆಯವರು ಆಲೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೊಲೀಸರ ಎಚ್ಚರಿಕೆ ನಡುವೆ ಹಲ್ಲೆ
    ಈ ಪ್ರಕರಣ ಇತ್ಯರ್ಥ ನಡೆಸಿದ ಪೊಲೀಸರು ಎರಡು ಕಡೆಯವರಿಗೆ ಎಚ್ಚರಿಕೆ ನೀಡಿ ಪರಸ್ಪರ ಮುಚ್ಚಳಿಕೆ ಬರೆಸಿಕೊಂಡು ಯಾರು ಯಾರ ತಂಟೆಗೂ ಹೋಗದಂತೆ ತಿಳಿ ಹೇಳಿ ಕಳುಹಿಸಿದ್ದರು.

    ಇದನ್ನು ಓದಿ: ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಗೆ ಸಿಕ್ತು ಸಾವಿಗೆ ಮುನ್ನ ಮಧುಸಾಗರ್​ ಬರೆದಿದ್ದ ಡೈರಿ

    ಹಲ್ಲೆಗೆ ಯೋಜನೆ ರೂಪಿಸಿದ್ದ ಯುವಕ
    ಪೊಲೀಸರ ಎಚ್ಚರಿಕೆ ನಡುವೆಯೂ ಅರ್ಜುನ ಮಾತ್ರ ಯುವತಿ ತಂದೆ ಪ್ರದೀಪನ ಮೇಲೆ ಹಗೆ ಸಾಧಿಸುತ್ತಿದ್ದ. ಆತನಿಗೆ ಸರಿಯಾಗಿ ಶಿಕ್ಷೆ ನೀಡಬೇಕು ಎಂದು ಕಾಯುತ್ತಿದ್ದ. ಇದೇ ಕಾರಣಕ್ಕೆ ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸುವ ಯೋಜನೆ ರೂಪಿಸಿದ್ದ.
    ಶುಕ್ರವಾರ ರಾತ್ರಿ ಸುಮಾರು 10. 30ರ ಸುಮಾರಿಗೆ ಯುವತಿ ತಂದೆ ಪ್ರದೀಪ ಕಾರಿನಲ್ಲಿ ಹೋಗುತ್ತಿದ್ದರು. ಈ ವಿಚಾರ ತಿಳಿದ ಅರ್ಜುನ ಆತನ ಸ್ನೇಹಿತ ಕಾರ್ತಿಕ್​​ ಜೊತೆ ಸೇರಿ ಹಲ್ಲೆ ನಡೆಸಿದ್ದಾನೆ.

    ಇದನ್ನು ಓದಿ: ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಮಂಗ; ಆಟೋಚಾಲಕನಿಗೆ ಮರೆಯಲಾಗದ ಪಾಠ

    ನಡು ರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ

    ನಡು ರಸ್ತೆಯಲ್ಲಿ ಕಾರು ಅಡ್ಡಗಟ್ಟಿದ ಯುವಕರು ಪ್ರದೀಪನ ಮೇಲೆ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಪ್ರದೀಪನ ತಲೆ, ಕುತ್ತಿಗೆ, ಕೈ, ಎದೆಗೆ ತೀವ್ರವಾಗಿ ಗಾಯವಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಆತನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿದ್ದು ಪ್ರಕರಣ ದಾಖಲಿಸಲಾಗಿದೆ. ಇನ್ನು ಹಲ್ಲೆ ನಡೆಸಿದ ಅರ್ಜುನನ ಸಂಬಂಧಿ ಕಾರ್ತಿಕ್​ ಎಂಬಾಂತ ಕಾರಗೋಡು ಗ್ರಾ.ಪಂ. ಸದಸ್ಯ ಎಂಬುದಾಗಿ ತಿಳಿದು ಬಂದಿದೆ.

    (ವರದಿ: ಶಶಿಧರ್)​​
    Published by:Seema R
    First published: