ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ (Bhajarangadala) ಸುನಿಲ್ ಹತ್ಯೆಗೆ ನಿನ್ನೆ (ಜನವರಿ 9, 2023) ಯತ್ನ ನಡೆದಿತ್ತು. ಈ ಸಂಬಂಧ ಇಂದು ಸಾಗರ ಬಂದ್ಗೆ (Sagar Bandh) ಹಿಂದೂ ಸಂಘಟನೆಗಳು ಕರೆ ನೀಡಿದ್ದವು. ಬಂದ್ಗೆ ಬೆಂಬಲ ನೀಡಿದ್ದ ಬಹುತೇಕರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟಗಳನ್ನು ಬಂದ್ ಮಾಡಿದ್ದಾರೆ. ಆದರೆ ಆಜಾದ್ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ (Fish Market) ತೆರೆದಿತ್ತು. ಒತ್ತಡದ ಬಂದ್ಗೆ ಮುಸ್ಲಿಂ ವ್ಯಾಪಾರಿಗಳು (Muslim Vendors) ವಿರೋಧಿಸಿದ್ದರಿಂದ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಕಡೆ ಜೈ ಶ್ರೀರಾಮ, ಇನ್ನೊಂದೆಡೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಲಾಯ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಪೊಲೀಸರು ಮತ್ತು ಭಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಕೊನೆಗೆ ಪೊಲೀಸರ ಬಂದೋಬಸ್ತ್ನಲ್ಲಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಗೊಂಡಿದೆ.
ಇತ್ತ ಸುನಿಲ್ ಹತ್ಯೆಗೆ ಯತ್ನಿಸಿದ್ದ ಆರೋಪಿ ಸಮೀರ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಕೊಲೆ ಯತ್ನ ಸಂಬಂಧ ಸಾಗರ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಸಮೀರ್ ಜೊತೆ ಮತ್ತಿಬ್ಬರ ಬಂಧನ
ಸಾಗರದ ಸಮೀರ್ ಎ1 ಆರೋಪಿಯಾಗಿದ್ದು, ಫಾರುಕ್ ನಾಲ್ಕೈದು ಜನರ ವಿರುದ್ಧ ಐಪಿಸಿ ಸೆಕ್ಷನ್ 307, 149, 506, 504 ಅಡಿ ಕೇಸ್ ದಾಖಲು ಮಾಡಲಾಗಿತ್ತು. ಸಮೀರ್ ಜೊತೆಯಲ್ಲಿ ಇಮಿಯಾನ್ ಮತ್ತು ಮನ್ಸೂರ್ ಎಂಬವರನ್ನ ಬಂಧಿಸಲಾಗಿದೆ. ಕೊಲೆ ಯತ್ನದಲ್ಲಿ ಇವರಿಬ್ಬರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವೈಯಕ್ತಿಕ
ಸಾಗರದಲ್ಲಿ ನಡೆದಿರುವ ನಿನ್ನೆಯ ಘಟನೆ ವ್ಯಯಕ್ತಿಕವಾದದ್ದು, ಭಜರಂಗದಳ ಕಾರ್ಯಕರ್ತ ಸುನಿಲ್, ಸಮೀರ್ ಸಹೋದರಿಗೆ ಚುಡಾಯಿಸುತ್ತಿರುತ್ತಾನೆ. ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿರುತ್ತಾನೆ. ಸುನಿಲ್ಗೆ ಸಮೀರ್ ಈ ಸಂಬಂಧ ವಾರ್ನ್ ಮಾಡಿರುತ್ತಾನೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಸಮೀರ್ ತಂಗಿಯ ಫೋನ್ ನಂಬರ್ ಕೂಡ ಕೇಳಿರುತ್ತಾನೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಆಕ್ರೋಶಗೊಂಡಿರುತ್ತಾನೆ. ಎರಡ್ಮೂರು ಬಾರಿ ಸಮೀರ್ ಎಚ್ಚರಿಕೆ ಸಹ ನೀಡಿರುತ್ತಾನೆ. ನಿನ್ನೆ ಕೂಡ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಸುನಿಲ್ ಮತ್ತು ಸಮೀರ್ ಬಯ್ದಾಡಿಕೊಂಡಿದ್ದಾರೆ.
ಹುಲ್ಲು ಕತ್ತರಿಸುವ ಮಚ್ಚಿನಿಂದ ದಾಳಿಗೆ ಯತ್ನ
ಸಮೀರ್ ಮೇಕೆ ಮೇಯಿಸಲು ಹುಲ್ಲು ತರಲು ಹೊರಟಿರುತ್ತಾನೆ. ಈ ಸಂಬಂಧ ಮಚ್ಚು ಇಟ್ಟುಕೊಂಡಿರುತ್ತಾನೆ. ಇದೇ ಮಚ್ಚಿನಿಂದ ಸುನಿಲ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ರೀತಿಯ ವಿಚಾರಗಳಿದ್ದರೆ, ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಸ್ಪಿ ಹೇಳಿದರು.
ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ್, ಇಮಿಯಾನ್, ಮನ್ಸೂರ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಕ್ರಿಕೆಟ್ ಮ್ಯಾಚ್ ಮುಗಿಸಿ ಲಾಡ್ಜ್ ನಲ್ಲಿ ಉಳಿದಿರುತ್ತಾರೆ. ಅಲ್ಲಿ ಬರುವ ವ್ಯಕ್ತಿಯ ಜೊತೆ ಸಮೀರ್ ಮಾತನಾಡುತ್ತಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಸುನಿಲ್ ಕಾಲ್ ರೆಕಾರ್ಡ್
ಮೂವರನ್ನು ಬಂಧಿಸಲಾಗಿದ್ದು, ಮತ್ಯಾರು ಈ ಪ್ರಕರಣದಲ್ಲಿದಾರೆಂಬುದು ತನಿಖೆ ನಡೆಸಲಾಗುತ್ತಿದೆ. ಕ್ರಿಕೆಟ್ ಮ್ಯಾಚ್ (Cricket Match) ಬಳಿಕ ಇಮಿಯಾನ್ ಬುಕ್ ಮಾಡಿದ್ದ ರೂಂ ನಲ್ಲಿ ಉಳಿದಿರುತ್ತಾರೆ. ಸಮೀರ್ ಸಹೋದರಿಗೆ ಚುಡಾಯಿಸಿರುವ ಕಾಲ್ ರೆಕಾರ್ಡ್ಸ್ ನಮಗೆ ಸಿಕ್ಕಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಗರ ಬಂದ್ ಹಿನ್ನೆಲೆಯಲ್ಲಿ ಬಿಗಿ ಕ್ರಮ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ