Davanagere: ಅತ್ತಿಗೆ ಆಗಬೇಕಿದ್ದವಳ ಕಣ್ಣಾಕಿದ ತಮ್ಮನನ್ನೇ ಮುಗಿಸಿದ ಅಣ್ಣ: ಶಾಪಿಂಗ್ ಕರೆದೊಯ್ದು ಕೊಲೆ

ಅಂದು ಇಬ್ರಾಹಿಂ ಜೊತೆ ಅಲ್ತಾಫ್ ಶಾಪಿಂಗ್ ಹೋಗಿದ್ದನು. ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಇಬ್ರಾಹಿಂ ನಿರ್ಜಲ ಪ್ರದೇಶ ಬರುತ್ತಿದ್ದಂತೆ, ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಭಯಗೊಂಡ ಇಬ್ರಾಹಿಂ ಸ್ಥಳದಿಂದ ಕಾಲ್ಕಿತ್ತಿದ್ದನು.

ಸೋದರರು

ಸೋದರರು

  • Share this:
Davanagere Crime News: ಅತ್ತಿಗೆ ಆಗಬೇಕಿದ್ದವಳ ಮೇಲೆ ಕಣ್ಣಾಕಿದ ತಮ್ಮನನ್ನ ಅಣ್ಣನೇ (Brother) ಕೊಲೆ ಮಾಡಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯಲ್ಲಿ ನಡೆದಿದೆ. ಜನವರಿ 18ರಂದು ಶಾಪಿಂಗ್ ಗೆ ಹೋಗಿದ್ದವರ ಪೈಕಿ ಓರ್ವ ಕೊಲೆಯಾಗಿದ್ದ, ಮತ್ತೋರ್ವ ನಾಪತ್ತೆಯಾಗಿದ್ದನು. ಇದೀಗ ಪ್ರಕರಣವನ್ನು ಪೊಲೀಸರು (police) ಭೇದಿಸಿದ್ದಾರೆ. ಅಲ್ತಾಫ್ ಅಣ್ಣನಿಂದಲೇ ಕೊಲೆಯಾದ ತಮ್ಮ. ಕೊಲೆಗೈದ ಇಬ್ರಾಹಿಂ ಜೈಲು (Jail) ಸೇರಿದ್ದಾನೆ. ಹೌದು ಅಲ್ತಾಫ್ ಮತ್ತು ಇಬ್ರಾಹಿಂ ಇಬ್ಬರೂ ಅಕ್ಕ ತಂಗಿಯ ಮಕ್ಕಳು. ಸಂಬಂಧದಲ್ಲಿ ಇಬ್ಬರು ಅಣ್ತಮ್ಮಂದಿರು. ಹುಡುಗಿ ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಉಂಟಾದ ಮನಸ್ತಾಪದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಹರಿಹರ ಪಟ್ಟಣದ ನಿವಾಸಿ ಮೆಹೆಬೂಬ್ ಬಾಷಾ ಅವರ ಮಗ ಅಲ್ತಾಫ್ ನ ಶವ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದ ಬಳಿ ಪತ್ತೆಯಾಗಿತ್ತು. ಜನವರಿ 18ರಂದು ಅಣ್ಣನ ಜೊತೆ ಶಾಪಿಂಗ್ ಗೆ ಹೋಗಿದ್ದ ಅಲ್ತಾಫ್ ಶವ ಜನವರಿ 19ರಂದು ಶವ ಪತ್ತೆಯಾಗಿತ್ತು. ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಎಂದು ಗೊತ್ತಾಗಿತ್ತು.

ಅಂದು ನಡೆದಿದ್ದೇನು?

ಅಂದು ಇಬ್ರಾಹಿಂ ಜೊತೆ ಅಲ್ತಾಫ್ ಶಾಪಿಂಗ್ ಹೋಗಿದ್ದನು. ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಇಬ್ರಾಹಿಂ ನಿರ್ಜಲ ಪ್ರದೇಶ ಬರುತ್ತಿದ್ದಂತೆ, ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಭಯಗೊಂಡ ಇಬ್ರಾಹಿಂ ಸ್ಥಳದಿಂದ ಕಾಲ್ಕಿತ್ತಿದ್ದನು.

ಇದನ್ನೂ ಓದಿ: Belagavi Politics: ಸಚಿವ ಕತ್ತಿ ಟೀಂಗೆ ಇಂದು ಕೈಕೊಟ್ಟ ಬೆಳಗಾವಿ ಜಿಲ್ಲೆಯ ಹಲವು ಶಾಸಕರು; ಜಾರಕಿಹೊಳಿ ಸಹೋದರರ ವಿರುದ್ಧ ಸಿಎಂಗೆ ದೂರು

ಇಬ್ರಾಹಿಂಗೆ ಮಾರ್ಚ್ ತಿಂಗಳಲ್ಲಿ ಮದುವೆ ಫಿಕ್ಸ್ ಆಗಿತ್ತು. ಅದೇ ಹಿನ್ನೆಲೆ ಇಬ್ರಾಹಿಂ ಜವಳಿ ಖರೀದಿಗಾಗಿ ಅಲ್ತಾಫ್ ನನ್ನು ಕರೆದುಕೊಂಡು ಹೋಗಿದ್ದಳು. ಅತ್ತಿಗೆಯವಳಾದ ಮೇಲೆ ಕಣ್ಣಾಕಿದ ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ವರದಿಯಾಗಿದೆ. ಶಾಪಿಂಗ್ ಗೆ ಹೋದವರು ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಒಬ್ಬನ ಫೋನ್ ಸ್ಚಿಚ್ಛ್ ಆಫ್ ಆಗಿದ್ರೆ, ಮತ್ತೊಬ್ಬ ಕಾಲ್ ರಿಸೀವ್ ಮಾಡುತ್ತಿರಲಿಲ್ಲ.

ಈ ಸಂಬಂಧ ಅನುಮಾನಗೊಂಡ ಸೋದರಿಯರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ರಾಹಿಂನನ್ನು ಬಂಧಿಸಿದ್ದಾರೆ.

ದಾವಣಗೆರೆಯಲ್ಲಿ ಡಬಲ್ ಮರ್ಡರ್

ತಡರಾತ್ರಿ ಮನೆಗೆ ನುಗ್ಗಿ ಹಿರಿಯ ದಂಪತಿ(Old Couple)ಯನ್ನು ಕೊಲೆಗೈದಿರುವ ಘಟನೆ ದಾವಣೆಗೆರೆ ತಾಲೂಕಿನ ಎಲೆ ಬೇತೂರು (Ele Beturu, Davanagare) ಗ್ರಾಮದಲ್ಲಿ ನಡೆದಿದೆ. ಗುರುಸಿದ್ದಯ್ಯ (80) ಮತ್ತು ಸರೋಜಮ್ಮ (75) ಕೊಲೆಯಾದ ದಂಪತಿ. ಗುರುಸಿದ್ದಯ್ಯ ಮತ್ತು ಸರೋಜಮ್ಮ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು (Three Children), ಎಲ್ಲರಿಗೂ ಮದುವೆ (Marriage) ಮಾಡಿಕೊಡಲಾಗಿದೆ.

ಇದನ್ನೂ ಓದಿ:  Bengaluru: ಯಾರ್ ಯಾರಿಗೋ ನಂಬರ್ ಶೇರ್ ಮಾಡೋ ಮುನ್ನ ಹುಷಾರ್; Online Appಗಳಲ್ಲಿ ನಂಬರ್ ನೀಡುವ ಮುನ್ನ ಎಚ್ಚರ!

ಹೀಗಾಗಿ ಮನೆಯಲ್ಲಿ ದಂಪತಿ ಇಬ್ಬರೇ ವಾಸವಾಗಿದ್ದರು. ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗ್ಗೆ ನೆರೆಹೊರೆಯವರು ಮನೆಗೆ ಬಂದಾಗ ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಎಸ್ಪಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಾತ್ರಿ ಮನೆಗೆ ನುಗ್ಗಿದ ಹಂತಕರು ಕೊಲೆಗೈದು ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಚಿತ್ರದುರ್ಗದಲ್ಲಿ ತಂದೆಯನ್ನ ಕೊಂದ ಮಗ

ಚಿತ್ರದುರ್ಗದಲ್ಲಿ ಮಗನೇ ತಂದೆಯನ್ನ ಕೊಲೆ ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ಮಲ್ಲೂರಹಳ್ಳಿಯಲ್ಲಿ ನಡೆದಿದೆ. ಮಲ್ಲಯ್ಯ (70) ಮಗನಿಂದಲೆ ಕೊಲೆಯಾದ ವೃದ್ದ ತಂದೆ. ಲೋಕೇಶ್ ತಂದೆಯನ್ನ ಕೊಲೆ ಮಾಡಿದ ಆರೋಪಿ ಪಾಪಿ ಮಗ. ಆರೋಪಿ ಲೋಕೇಶ್ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದನು.

ಕಳ್ಳತನ ಮಾಡಬೇಡ ಅಂತ ಹೇಳಿದ್ದಕ್ಕೆ ತಂದೆಯನ್ನ ಜೋರಾಗಿ ತಳ್ಳಿದ್ದಾನೆ. ಇದರಿಂದ ಕೋಪಗೊಂಡ ಲೋಕೇಶ್ ತಂದೆಯನ್ನ ಜೋರಾಗಿ ತಳ್ಳಿದ ಪರಿಣಾಮ ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಾಯಕನಹಟ್ಟಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Published by:Mahmadrafik K
First published: